ಚುಟುಕು ಇಂದು ಜನಪ್ರಿಯ ಕಾವ್ಯ ಪ್ರಕಾರವಾಗಿದೆ – ಪ್ತೊ.ಶಿವಾನಂದ ಬೆಳಕೂಡ

Must Read

ಮೂಡಲಗಿ: ‘ಕಿರಿದರಲ್ಲಿ ಹಿರಿದರ್ಥವನ್ನು ನೀಡುವ ಚುಟುಕುಗಳು ಪ್ರಸ್ತುತ ಜನಪ್ರಿಯ ಕಾವ್ಯ ಪ್ರಕಾರವಾಗಿದೆ’ ಎಂದು ಸಾಹಿತಿ ಪ್ರೊ. ಶಿವಾನಂದ ಬೆಳಕೂಡ ಹೇಳಿದರು.

ತಾಲ್ಲೂಕಿನ ಖಾನಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆತಿಥ್ಯದಲ್ಲಿ ಮೂಡಲಗಿ ತಾಲ್ಲೂಕಾ ಚುಟುಕು ಸಾಹಿತ್ಯ ಪರಿಷತ್ತು, ಪೋತರಾಜ ಪ್ರತಿಷ್ಠಾನ,  ತಾಲ್ಲೂಕಾ ಜಾನಪದ ಪರಿಷತ್ತು ಸಹಯೋಗದಲ್ಲಿ ಜರುಗಿದ ಚುಟುಕು ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಚನ, ಜಾನಪದ ತ್ರಿಪದಿಗಳು ಚುಟುಕು ಸಾಹಿತ್ಯಕ್ಕೆ ಪ್ರೇರಣೆಯಾಗಿವೆ ಎಂದರು. 

ಬರೆಯುವ ಚುಟುಕುಗಳು ಪ್ರಾಸ, ಪದಗಳ ಬಳಕೆ, ಧ್ವನಿರಮ್ಯತೆ, ಉಪಮೆ ಮತ್ತು ರೂಪಕಗಳಿಂದ ಓದುಗರ ಹೃದಯ ಮುಟ್ಟಬೇಕು. ಯುವ ಕವಿಗಳು ಹೆಚ್ಚು, ಹೆಚ್ಚು ಓದಿ ಶಬ್ದ ಜ್ಞಾನ ಹೊಂದಿದೆ ಉತ್ತಮ ಚುಟುಕುಗಳ ಬರೆಯಲು ಸಾಧ್ಯ ಎಂದರು.  

ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಮುತ್ತಪ್ಪ ಸವದಿ ಅವರು ಚುಟುಕು ಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು. 

ಮುಖ್ಯ ಅತಿಥಿಗಳಾದ ಬಾಲಶೇಖರ ಬಂದಿ, ಮುಖ್ಯ ಶಿಕ್ಷಕ ಡಾ. ಮಹಾದೇವ ಜಿಡ್ಡಿಮನಿ, ಚುಸಾಪ ಅಧ್ಯಕ್ಷ ಚಿದಾನಂದ ಹೂಗಾರ,  ಡಾ. ಮಹಾದೇವ ಪೋತರಾಜ, ಮುಖ್ಯ ಶಿಕ್ಷಕ ಚಂದ್ರಕಾಂತ ಕೊಡತೆ ಮಾತನಾಡಿದರು.

ಅನಿಲ ಮಡಿವಾಳರ, ಶಿವಲಿಂಗ ದಾನನ್ನವರ, ಸುರೇಶ ಕಬ್ಬೂರ, ಶಿವಾನಂದ ಮದರಕಂಡಿ, ಅಮರ ಕಾಂಬಳೆ, ಯಲ್ಲಪ್ಪ ಗದಾಡಿ, ಬಾಳೇಶ ಫಕೀರಪ್ಪನವರ, ಸಾಗರ ಝಂಡೇಕುರಬರ, ನಿಂಗಪ್ಪ ಸಂಗ್ರೆಜಕೊಪ್ಪ, ಜ್ಯೋತಿ ಸಿ.ಎಂ, ಗೈಬು ದೊಡಮನಿ, ರಾಜಶ್ರೀ ವಡ್ಲಿ, ಶ್ರೀಶೈಲ ಶಿರೂರ, ಸರಸ್ವತಿ ಶೆಕ್ಕಿ, ಮಲ್ಲಪ್ಪ ಮಾಲಗಾರ, ಪೂರ್ಣಿಮಾ ಯಲಿಗಾರ, ಪರಸಪ್ಪ ಮಾದರ, ಶೈಲಜಾ ಬಡಿಗೇರ, ದುಂಡು ಪೂಜೇರಿ, ಪ್ರಿಯಂಕಾ ಅಸುಂಡಿ, ಸಾಗರ ಹುನಗುಂದ, ಸಂಜನಾ ಖರಾತ ಸ್ವರಚಿತ ಚುಟುಕು ಓದಿದರು.

ಪ್ರಕಾಶ ಮೇತ್ರಿ, ದುರ್ಗಪ್ಪ ದಾಸನ್ನವರ, ಬಸಪ್ಪ ಇಟ್ಟನ್ನವರ, ಸದಾಶಿವ ಯಕ್ಸಂಬಿ, ಮೆಹಬೂಬ್ ಶೇಖಬಡೆ, ಪ್ರೊ. ಶಿವಕುಮಾರ, ಶಿವಕುಮಾರ ಕಾಂಬಳೆ, ರಾಜಶ್ರೀ ಹಳ್ಳೂರ, ಬಸಯ್ಯ ಹಿರೇಮಠ ಇದ್ದರು.

Latest News

ಎಕ್ಸ್ ಪ್ರೆಸ್ ರೈಲುಗಳನ್ನು ಘಟಪ್ರಭಾ ಸ್ಟೇಶನ್ ನಿಲುಗಡೆಗೆ ಮನವಿ

ಮೂಡಲಗಿ: ಗೋಕಾಕ, ಮೂಡಲಗಿ, ಯರಗಟ್ಟಿ, ಹುಕ್ಕೇರಿ ಹಾಗೂ ಚಿಕ್ಕೋಡಿ ತಾಲೂಕುಗಳ ಅನೇಕ ಸೈನಿಕರು ಭಾರತದ ವಿವಿಧ ರಾಜ್ಯಗಳಲ್ಲಿ ದೇಶಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ. ಸೈನಿಕರು ರಜೆಯ ಸಮಯದಲ್ಲಿ...

More Articles Like This

error: Content is protected !!
Join WhatsApp Group