- Advertisement -
ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ವತಿಯಿಂದ ಇದೇ ದಿ. 24 ರಂದು ಶುಕ್ರವಾರ 3:30 ಕ್ಕೆ ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಯಶೋಧಾಬಾಯಿ ಕಾಗತಿ ದತ್ತಿನಿಧಿ ಕಾರ್ಯಕ್ರಮ ಮತ್ತು ಸಾಹಿತಿ ರಾಜನಂದಾ ಘಾರ್ಗಿ ಅವರು ಬರೆದ ‘ಆವಾಂತರ ‘ಕಥಾಸಂಕಲನದ ಲೋಕಾರ್ಪಣೆ ಕಾರ್ಯಕ್ರಮ ಜರುಗಲಿದೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಶ್ರೀಮತಿ ಹೇಮಾವತಿ ಸೋನೋಳ್ಳಿ ವಹಿಸುವರು.
ಬಸವಕೇಂದ್ರ ಪುಣೆಯ ಅಧ್ಯಕ್ಷರಾದ ಡಾ. ಶಶಿಕಾಂತ ಪಟ್ಟಣ ಕೃತಿ ಲೋಕಾರ್ಪಣೆ ಮಾಡುವರು. ಜಿಲ್ಲಾ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕರಾದ ಜಿ. ರಾಮಯ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಸಾಹಿತಿ ಡಾ. ನಿರ್ಮಲ ಬಟ್ಟಲ ಕೃತಿ ಪರಿಚಯಿಸುವರು. ಸಾಹಿತ್ಯಾಸಕ್ತರು ಭಾಗವಹಿಸಬೇಕೆಂದು ಜಿಲ್ಲಾ ಲೇಖಕಿಯರ ಸಂಘದ ಕಾರ್ಯದರ್ಶಿ ರಾಜನಂದಾ ಘಾರ್ಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.