ಬೆಳಗಾವಿ – ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ವರ್ಷಾಚರಣೆ ನಿಮಿತ್ತ ಸಾಹಿತಿಗಳು, ಬುದ್ಧಿಜೀವಿಗಳು ಮತ್ತು ಚಿಂತಕರು ಸೇರಿಕೊಂಡು ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ, ಆಧ್ಯಾತ್ಮಿಕವಾಗಿ ಹತ್ತು ಹಲವು ವೈವಿಧ್ಯಮಯ ಚಿಂತನ ಗೋಷ್ಠಿಗಳನ್ನು ಹಮ್ಮಿಕೊಳ್ಳುವ ಉದ್ದೇಶದಿಂದ ಕಳೆದ ಸೆಪ್ಟೆಂಬರ್ ತಿಂಗಳಿನಿಂದ ವಿಚಾರಗೋಷ್ಠಿ, ಪುಸ್ತಕ ವಿಮರ್ಶೆ, ವ್ಯಕ್ತಿ ಅಧ್ಯಯನ, ಐತಿಹಾಸಿಕ ಘಟನೆಗಳ ಮೆಲುಕು, ಇತಿಹಾಸದಲ್ಲಿ ಮರೆತುಹೋದ ಮಹಾನ್ ಸಾಧಕರ ಕುರಿತು ಚರ್ಚೆ ಹೀಗೆ ಹಲವಾರು ಕಾರ್ಯಕ್ರಮಗಳು ನಡೆಯುತ್ತಿವೆ.
ಈ ಚಿಂತನ ಗೋಷ್ಠಿಯ ಅಡಿಯಲ್ಲಿ ಶುಕ್ರವಾರ ದಿ.7 ರಂದು ಸಂಜೆ 4 ಗಂಟೆಗೆ ಡಾ. ಸಿದ್ದೇಶ್ವರದೇವರು, ಮರಕಟ್ಟಿ ಇವರ ನೇತೃತ್ವದಲ್ಲಿ ‘ಅತೀಂದ್ರಿಯ ಜ್ಞಾನ ಕುರಿತು ಚಿಂತನ’ ನಡೆಯಲಿದೆ. ವಿಷಯ ಕುರಿತು ಚಿಂತನದಲ್ಲಿ ಪಾಲ್ಗೊಳ್ಳಲು ಇಚ್ಛಿಸುವವರು ಅಶೋಕ್ ಉಳ್ಳೆಗಡ್ಡಿ. M:9964885728 ಅವರನ್ನು ಸಂಪರ್ಕಿಸಲು ಕೋರಲಾಗಿದೆ. ಚಿಂತನಗೋಷ್ಠಿ ಯು #705, ನೆನಹು, ( ಮನೆಯ ಸಭಾಂಗಣ). ರಿಲಯನ್ಸ್ ಟವರ ಎದುರಿಗೆ,ರಾಮತೀರ್ಥ ನಗರ, ಬೆಳಗಾವಿ. ನಲ್ಲಿ ನಡೆಯಲಿದೆ. ಸಾಹಿತಿಗಳು ಅನುಭಾವಿಗಳು ಯುವಕರು ಈ ಗೋಷ್ಠಿಯ ಸದುಪಯೋಗಪಡಿಸಿಕೊಳ್ಳಬೇಕಾಗಿ ಸ. ರಾ. ಸುಳಕೂಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಾಹಿತಿಗಾಗಿ ಸಂಪರ್ಕಿಸಿ ಎಂ.ವೈ.ಮೆಣಸಿನಕಾಯಿ. M:9449209570.