ಮಕ್ಕಳಿಗೆ ನೈತಿಕ ಶಿಕ್ಷಣ ನೀಡಬೇಕು – ರಾಜೇಂದ್ರ ಸಣ್ಣಕ್ಕಿ

Must Read

ಮೂಡಲಗಿ: ಮಕ್ಕಳಿಗೆ ಸಂಸ್ಕಾರಯುಕ್ತವಾಗಿರಲು ಪ್ರಮುಖವಾಗಿ ದೈವಿಕತೆ ಜೊತೆಗೆ ಅವರ ವೇಷಭೂಷಣಗಳನ್ನು ತೊಡಿಸುವ ಮೂಲಕ ನೈತಿಕ ಮೌಲ್ಯಯುಕ್ತ ಶಿಕ್ಷಣ ನೀಡಬೇಕು ಎಂದು ಮಾಜಿ ಜಿ.ಪಂ ಸದಸ್ಯ ಡಾ. ರಾಜೇಂದ್ರ ಸಣ್ಣಕ್ಕಿ ಹೇಳಿದರು.

ಅವರು ಸಮೀಪದ ಕೌಜಲಗಿಯ ಕರ್ನಾಟಕ ಪಬ್ಲಿಕ್ ಗಂಡು ಮಕ್ಕಳ ಶಾಲೆಯಲ್ಲಿ ಜರುಗಿದ ಶ್ರೀಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರತಿಯೊಬ್ಬ ವಿದ್ಯಾರ್ಥಿಯು ವಿದ್ಯೆಯೊಂದಿಗೆ ವಿನಯ ಬೆಳೆಸಿಕೊಳ್ಳಬೇಕು ಹಾಗೂ ದೇವರು, ಧರ್ಮದಲ್ಲಿ ಶೃದ್ಧೆ ಉಳ್ಳವರಾಗ ಬೇಕೆಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಲೆಯ ಮಕ್ಕಳು ಶ್ರೀಕೃಷ್ಣ ಮತ್ತು ರಾಧೆಯ ವೇಷ ಭೂಷಣದಲ್ಲಿ ಗಮನ ಸೇಳೆದು  ಕಾರ್ಯಕ್ರಮಕ್ಕೆ ಮೆರಗು ನೀಡಿದರು.

ಈ ಸಂದರ್ಭದಲ್ಲಿ ಮೂಡಲಗಿ ಸಿಪಿಐ ಶ್ರೀಶೈಲ್ ಬ್ಯಾಕೂಡ, ಕುಲಗೋಡ ಪಿಎಸ್‍ಐ ಗೋವಿಂದಗೌಡ ಪಾಟೀಲ, ಪ್ರಧಾನಗುರು ಮಾಲತೇಶ ಸಣ್ಣಕ್ಕಿ ಹಾಗೂ ಶಿಕ್ಷಕರು ವಿದ್ಯಾರ್ಥಿಗಳು ಇದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group