ಮಕ್ಕಳ ಆರೋಗ್ಯ ವರ್ಧಕ ಸ್ವರ್ಣ ಬಿಂದು ಪ್ರಾಶನ್

Must Read

ಸಿಂದಗಿ: ಇಂದಿನ ಆಧುನಿಕ ಯುಗದ ಆಹಾರ ಪದ್ಧತಿ, ಪರಿಸರ ಮಾಲಿನ್ಯದಿಂದ ಮಕ್ಕಳಲ್ಲಿ ಮೇಲಿಂದ ಮೇಲೆ ಕಂಡು ಬರುವ ಜ್ವರ, ನೆಗಡಿ, ಕೆಮ್ಮು, ಮುಂತಾದ ಕಾಯಿಲೆಗಳ ಪರಿಹಾರಕ್ಕೆ ಮುನ್ನೆಚ್ಚರಿಕೆಯೊಂದೇ ಸೂಕ್ತ ಉಪಾಯ. ಅವುಗಳು ಬರದಂತೆ ತಡೆಗಟ್ಟಲು ಮಕ್ಕಳಲ್ಲಿಯ ರೋಗ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುವಂತ ಮಕ್ಕಳ ಆರೋಗ್ಯ ವರ್ಧಕ ಸ್ವರ್ಣ ಬಿಂದು ಪ್ರಾಶನ್ ಬಳಕೆಯಿಂದ ಆರೋಗ್ಯ ವೃದ್ಧಿ ಮಾಡಬಹುದು ಎಂದು ಪಟ್ಟಣದ ಶ್ರೀ ಭಾಗ್ಯವಂತಿ ಕ್ಲಿನಿಕ್ ನ ಡಾ.ರಾಹುಲ.ಪಿ.ಯಂಪೂರೆ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುವ ಅವರು, ಮಕ್ಕಳ ರೋಗ ಪ್ರತಿರೋಧಕ ಶಕ್ತಿ ವೃದ್ಧಿಗಾಗಿ ಆಯುರ್ವೇದದಲ್ಲಿ ಉಲ್ಲೇಖಿಸಲಾಗಿರುವ ಅತ್ಯಮೂಲ್ಯವಾದ ಔಷಧಿ ಚಿಕಿತ್ಸಾ ವಿಧಾನವೇ ಸ್ವರ್ಣಬಿಂದು ಪ್ರಾಶನ. ಸಾವಿರಾರು ವರ್ಷಗಳಿಂದ ಅದನ್ನು ಮಕ್ಕಳ ಶಾರೀರಿಕ, ಮಾನಸಿಕ ಮತ್ತು ಬೌದ್ಧಿಕ ಬೆಳವಣಿಗೆಗಾಗಿ ಉಪಯೋಗಿಸಲಾಗುತ್ತದೆ. ಇದನ್ನು ಮಕ್ಕಳು ಹುಟ್ಟಿದ ದಿನದಿಂದ 16 ವರ್ಷಗಳವರೆಗೆ ಪ್ರತಿ ತಿಂಗಳು ಪುಷ್ಯ ನಕ್ಷತ್ರದ ದಿನದಂದು ಕೊಡಬಹುದಾಗಿದೆ ಎಂದು ಡಾ.ಗೀತಾ.ಎಮ್.ಯಾಡಗಿ ತಿಳಿಸಿದ್ದಾರೆ.

ಸ್ವರ್ಣ ಪ್ರಾಶನದ ಉಪಯೋಗಗಳು:

ರೋಗ ನಿರೋಧಕ ಮತ್ತು ಬುದ್ದಿ ಶಕ್ತಿ ವರ್ಧಿಸುವುದು. ಮೇಲಿಂದ ಮೇಲೆ ಕಾಡುವ ರೋಗಗಳನ್ನು ತಡೆಗಟ್ಟುವುದು. ನೆನಪಿನ ಶಕ್ತಿ, ಏಕಾಗ್ರತೆ ಹೆಚ್ಚಾಗಿ ಕಲಿಕೆಯಲ್ಲಿ ಪ್ರಗತಿ ಉಂಟಾಗುವುದು. ರಚ್ಚೆ ಹಿಡಿಯುವುದು, ಚಂಚಲ ಸ್ವಭಾವ, ಹಾಸಿಗೆಯಲ್ಲಿ ಮೂತ್ರ ಮಾಡುವಿಕೆ ಹಾಗೂ ಇನ್ನಿತರ ಮನೋಶಾರಿಕ ತೊಂದರೆಗಳನ್ನು ಹತೋಟಿಯಲ್ಲಿಡಬಹುದು. ವಾಕ್-ಶ್ರವಣ ತೊಂದರೆಗಳನ್ನು ದೃಷ್ಟಿ ದೋಷಗಳನ್ನು ತಡೆಗಟ್ಟುವುದು. ಅಸ್ತಮಾ ಹಾಗೂ ಮೇಲಿಂದ ಮೇಲೆ ಬಾಧಿಸುವ ಅಲರ್ಜಿಗಳನ್ನು ಹತೋಟಿಯಲ್ಲಿಡಬಹುದು. ಜೀರ್ಣಶಕ್ತಿ ವೃದ್ಧಿಸುವುದು. ಮದುಳಿನ ಬೆಳವಣಿಗೆಗೆ ಸಹಕಾರಿ. ಚರ್ಮಕಾಂತಿ ಹೆಚ್ಚಿಸುವುದು.

ಸಾಮಾನ್ಯ ಮಾಹಿತಿ:

ಹುಟ್ಟಿದ ಮಗುವಿನಿಂದ ಹದಿನಾರು ವರ್ಷದ ಒಳಗೆ ಇರುವ ಮಕ್ಕಳಿಗೆ ಪ್ರತಿ ತಿಂಗಳು ಹಾಕಿದಲ್ಲಿ ಅತ್ಯುತ್ತಮ ಪರಿಣಾಮವಾಗುತ್ತದೆ. ಇದರಿಂದ ಯಾವುದೇ ಅಡ್ಡಪರಿಣಾಮಗಳು ಇಲ್ಲಿವರೆಗೆ ದಾಖಲಾಗಿಲ್ಲಾ ಹೆಚ್ಚಿನ ವಿವರಗಳಿಗಾಗಿ ಪಟ್ಟಣದ ಬಂದಾಳ ಕ್ರಾಸ್ ವಿಜಯಪೂರ ರಸ್ತೆ ಗೋಬ್ಬುರ ಬಿಲ್ಡಿಂಗನಲ್ಲಿರುವ ಶ್ರೀ ಭಾಗ್ಯವಂತಿ ಕ್ಲಿನಿಕ್‍ನ ಮೋ; 9148752107 ಸಂಪರ್ಕಿಸುವಂತೆ ಕೊರಿದ್ದಾರೆ.

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group