- Advertisement -
ಸಿಂದಗಿ: ಕ್ಷೇತ್ರದ ನೂತನ ಶಾಸಕರಾಗಿ ಅಶೋಕ ಮನಗೂಳಿ ಅವರನ್ನು ಆಯ್ಕೆ ಮಾಡಿದ ಮತಕ್ಷೇತ್ರದ ಜನತೆಗೆ ಕಾಂಗ್ರೆಸ್ ಯುವ ಮುಖಂಡ ಸದ್ದಾಮ್ ಆಲಗೂರ ಧನ್ಯವಾದಗಳನ್ನು ತಿಳಿಸಿದ್ದಾರೆ. ಉಪಚುನಾವಣೆಯಲ್ಲಿ ಸೋತರೂ ನಿರಾಶೆ ಹೊಂದದೆ ಪಕ್ಷ ಸಂಘಟನೆ ಮಾಡಿ, ಜನ ಸಾಮಾನ್ಯರ ಜೊತೆ ಬೆರೆತು ಅವರ ಕಷ್ಟ-ಸುಖ ಗಳಲ್ಲಿ ಭಾಗಿಯಾಗಿ ತಾಲೂಕಿನ ಮತದಾರ ಪ್ರಭುಗಳ ಮನಸ್ಸನ್ನು ಗೆದ್ದಿದ್ದರು.
ಹೀಗಾಗಿ ಅವರನ್ನು ಪ್ರಚಂಡ ಬಹುಮತಗಳಿಂದ ಜನರು ಆಯ್ಕೆ ಮಾಡಿದ್ದಾರೆ. ಪಕ್ಷಾತೀತವಾಗಿ, ಜಾತ್ಯತೀತವಾಗಿ ಅವರನ್ನು ಬೆಂಬಲಿಸಿ ಆಯ್ಕೆ ಮಾಡಿದ್ದಕ್ಕೆ ಸಿಂದಗಿ ವಿಧಾನಸಭಾ ಕ್ಷೇತ್ರದ ಮತದಾರ ಪ್ರಭುಗಳಿಗೆ ಧನ್ಯವಾದಗಳು ಎಂದು ಕಾಂಗ್ರೆಸ್ ಯುವ ಮುಖಂಡ ಸದ್ದಾಮ್ ಆಲಗೂರ ಹೇಳಿದ್ದಾರೆ.