೧೯ರಂದು ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಣೆ

Must Read

ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕತಿ ಇಲಾಖೆ ಹಾಗೂ ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮ ಸಹಯೋಗದಲ್ಲಿ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಫೆ ೧೯, ಬುಧವಾರ ಸಂಜೆ ೦೬.೦೦ ಗಂಟೆಗೆ ನಗರದ ಜೆಸಿ ರಸ್ತೆ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಾರ‍್ಯಕ್ರಮ ಉದ್ಘಾಟಿಸಲಿದ್ದು, ಶ್ರೀ ಭವಾನಿ ಪೀಠ ಗೋಸಾಯಿ ಮಹಾಸಂಸ್ಥಾನ ಮಠದ ಶ್ರೀ ಮಂಜುನಾಥ ಭಾರತಿ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದಾರೆ, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌, ಕುಮಾರಿ ಶೋಭಾ ಕರಂದ್ಲಾಜೆ, ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಮತ್ತು ಹಿಂದುಳಿದ ವರ‍್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಚಿವರಾದ ಶಿವರಾಜ ಎಸ್‌ ತಂಗಡಗಿ ಉಪಸ್ಥಿತರಿರುವರು,

ಶಾಸಕ ಉದಯ ಬಿ ಗರುಡಾಚಾರ್‌ ಅಧ್ಯಕ್ಷತೆ ವಹಿಸುವ ಸಮಾರಂಭದಲ್ಲಿ ರಾಜ್ಯ ಸರ‍್ಕಾರದ ಅನೇಕ ಸಚಿವರು ಶಾಸಕರು ವಿಧಾನ ಪರಿಷತ್‌ ಸದಸ್ಯರು ಲೋಕಸಭಾ ಸದಸ್ಯರು ರಾಜ್ಯಸಭಾ ಸದಸ್ಯರು ಭಾಗವಹಿಸುವರು.

ಶಾಸಕರುಗಳಾದ ಶ್ರೀನಿವಾಸ ವಿ ಮಾನೆ ,ವಿಠ್ಠಲ ಸೋಮಣ್ಣ ಹಲಗೇಕರ್‌, ಮಾರುತಿರಾವ್‌ ಮುಳೆ, ಕರ‍್ನಾಟಕ ಸ್ಕೌಟ್ಸ ಮತ್ತು ಗೈಡ್ಸ್‌ ಮುಖ್ಯ ಆಯುಕ್ತ ಪಿ ಜಿ ಆರ್‌ ಸಿಂಧ್ಯಾ, ಕರ‍್ನಾಟಕ ಕ್ಷತ್ರಿಯ ಮರಾಠ ಪರಿಷತ್‌ ರಾಜ್ಯಧ್ಯಕ್ಷ ಎಸ್‌ ಸುರೇಶ್‌ರಾವ್‌ ಸಾಠೆ ಮತ್ತು ಕರ‍್ನಾಟಕ ಮರಾಠ ವೆಲ್‌ಫೇರ್‌ ಅಸೋಸಿಯೇಷನ್‌ ಅಧ್ಯಕ್ಷ ಎಸ್‌ ಮನೋಜ್‌ಕುಮಾರ್‌ ರಣ್ಣೋರೆ ವಿಶೇಷ ಆಹ್ವಾನಿತರಾಗಿ ಭಾಗವಹಿಸುವರು.ಸಾಹಿತಿ ಜಗನಾಥರಾವ್‌ ಬಹುಳೆರವರು ಶಿವಾಜಿ ಮಹಾರಾಜರ ಕುರಿತು ಉಪನ್ಯಾಸ ನೀಡುವರು, ಇದೇ ಸಂದರ‍್ಭದಲ್ಲಿ ಕರ‍್ನಾಟಕ ಮರಾಠ ಸಮುದಾಯದ ಅಭಿವೃದ್ಧಿ ನಿಗಮದ ಹೊಸ ಯೋಜನೆಗಳ ಚಾಲನೆ ನೀಡಲಾಗುವುದು ಎಂದು ಕರ‍್ನಾಟಕ ಮರಾಠ ಸಮುದಾಯದ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ‍್ದೇಶಕ ಡಾ. ಪ್ರಕಾಶ್‌ ಆರ್‌ ಪಾಗೋಜಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ,

ಕಾರ‍್ಯಕ್ರಮದ ಆರಂಭದಲ್ಲಿ ಶಿವಾಜಿ ಮಹಾರಾಜರ ಬಗ್ಗೆ ಗೀತೆ ಹಾಗೂ ರಾಜಶ್ರೀ ಶಾಹುಮಹಾರಾಜರ ಕುರಿತು ಸಾಕ್ಷ್ಯ ಚಿತ್ರ ಪ್ರದರ‍್ಶಿಸಲಾಗುವುದು ಮತ್ತು ವಿವಿಧ ಜಾನಪದ ಕಲಾ ತಂಡಗಳಿಂದ ಜಾನಪದ ಕಲಾ ಪ್ರದರ‍್ಶನ, ಹೊಸಪೇಟೆಯ ಮಾರುತಿರಾವ್‌ ಮತ್ತು ತಂಡದಿಂದ ಸುಗಮಸಂಗೀತ ಏರ‍್ಪಡಿಸಲಾಗಿದೆ.

Latest News

ಕವನ : ಶ್ರದ್ಧೆ

ಶ್ರದ್ಧೆಶ್ರದ್ಧೆ ಎಂದರೆ ಕೇವಲ ನಂಬಿಕೆ ಅಲ್ಲ, ಸಾಧನೆಯ ಕೀಲಿ ಕೈ ಆಗಿದೆಯಲ್ಲ ಹೃದಯದಿಂದ ಹೊಮ್ಮುವ ಶಕ್ತಿ ಎಲ್ಲ ಕಣ್ಣಿಗೆ ಕಾಣದ ಅದ್ಭುತ ಅನುಭವದ ಬೆಲ್ಲ ಹೆಜ್ಜೆಗೆ ದಿಕ್ಕು ತೋರುವ ಬೆಳಕ ಸಾಧನೆಯ ಹಾದಿಯ...

More Articles Like This

error: Content is protected !!
Join WhatsApp Group