ಚಿಂತಾಮಣಿಯವರ ಸಾಹಿತ್ಯ ಹಾಗೂ ಬದುಕು ಅನುಕರಣೀಯ

Must Read

ಸಿಂದಗಿ: ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ಪುರಷ್ಕೃತರಾಗಿದ್ದ ಈಶ್ವರಚಂದ್ರ ಚಿಂತಾಮಣಿಯವರ ಸಾಹಿತ್ಯ ಹಾಗೂ ವೈಯಕ್ತಿಕ ಬದುಕು ಇತರೆ ಸಾಹಿತಿಗಳಿಗೆ ಅನುಕರಣೀಯವಾಗಿದೆ ಎಂದು ಆರ್.ಡಿ.ಪಾಟೀಲ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕ ಪಿ.ಎಂ.ಮಡಿವಾಳರ ಹೇಳಿದರು

ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಹಿರಿಯ ಸಾಹಿತಿ ದಿ. ಈಶ್ವರಚಂದ್ರ ಚಿಂತಾಮಣಿಯವರ ಶ್ರದ್ಧಾಂಜಲಿ ಸಭೆಯಲ್ಲಿ ನುಡಿನಮನ ಸಲ್ಲಿಸಿ ಅವರು ಮಾತನಾಡಿ, ಕನ್ನಡ ಸಾಹಿತ್ಯದ ಹಲವಾರು ಪ್ರಕಾರದಲ್ಲಿ ತಮ್ಮದೇ ಆದ ಶೈಲಿಯಲ್ಲಿ ಸಾಹಿತ್ಯ ಕೃಷಿ ಮಾಡಿದ್ದ ಚಿಂತಾಮಣಿಯವರು ಜಾನಪದ ಹಾಗೂ ಮಕ್ಕಳ ಸಾಹಿತ್ಯದಲ್ಲಿ ವಿಶೇಷ ಒಲವು ಹೊಂದಿದ್ದರು ಇವರು ಜೀವನದುದ್ದಕ್ಕೂ ಸಾರ್ಥಕ ಬದುಕು ನಡೆಸಿ ಜೀವನದ ನಂತರವೂ ತಮ್ಮ ದೇಹವನ್ನು ವೈದ್ಯಕೀಯ ಸಂಶೋಧನೆಗೆ ದಾನ ಮಾಡುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ ತಾಲೂಕಾಧ್ಯಕ್ಷ ಸಿದ್ದಲಿಂಗ ಚೌಧರಿ ಮಾತನಾಡಿ, ಸದಾ ಶುಭ್ರವಸ್ತ್ರಧಾರಿಗಳಾಗಿ ಪ್ರಜ್ವಲಿಸುವಂತೆ ಠೀವಿಯಿಂದ ಇರುತ್ತಿದ್ದ ಚಿಂತಾಮಣಿಯವರ ಮನಸ್ಸು ಕೂಡಾ ಶ್ವೇತವರ್ಣದಂತೆ ಶುಭ್ರವಾಗಿತ್ತು ಹಲವಾರು ಸಾಹಿತಿಗಳಿಗೆ ಮಾರ್ಗದರ್ಶಕರಾಗಿ, ಹಿತೈಷಿಗಳಾಗಿ, ಸರಳ ಜೀವಿಗಳಾಗಿದ್ದ ಶ್ರೀಯುತರು ಹುಟ್ಟು ಹಾಗೂ ಸಾವಿನ ಮಧ್ಯದ ಬದುಕು ಸಾರ್ಥಕಗೊಳಿಸುವಲ್ಲಿ ಸದಾ ಕ್ರಿಯಾಶೀಲತೆ ಮಾನವೀಯತೆಗಳನ್ನು ಮೈಗೂಡಿಸಿಕೊಳ್ಳಬೇಕೆನ್ನುವ ಮಾತನ್ನು ಎಲ್ಲರಿಗೂ ಹೇಳುತ್ತಾ ತಾವೂ ಕೂಡಾ ಹೇಳಿದಂತೆ ನಡೆದುಕೊಳ್ಳುತ್ತಿದ್ದರು ಎಂದರು.

ಪತ್ರಕರ್ತರ ಸಂಘದ ಅಧ್ಯಕ್ಷ ಆನಂದ ಶಾಬಾದಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅರೋಗ್ಯ ಇಲಾಖೆಯ ಶಂಕರ ಮಳ್ಳಿ, ರವಿ ಹೋಳಿ, ನುಡಿನಮನ ಸಲ್ಲಿಸಿದರು. ಶಿವಕಮಾರ ಕಲ್ಲೂರ, ನವೀನ ಶೆಳ್ಳಗಿ, ಸಭೀಯಾ ಮರ್ತೂರ, ಸೈನಾಬಿ ಮಸಳಿ, ಎಸ್.ಆರ್.ಪಾಟೀಲ, ಪರಶುರಾಮ ಪೂಜಾರಿ, ಅಜಯ ಯಲಗಟ್ಟಿ ಸೇರಿದಂತೆ ಹಲವರು ಇದ್ದರು.

Latest News

ಗಡಿಗಳನ್ನು ಮೀರಿ ಹರಿದ ಭಕ್ತಿ: ಓಮಾನ್‌ನಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವದ ವೈಭವ  

     ಗಡಿಗಳನ್ನು ಮೀರಿ ಹರಿಯುವ ಭಕ್ತಿಯ ಹರಿವು ಮಸ್ಕಟ್‌ನಲ್ಲಿ ಮತ್ತೆ ಒಮ್ಮೆ ತಿರುಮಲೆಯ ಸಾನ್ನಿಧ್ಯವನ್ನು ಮೂಡಿಸಿತು. ದಾರ್ಸೈಟ್‌ನ ಶ್ರೀ ಕೃಷ್ಣ ಮಂದಿರದಲ್ಲಿ ನೆರವೇರಿದ ಶ್ರೀ...

More Articles Like This

error: Content is protected !!
Join WhatsApp Group