ಸಿಂದಗಿ – ಪಟ್ಟಣದ ಪ್ರಗತಿ ಕೋಚಿಂಗ್ ಶಾಲೆಯಲ್ಲಿ ನಮ್ಮ ದೇಶದ ಪ್ರಥಮ ಪ್ರಧಾನ ಮಂತ್ರಿಗಳು ಹಾಗೂ ಮಕ್ಕಳ ಪ್ರಿಯರೆನಿಸಿಕೊಂಡಿರುವ ಪಂಡಿತ್ ಜವಾಹರ್ ಲಾಲ್ ನೆಹರು ಅವರ ಜನುಮದಿನದ ಅಂಗವಾಗಿ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು
ಸ್ಥಳೀಯ ಸಂಸ್ಥೆಯಾಗಿರುವ ಸಾವಿತ್ರಿಬಾಯಿ ಫುಲೆ ಸಮಗ್ರ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಸಂಯೋಜಕರಾಗಿರುವ ರಾಜು ಗುದ್ದೇವಾಡ ಹಾಗೂ ಚಂದ್ರಶೇಖರ್ ದೇವರು ಭಾಗಿಯಾಗಿದ್ದು ಮಕ್ಕಳ ದಿನಾಚರಣೆ ಪ್ರಯುಕ್ತವಾಗಿ ವಿವಿಧ ಆಟ ಪಾಠಗಳಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನದಲ್ಲಿ ಬಂದಿರುವ ಮಕ್ಕಳಿಗೆ ಪೆನ್ನು ನೋಟ್ ಬುಕ್ಕು ಇತರೆ ಬಹುಮಾನಗಳನ್ನು ವಿತರಿಸಲಾಯಿತು
ಈ ಸ್ಕೂಲಿಂದ ಮಕ್ಕಳು ಪ್ರತಿ ವರ್ಷವೂ ಶೇಕಡ 80ರಷ್ಟು ಮಕ್ಕಳು ಸೈನಿಕ ಸ್ಕೂಲ್ ಆದರ್ಶ ಮುರಾರ್ಜಿ ಹೀಗೆ ಮಕ್ಕಳ ಆಯ್ಕೆಯಾಗಿ ಹೋಗುತ್ತಾರೆ ಏಕೆಂದರೆ ಇಲ್ಲಿಯ ಶಿಕ್ಷಕ ವೃಂದವು ಅಚ್ಚುಕಟ್ಟಾಗಿ ಶಿಸ್ತಿನ ಸಿಪಾಯಿಯಂತೆ ಆಟದ ಜೊತೆ ಪಾಠಗಳನ್ನು ಹೇಳಿ ಮಕ್ಕಳನ್ನು ವೈಜ್ಞಾನಿಕವಾಗಿ ಮುಂದೆ ಬರಲು ಮುಖ್ಯಸ್ಥರಾಗಿರುವ ಶೇಖರ ಎಂ ಸಿಂದಗಿ ರವರು ಹಾಗೂ ಅವರ ಬೃಂದಾವನ್ನು ಯಾವುದೇ ಸ್ವಾರ್ಥ ವಿಲ್ಲದೆ ಮಕ್ಕಳನ್ನು ಬೆಳೆಸುವ ಉದ್ದೇಶದಿಂದ ತಮ್ಮ ಸೇವೆ ಮಾಡುವುದರಿಂದ ಇಲ್ಲಿಯ ಮಕ್ಕಳು ಮುಂದೆ ಬರುತ್ತಿದ್ದಾರೆ
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಸ್ಥರಾದ ಶೇಖರ್ ಸರ್ ಸಿಂದಗಿ ‘ ಸುಧಾ ಹಿರೇಮಠ್ ‘ ಪೂಜಾ ಶೆಟ್ಟಿ ವಿದ್ಯಾ ಸೋಮು ಶಾಂತ ಯಂಕಂಚಿ ಕರ ರಮೇಶ್ ಬಿರಾದಾರ ಸ್ವಪ್ನ ರೇಖಾ ಬಾಬು ಬಂದರ್ವಾಡ್ ಕಾರ್ಯಕ್ರಮದಲ್ಲಿ ಮಾತನಾಡಿದರು

