spot_img
spot_img

ಕನ್ನಡ ಭಾಷೆ, ಸಾಹಿತ್ಯದ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕಾಗಿದೆ

Must Read

- Advertisement -

ಮೂಡಲಗಿ: ‘ಕರ್ನಾಟಕ ಏಕೀಕರಣಕ್ಕೆ ಧಾರಾವಾಡದ ವಿದ್ಯಾವರ್ಧಕ ಸಂಘ ಮತ್ತು ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆಯ ಪ್ರಭಾವವು ಅಪೂರ್ವವಾಗಿದೆ’ ಎಂದು ಮೂಡಲಗಿ ತಾಲ್ಲೂಕಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಸಂಜಯ ಶಿಂಧಿಹಟ್ಟಿ ಹೇಳಿದರು.

ತಾಲ್ಲೂಕಿನ ಜೋಕಾನಟ್ಟಿ ಸರ್ಕಾರಿ ಪ್ರೌಢ ಶಾಲೆಯ ಆತಿಥ್ಯದಲ್ಲಿ ಮೂಡಲಗಿ ತಾಲ್ಲೂಕಾ ಕನ್ನಡ ಸಾಹಿತ್ಯ ಪರಿಷತ್‍ವು ಕರ್ನಾಟಕ ಸಂಭ್ರಮ-50 ಅಂಗವಾಗಿ ಏರ್ಪಡಿಸಿದ್ದ ‘ಕನ್ನಡ ಹಬ್ಬ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕರ್ನಾಟಕ ಏಕೀಕರಣದ ಹೋರಾಟಕ್ಕೆ ಆಲೂರು ವೆಂಕಟರಾವ್ ಅವರ ಕೊಡುಗೆಯು ಸ್ಮರಣೀಯವಾಗಿದೆ ಎಂದರು. 

ವಿವಿಧ ಪ್ರಾಂತಗಳಲ್ಲಿ ಹಂಚಿಹೋಗಿದ್ದ ಕನ್ನಡ ನಾಡನ್ನು ಒಟ್ಟುಗೂಡಿಸಿ ಅಖಂಡ ಕರ್ನಾಟಕ ರಾಜ್ಯವನ್ನು ಮಾಡುವಲ್ಲಿ ಅನೇಕ ಮಹನೀಯರ ತ್ಯಾಗ, ಬಲಿದಾನ, ಪರಿಶ್ರಮವು ಸದಾ ನೆನಪಿಸಿಕೊಳ್ಳಬೇಕು ಎಂದರು.

- Advertisement -

ಕರ್ನಾಟಕ ರಾಜ್ಯವು ನಾಮಕರಣಗೊಂಡ 50 ವರ್ಷಗಳ ಸಂಭ್ರಮಕ್ಕೆ ಮೂಡಲಗಿ ಕನ್ನಡ ಸಾಹಿತ್ಯ ಪರಿಷತ್ ಘಟಕವು ತಾಲ್ಲೂಕಿನ ವಿವಿಧ ಶಾಲೆಗಳಲ್ಲಿ ‘ಕನ್ನಡ ಹಬ್ಬ’ವನ್ನು ಆಚರಿಸುವ ಮೂಲಕ ಮಕ್ಕಳಲ್ಲಿ ಕನ್ನಡ ಭಾಷೆ, ಸಾಹಿತ್ಯದ ಬಗ್ಗೆ ಒಲವು ಮೂಡಿಸುವ ಉದ್ಧೇಶ ಹೊಂದಲಾಗಿದೆ ಎಂದರು. 

ಅಧ್ಯಕ್ಷತೆವಹಿಸಿದ್ದ ಶಾಲೆಯ ಮುಖ್ಯೋಪಾಧ್ಯಾಯ ಎಂ.ಎಂ. ದಬಾಡಿ ಮಾತನಾಡಿದರು. 

ನಿಕಟಪೂರ್ವ ಅಧ್ಯಕ್ಷ ಸಿದ್ರಾಮ್ ದ್ಯಾಗಾನಟ್ಟಿ, ಬಸವರಾಜ ತರಕಾರ, ಬಾಲಶೇಖರ ಬಂದಿ ಮಾತನಾಡಿದರು.  ಶಿಕ್ಷಕ ಈರಣ್ಣ ಮರಿಜಾಡರ ಕುವೆಂಪು ಕುರಿತು ವಿಶೇಷ ಉಪನ್ಯಾಸ  ನೀಡಿದರು. 

- Advertisement -

ಬಿ.ವೈ. ಶಿವಾಪುರ, ನಿವೃತ್ತ ಶಿಕ್ಷಕ ವಂಟಗೂಡಿ, ಪ್ರಭಾ ಶುಗರ್ಸ್ ನಿರ್ದೇಶಕ ಸಿದ್ಲಿಂಗಪ್ಪ ಕಂಬಳಿ, ಭೀಮಶೆಪ್ಪ ಮೋಕಾಸಿ, ಸಿದ್ದಪ್ಪ ಮೋಕಾಸಿ ಅತಿಥಿಯಾಗಿದ್ದರು. 

ಲಕ್ಷ್ಮಣ ಹೆಳವರ ಸ್ವಾಗತಿಸಿದರು, ಸಿ.ಬಿ. ಪೂಜೇರಿ ನಿರೂಪಿಸಿದರು, ಎಚ್.ಎನ್. ಜೋಕಾನಟ್ಟಿ ವಂದಿಸಿದರು.

ಗಮನಸೆಳೆದ ಮೆರವಣಿಗೆ: 

ನಾಡದೇವಿ ಭುವನೇಶ್ವರ ಭಾವಚಿತ್ರದ ಮೆರವಣಿಗೆಯು ಗ್ರಾಮದಲ್ಲಿ ಜರುಗಿತು. ಕನ್ನಡ ನಾಡು, ನುಡಿ ಬಿಂಬಿಸುವ ರೂಪಕಗಳು ಗಮನಸೆಳೆದವು. ಕಾರ್ಯಕ್ರಮದ ಮಧ್ಯದಲ್ಲಿ ಜಾನಪದ ಮತ್ತು ಕನ್ನಡ ನಾಡು, ನುಡಿ ಬಿಂಬಿಸುವ ನೃತ್ಯಗಳು ಎಲ್ಲರ ಮನಸೂರೆಗೊಂಡವು.

- Advertisement -
- Advertisement -

Latest News

ಮನೋಜ್ಞ ಅನುಭೂತಿಯ ವಿಶ್ವ ಧ್ಯಾನದ ದಿನಾಚರಣೆ 

      ಮೈಸೂರಿನ ಮಾನಸಗಂಗೋತ್ರಿಯು ಇಂದು ಮನಸ್ಸನ್ನು ಮುದಗೊಳಿಸುವ ಅಪರೂಪದ ಕಾರ್ಯಕ್ರಮವೊಂದಕ್ಕೆ ಸಾಕ್ಷಿಯಾಯಿತು. ವಿಶ್ವ ಸಂಸ್ಥೆಯು 21 ಡಿಸೆಂಬರ್ ವಿಶ್ವ ಧ್ಯಾನದ ದಿನವನ್ನಾಗಿ ಆಚರಿಸಲು...
- Advertisement -

More Articles Like This

- Advertisement -
close
error: Content is protected !!
Join WhatsApp Group