ಬೀದರ – ವೈದ್ಯಕೀಯ ಶಿಕ್ಷಣ ಪಡೆಯಲು ಉಕ್ರೇನ್ ಗೆ ಹೋಗಿದ್ದ ಬೀದರ್ ಮೂಲದ ಮತ್ತಿಬ್ಬರು ವಿದ್ಯಾರ್ಥಿಗಳು ಉಕ್ರೇನ್ ನಲ್ಲಿ ಸಿಲುಕಿಕೊಂಡು ಪರದಾಡುತ್ತಿದ್ದು ಇತ್ತ ಅವರ ಪೋಷಕರು,ತಂಗಿ ಆತಂಕದಲ್ಲಿ ಕಣ್ಣೀರು ಹಾಕುತ್ತಿದ್ದಾರೆ.
ಬೀದರ್ ನಗರದ ದೀಕ್ಷಿತ್ ಕಾಲೋನಿಯ ಶಶಾಂಕ್ ವಿಜಯ್ ಕುಮಾರ್ ಪೋಷಕರು ಮಗ ಸೇಫಾಗಿ ಮನೆಗೆ ಬರಲಿ ಎಂದು ಬೇಡಿಕೊಳ್ಳುತ್ತ ಆತಂಕದಲ್ಲಿ ಕಣ್ಣೀರು ಹಾಕುತ್ತಿದ್ದಾರೆ.
ಬೀದರ್ ನ ಒಟ್ಟು ನಾಲ್ಕು ವಿದ್ಯಾರ್ಥಿಗಳು ಸದ್ಯ ಉಕ್ರೇನ್ ನಲ್ಲಿ ಸಿಲುಕಿಕೊಂಡು ಪರದಾಡುತ್ತಿದ್ದಾರೆ. ಉಕ್ರೇನ್ ನಲ್ಲಿ ಸದ್ಯ ಯುದ್ಧ ನಡೆಯುತ್ತಿದ್ದು ಎಲ್ಲಿಗೆ ಹೋಗಿ ಮುಟ್ಟುತ್ತದೆಯೋ ಗೊತ್ತಿಲ್ಲ, ಹೀಗಾಗೀ ನಾವು ಆತಂಕದಲ್ಲಿ ಇದ್ದೇವೆ… ಮಗನ ಜೊತೆ ಮಾತನಾಡುವಾಗ ಬಾಂಬ್ ಹಾಕುತ್ತಿದ್ದಾರೆ ಎಂದು ಬಂಕರ್ ಗೆ ಓಡಿ ಹೋಗಿದ್ದಾನೆ.
ಉಕ್ರೇನ್ ನಲ್ಲಿ ಸದ್ಯ ಭಯಾನಕ ಸ್ಥಿತಿ ಇದ್ದು ನಮಗೆ ಬಹಳ ದುಃಖವಾಗುತ್ತಿದ್ದು ಮಗನನ್ನು ಸೇಫಾಗಿ ಕರೆದುಕೊಂಡು ಬರಬೇಕು ಸರ್ಕಾರ ನೆರವಾಗಬೇಕು ಎಂದು ಪೋಷಕರು ಭಾವುಕರಾದರು. ಅಲ್ಲಿ ನಮ್ಮ ಅಣ್ಣನಿಗೆ ನೀರು,ಊಟ ಸೇರಿದಂತೆ ಬಹಳ ತೊಂದರೆಯಾಗುತ್ತಿದೆ ನಾನು ಬಹಳ ನೆನಪಿಸಿಕೊಳ್ಳುತ್ತಿದ್ದೇನೆ. ನಮ್ಮ ಅಣ್ಣ ಬೇಗ ಮನೆಗೆ ಬರಬೇಕು ಎಂದು ತಂಗಿ ಕಣ್ಣೀರು ಹಾಕಿದರು.