ಬೈಲಹೊಂಗಲ– ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಉದ್ಘಾಟನೆ, ಗ್ರಂಥ ಲೋಕಾರ್ಪಣೆ, ಮಕ್ಕಳ ಮಂದಾರ ಪ್ರಶಸ್ತಿ ವಿತರಣೆ ಕಾರ್ಯಕ್ರಮ ಪಟ್ಟಣದ ಶಾಸಕರ ಮತಕ್ಷೇತ್ರದ ಮಾದರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ನಂ.೪ ರಲ್ಲಿ ದಿ.೨೯ ರಂದು ಮಧ್ಯಾಹ್ನ ೨.೩೦ ಕ್ಕೆ ನಡೆಯಲಿದೆ.
ಚಾರಿತ್ರಿಕ ಕಾದಂಬರಿಕಾರ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾಧ್ಯಕ್ಷ ಯ.ರು.ಪಾಟೀಲ ಕಾರ್ಯಕ್ರಮ ಉದ್ಘಾಟಿಸುವರು.ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸಿದ್ರಾಮ ನಿಲಜಗಿ ಅಧ್ಯಕ್ಷತೆ ವಹಿಸುವರು. ಸದಾಶಿವಯ್ಯ ಪತ್ರಿಮಠ ಶಾಸ್ತ್ರಿಗಳು ಸಾನ್ನಿಧ್ಯ ವಹಿಸುವರು.
ಮುಖ್ಯ ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎನ್.ಪ್ಯಾಟಿ, ಕ್ಷೇತ್ರ ಸಮನ್ವಯಾಧಿಕಾರಿ ಬಿ.ಎನ್.ಕಸಾಳೆ, ಕ.ರಾ.ಪ್ರೌ.ಶಾ.ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಎಸ್.ಎಂ.ಪಾಟೀಲ, ಶಾಸಕರ ಮತಕ್ಷೇತ್ರದ ಮಾದರಿ ಪ್ರಾಥಮಿಕ ಶಾಲೆ ನಂ.೪ ಮುಖ್ಯೊಪಾಧ್ಯಾಯ ಸಿ.ಬಿ.ಶೀಗಿಹಳ್ಳಿ, ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಮಹೇಶ ಕೋಟಗಿ, ಕ.ರಾ.ಮ.ಸಾ.ಪ ಗೌರವ ಅಧ್ಯಕ್ಷ ಡಾ.ಲಕ್ಷ್ಮಣ ಚೌರಿ, ಕ.ರಾ.ಮ.ಸಾ.ಪ ಜಿಲ್ಲಾ ಕಾನೂನು ಸಲಹೆಗಾರ ಡಾ.ಉದ್ದಣ್ಣ ಗೋಡೇರ ಆಗಮಿಸುವರು.
ಇದೇ ವೇಳೆ ಹಿರಿಯ ಪತ್ರಕರ್ತ ಸಿ.ವಾಯ್.ಮೆಣಸಿನಕಾಯಿ ಅವರು ರಚಿಸಿದ ಬಾಳು ಬಂಗಾರ ಮತ್ತಿತರ ಕಥೆಗಳು ಮತ್ತು ಕಾಲಚಕ್ರ ಮತ್ತಿತರ ಕಥೆಗಳು ಕಥಾಸಂಕಲನ ಲೋಕಾರ್ಪಣೆ ಕಾರ್ಯಕ್ರಮ ಹಾಗೂ ಮಕ್ಕಳ ಮಂದಾರ ಪ್ರಶಸ್ತಿ ವಿತರಣೆ ಕಾರ್ಯಕ್ರಮ ನಡೆಯಲಿದೆ ಎಂದು ಬೈಲಹೊಂಗಲ ಘಟಕದ ಅಧ್ಯಕ್ಷ ಸಿ.ವಾಯ್.ಮೆಣಸಿನಕಾಯಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.