ಬಾಗಲಕೋಟೆ – ಶ್ರಾವಣ ಮಾಸವು ಆರಂಭಗೊಂಡಾಗ ನಮ್ಮ ನಾಡಿನಲ್ಲಿ ಹಬ್ಬಗಳಿಗೆ ಚಾಲನೆ ಸಿಕ್ಕಂತಾಗುತ್ತದೆ. ಒಂದೊಂದು ಹಬ್ಬಕ್ಕೂ ಅದರದೇ ಆದಂತ ಮಹತ್ವವಿದೆ. ಸಾಂಸ್ಕೃತಿಕವಾಗಿ ಈ ನಾಡಿನಲ್ಲಿ ಹಬ್ಬ. ಉತ್ಸವಗಳನ್ನು ಹಾಗೂ ವೈವಿಧ್ಯಮಯವಾದ ಪರಂಪರೆಗಳನ್ನು ಈ ನಾಡಿನಲ್ಲಿ ನಾವೆಲ್ಲ ಕಾಣುತ್ತೇವೆ. ನಮ್ಮ ನಾಡು ಸಾಂಸ್ಕೃತಿಕ ಸಂಭ್ರಮಗಳಿಗೆ ತವರು ಮನೆ. ಸಾಂಸ್ಕೃತಿಕ ಜೀವಂತಿಕೆಯನ್ನು ಉಳಿಸಿಕೊಂಡು ಬಂದಿರುವುದು ಇಂತಹ ಆಚರಣಾತ್ಮಕ ಪರಂಪರೆಗಳ ಮೂಲಕವೇ. ಹಬ್ಬಗಳು ಕೇವಲ ಮನರಂಜನೆಗೆ ಅಲ್ಲ. ಇದರ ಹಿಂದೆ ಅಧ್ಯಾತ್ಮವಿದೆ. ಸಾಮಾಜಿಕ ಆಯಾಮವಿದೆ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ಉದ್ದೇಶ ಅಡಗಿದೆ. ಹಾಗಾಗಿ ತಾಲೂಕಿನ ಸುಕ್ಷೇತ್ರ ಮುಗಳಖೋಡದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದಲ್ಲಿ ಇದೆ ಜುಲೈ ಶುಕ್ರವಾರ ದಿ.25 ರಿಂದ ಒಂದು ತಿಂಗಳ ಕಾಲ “ಸಾಧು ಚಕ್ರವರ್ತಿ. ಸದ್ಗುರು ಶ್ರೀ ಶಿವಾನಂದ ಬಾರತಿ ಶ್ರೀಗಳ ಕೃಪಾಶೀರ್ವಾದದಿಂದ ಸಾಂಸ್ಕೃತಿಕ ನಾಯಕ,ವಿಶ್ವಮಾನ್ಯ ಪುರುಷ ಜಗದ್ಗುರು ಬಸವಣ್ಣನವರ ಜೀವನಾಧಾರಿತ ತತ್ವ-ದಶ೯ನ “ಬಸವ ಪುರಾಣವು ಇಲ್ಲಿಯ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದಲ್ಲಿ ನಡೆಯಲಿದೆ ಎಂದು ಆಶ್ರಮದ ಪ.ಪೂ ಕುಮಾರ ಗುರುಪ್ರಸಾದ ಸ್ವಾಮೀಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರತಿ ದಿನ ಬೆಳಿಗ್ಗೆ 5.30ರಿಂದ 6.30 ರ ವರೆಗೆ ಶ್ರೀ ಸಿದ್ಧಾರೂಢರ ಪಾರಾಯಣ.ಓಂಕಾರ ನಾಮಸ್ಮರಣೆ. ಮಂಗಲ, ಪ್ರಸಾದ.ಸಂಜೆ.8 ರಿಂದ ರಿಂದ 9 ರ ವರೆಗೆ ಬಸವ ಪುರಾಣವು ಪ.ಪೂ.ಶರಣಬಸವ ಶಾಸ್ತ್ರಿಗಳಿಂದ ಜರುಗುವುದು.
ಅಲ್ಲದೆ ಆಶ್ರಮದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ 2025ರ ಶ್ರಾವಣ ಸಂಭ್ರಮವು ವಿಜ್ರಂಭಣೆಯಿಂದ ಜರುಗಲಿದೆ ಎಂದು ಪ.ಪೂ.ಕುಮಾರ ಗುರುಪ್ರಸಾದ ಸ್ವಾಮೀಜಿ ತಿಳಿಸಿದ್ದಾರೆ