ಬೈಲಹೊಂಗಲ: ಬಾಲ್ಯದಲ್ಲಿ ಕಲಿತ ಶಿಕ್ಷಣ ಮತ್ತು ಸಂಸ್ಕಾರ ಸುಂದರ ಭವಿಷ್ಯಕ್ಕೆ ಅಡಿಪಾಯ ಎಂದು ಮುಖ್ಯಶಿಕ್ಷಕರಾದ ಎನ್.ಆರ್.ಠಕ್ಕಾಯಿ ಹೇಳಿದರು. ತಾಲೂಕಿನ ಬೂದಿಹಾಳದ ಸರಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಕ್ಕಳು ಸಮಯ ವ್ಯರ್ಥ ಮಾಡದೆ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಗಮನ ಹರಿಸಬೇಕು. ತಮ್ಮ ಜವಾಬ್ದಾರಿ ಅರಿತುಕೊಂಡು ಅವಕಾಶಗಳನ್ನು ಸದುಪಯೋಗ ಮಾಡಿಕೊಂಡರೆ ಯಶಸ್ಸು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.
ಜವಾಹರಲಾಲ್ ನೆಹರು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ವಿದ್ಯಾರ್ಥಿಗಳಾದ ಲಕ್ಷ್ಮೀ ಶೀಗಿಹಳ್ಳಿ, ರಂಜಿತಾ ಮಾದರ, ಕಾವೇರಿ ಜಡಗನ್ನವರ ಮಾತನಾಡಿದರು. ವೇದಿಕೆ ಮೇಲೆ ಶಾಲಾ ಪ್ರಧಾನಿ ನಿರ್ಮಲಾ ಸೊಗಲದ, ಹಣಕಾಸು ಮಂತ್ರಿ ಅಮೂಲ್ಯ ಸೂರ್ಯವಂಶಿ, ವಿಜ್ಞಾನ ಮತ್ತು ತಂತ್ರಜ್ಞಾನ ಮಂತ್ರಿ ಮಹೇಶ ಬಾರ್ಕಿ, ಆರೋಗ್ಯ ಮತ್ತು ಸ್ವಚ್ಛತಾ ಮಂತ್ರಿ ಕಾರ್ತಿಕ ಬಡಿಗೇರ, ಕ್ರೀಡಾ ಮಂತ್ರಿ ಅಭಿಲಾಷ ಹೊಂಗಲ, ಗ್ರಂಥಾಲಯ ಮಂತ್ರಿ ಸುಶ್ಮಿತಾ ಸೊಗಲದ, ಪ್ರವಾಸ ಮಂತ್ರಿ ಸಂಜು ಸೊಗಲದ, ಸಾಂಸ್ಕೃತಿಕ ಮಂತ್ರಿ ಚಿನ್ಮಯಿ ಹಳ್ಳಿಕೇರಿಮಠ, ಶಿಕ್ಷಣ ಮಂತ್ರಿ ಪೃಥ್ವಿ ಗರಗದ, ಸಭಾಪತಿ ಅಮೃತ ನರೇಂದ್ರಮಠ, ವಿರೋಧ ಪಕ್ಷದ ನಾಯಕಿ ಪೂಜಾ ಸೊಗಲದ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಗಾಗಿ ಹಗ್ಗ ಜಗ್ಗಾಟ, ಸಂಗೀತ ಕುರ್ಚಿ, ಬುಟ್ಟಿಯಲ್ಲಿ ಚೆಂಡು ಹಾಕುವುದು ಇತ್ಯಾದಿ ವಿವಿಧ ಮನರಂಜನಾ ಆಟಗಳನ್ನು ಹಮ್ಮಿಕೊಳ್ಳಲಾಗಿತ್ತು. ಎಲ್ಲ ಮಕ್ಕಳು ಭಾಗವಹಿಸಿ ಖುಷಿಯಿಂದ ಸಂಭ್ರಮಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ಜೆ.ಅರ್.ನರಿ, ಪಿ.ಎಸ್ ಗುರುನಗೌಡರ, ಎಸ್.ವಿ. ಬಳಿಗಾರ, ಆರ್.ಸಿ.ಸೊರಟೂರ, ಎಚ್.ವಿ. ಪುರಾಣಿಕ, ವಿ.ಬಿ.ಪಾಟೀಲ, ಎಸ್.ಬಿ. ಹತ್ತರಕಿ ಉಪಸ್ಥಿತರಿದ್ದರು. ಪ್ರಭಾವತಿ ಆಡಿನ ಸ್ವಾಗತಿಸಿದರು. ಮಲ್ಲಮ್ಮ ಅಳಗೋಡಿ ನಿರೂಪಿಸಿದರು. ಅಕ್ಷತಾ ಚಚಡಿ ವಂದಿಸಿದರು.