ಸಿಂದಗಿ: ಮಕ್ಕಳ ಹಕ್ಕುಗಳು 4 ಇದ್ದಾವೆ. ಬದುಕುವ ಹಕ್ಕು ,ಒಳ್ಳೆಯ ಆರೋಗ್ಯ, ಶಿಕ್ಷಣ ಹಾಗೂ ಪೌಷ್ಠಿಕ ಆಹಾರ ಪಡೆದುಕೊಳ್ಳುವುದು. ರಕ್ಷಣೆಯ ಹಕ್ಕು – ನಿಮ್ಮಗೆ ಯಾವುದೇ ರೀತಿಯ ಕಿರುಕುಳ ಆದಾಗ ರಕ್ಷಣೆ ಸಿಗಬೇಕು. ಭಾಗವಹಿಸುವ ಹಕ್ಕು – ಮಾತನಾಡುವುದು, ವಿದ್ಯಾಭ್ಯಾಸದಲ್ಲಿ ಕ್ರಿಯಾತ್ಮಕವಾಗಿ ಭಾಗವಹಿಸುವುದು ಮತ್ತು ಸಂಘಟನೆಯಾಗುವುದು. ವಿಕಾಸ ಹಾಗೂ ಅಭಿವೃದ್ಧಿ ಹೊಂದುವ ಹಕ್ಕು – ನಿಮ್ಮ ಬೆಳವಣಿಗೆಗೆ ಏನು ತೊಂದರೆಯಾಗಬಾರದು, ಹೆಣ್ಣು ಗಂಡು ಎನ್ನುವ ತಾರತಮ್ಯ ಇರಬಾರದು ಎಂದು ಸಂಗಮ ಸಂಸ್ಥೆ ನಿರ್ದೇಶಕರಾದ ಫಾದರ್ ಸಂತೋಷ ಹೇಳಿದರು.
ತಾಲೂಕಿನ ಬಂದಾಳ ಗ್ರಾಮದಲ್ಲಿ ಸಂಗಮ ಸಮಗ್ರ ಗ್ರಾಮೀಣ ಅಭಿವೃದ್ಧಿ ಕೇಂದ್ರ ಸಿಂದಗಿ ಹಾಗೂ ಗ್ರಾಮ ಪಂಚಾಯತ್ ಬಂದಾಳ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಮಕ್ಕಳ ವಿಶೇಷ ಗ್ರಾಮಸಭೆಯಲ್ಲಿ ಮಾತನಾಡಿ, ಮಕ್ಕಳ ವಿಶೇಷ ಗ್ರಾಮ ಸಭೆ ಮಾಡುವುದರ ಉದ್ದೇಶ, ಮಕ್ಕಳ ಕುಂದುಕೊರತೆಗಳ ಕುರಿತು ಸ್ಥಳೀಯ ಸರ್ಕಾರದ ಮುಂದೆ ಇಡುವುದು. ಸ್ಥಳೀಯ ಸರ್ಕಾರವೆಂದರೆ ಗ್ರಾಮ ಪಂಚಾಯತ್, ಗ್ರಾಮ ಪಂಚಾಯತ್ ಅಧಿಕಾರಿಗಳು ಗ್ರಾಮ ಸಭೆಯಲ್ಲಿ ಇದ್ದಾರೆ. ಮಕ್ಕಳು ತಮ್ಮ ಕುಂದುಕೊರತೆಗಳ ವಿಷಯವನ್ನು ಅವರಿಗೆ ಧೈರ್ಯವಾಗಿ ಹೇಳಬೇಕು ಎಂದರು.
ಸರಕಾರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ಬಂದಾಳ ಶಾಲಾ ಮಕ್ಕಳ ಬೇಡಿಕೆಗಳು ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ, ಅಡುಗೆ ಕೋಣೆ ಹೈಸ್ಕೂಲ್ ಕಟ್ಟಡ, ಆಟದ ಮೈದಾನ, ಕಂಪೌಂಡ್, ಶಾಲಾ ಜಾಗಕ್ಕೆ ಉತಾರಿ, ಮತ್ತು ಗ್ರಂಥಲಾಯ ವ್ಯವಸ್ಥೆ. ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಓತಿಹಾಳ ಮಕ್ಕಳ ಬೇಡಿಕೆಗಳು ಗ್ರಂಥಲಾಯ, ಪ್ರಾಜೆಕ್ಟರ್, ಸಿ.ಸಿ.ಟಿ.ವಿ, ಆಟೋಟ ಸಾಮಾಗ್ರಿಗಳು, ಗಣಕಯಂತ್ರ ಮತ್ತು ಕಂಪೌಂಡ್. ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಚಿಕ್ಕ ಸಿಂದಗಿ ಮಕ್ಕಳ ಬೇಡಿಕೆಗಳು ಕಂಪೌಂಡ್, ಅಡುಗೆ ಕೋಣೆ, ಶುದ್ದ ಕುಡಿಯುವ ನೀರಿನ ವ್ಯವಸ್ಥೆ, ಶಾಲಾ ಮೇಲ್ಛಾವಣಿ ದುರಸ್ತಿ, ಶೌಚಾಲಯ, ರೇಷನ್ ಕಳ್ಳತನರನ್ನು ಹಿಡಿಯುವುದು ಮತ್ತು ಸಿ.ಸಿ.ಟಿವಿ. ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಬೂದಿಹಾಳ ಮಕ್ಕಳ ಬೇಡಿಕೆಗಳು ಶುದ್ದ ಕುಡಿಯುವ ನೀರಿನ ವ್ಯವಸ್ಥೆ, ಕಟ್ಟಡ ಮೇಲ್ಚಾವಣಿ ವ್ಯವಸ್ಥೆ, ಸಾರ್ವಜನಿಕರು ಶಾಲೆ ಕಂಪೌಂಡ್ ಒಳಗೆ ಬಂದು ಮದ್ಯಪಾನ ಮಾಡುತ್ತಾರೆ ಇದನ್ನು ತಡೆಯಬೇಕು ಮತ್ತು ಶೌಚಾಲಯ, ಈ ವ್ಯವಸ್ಥೆಗಳನ್ನು ಅತೀ ಶೀಘ್ರದಲ್ಲಿ ನೇರವೇರಿಸಲು ಮಕ್ಕಳು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಜೊತೆ ಬೇಡಿಕೊಂಡರು.
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಬಿ.ಎನ್.ಶಹಾಪೂರರವರು ಮಾತನಾಡಿ, ಶಾಲೆಯ ಮಕ್ಕಳ ಬೇಡಿಕೆಗಳು ಅತ್ಯವಶಕ್ಯವಾಗಿದ್ದು ಅವುಗಳನ್ನು ಮುಂದಿನ ಕ್ರಿಯಾ ಯೋಜನೆಯಲ್ಲಿ ಹಾಕಿಕೊಂಡು ಕೆಲಸ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಕಾರ್ಯದರ್ಶಿಗಳು ಆರ್.ಎನ್. ಮುಜಾವರ್, ಮತ್ತು ಗ್ರಾಮ ಪಂಚಾಯತ್ ಅಧ್ಯಕ್ಷರು ಸುವರ್ಣ ಶಂಕ್ರಪ್ಪ ಮಕಣಪೂರ, ಉಪಾಧ್ಯಕ್ಷರು ಜೆಟ್ಟಪ್ಪ, ಶ್ರೀ ಉಕ್ಕಲಿ ಸರಕಾರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ಬಂದಾಳ, ಮುಖ್ಯ ಗುರುಗಳು ನಿಂಗನಗೌಡ ಪಾಟೀಲ, ಶಿಕ್ಷಕ-ಶಿಕ್ಷಕಿ ವರ್ಗ, ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಓತಿಹಾಳ ಶ್ರೀ ಡಂಬಳ್, ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಚಿಕ್ಕ ಸಿಂದಗಿ, ಎಮ್.ಕೆ. ಬಿರದಾರ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಬೂದಿಹಾಳ ದೇವರಮನಿ ಉಪಸ್ಥಿತರಿದರು.
ಶಿಕ್ಷಕ ಚಂದ್ರಶೇಖರ್ ಬ್ಯುಂಯಾರ್ ನಿರೂಪಿಸಿದರು. ಶಿಕ್ಷಕ ಬಸವರಾಜ ಅಗಸರ ಸ್ವಾಗತಿಸಿದರು. ಸಂಗಮ ಸಂಸ್ಥೆಯ ರಾಜೀವ ಕುರಿಮನಿ ವಂದಿಸಿದರು. ಕಾರ್ಯಕರ್ತರಾದ ನೆರವೇರಿಸಿದರು. ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಸಂಗಮ ಸಂಸ್ಥೆ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಹಾಜರಿದ್ದರು.