ನಾಗರಿಕ ವಿಕಾಸ ವೇದಿಕೆಯಿಂದ ನಗರ ಸೇವಕರಿಗೆ ಸನ್ಮಾನ

Must Read

ಬೆಳಗಾವಿ – ನಗರದ ಮಾಳ ಮಾರುತಿ ಬಡಾವಣೆಯ ನಾಗರಿಕ ವಿಕಾಸ ವೇದಿಕೆ ವತಿಯಿಂದ ವಾರ್ಡ್ ನಂಬರ 35 ಹಾಗೂ 36ರ ನಗರ ಸೇವಕರಾದ ಲಕ್ಷಿ ಮಹಾದೇವ ರಾಠೋಡ್ ಮತ್ತು ರಾಜಶೇಖರ ದೋಣಿ ಹಾಗೂ ವರ್ಷದ ಜಿಲ್ಲಾ ಉತ್ತಮ ಫಾರ್ಮಾಸಿಷ್ಟ್ ಪ್ರಶಸ್ತಿ ಪಡೆದ ಸತೀಶ ಸವದಿ ದಂಪತಿಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಿ.ಎಂ ಬೂದಿಹಾಳ ಅವರು ವಾರ್ಡಿನಲ್ಲಿ ಆಗಬೇಕಾದ ಅಭಿವೃದ್ಧಿ ಕಾರ್ಯಗಳು ಮತ್ತು ಕೊರತೆಗಳ ನಿವಾರಣೆಯ ಬಗ್ಗೆ ಮನವಿ ಸಲ್ಲಿಸಿದರು. ಸ್ಪಂದಿಸಿದ ನಗರ ಸೇವಕರು ಆಡಳಿತ ಅಧಿಕಾರಿಗಳ ಗಮನಕ್ಕೆ ತಂದು ಆದಷ್ಟು ಬೇಗ ವಾರ್ಡಿನ ನಾಗರಿಕರಿಗೆ ಸೌಲಭ್ಯ ಕಲ್ಪಿಸಿ ಕೊಡುತ್ತೇವೆ ಎಂದು ಹೇಳಿದರು. ಮಹಾದೇವ ರಾಠೋಡ, ರಾಜಶೇಖರ ದೋಣಿ ಹಾಗೂ ಸತೀಶ ಸವದಿ ಸನ್ಮಾನಕ್ಕುತ್ತರವಾಗಿ ಮಾತನಾಡಿ ಕೃತಜ್ಞತೆ ಸಲ್ಲಿಸಿದರು.

ಪ್ರಾರಂಭದಲ್ಲಿ ವೇದಿಕೆಯ ಉಪಾಧ್ಯಕ್ಷ ಜಗದೀಶ ಚಿಮ್ಮಲಗಿ ಸ್ವಾಗತಿಸಿದರು. ಅಧ್ಯಕ್ಷ ಸಿ ಎಂ ಬೂದಿಹಾಳ ಪ್ರಾಸ್ತಾವಿಕ ಮಾತನಾಡಿದರು. ಎಂ.ಎಸ್ ಪಾಟೀಲ ಮನವಿ ವಾಚನ ಮಾಡಿದರು. ಎಸ್ ಸಿ ಗುಂಡಕಲ್ಲೆ ಕಾರ್ಯಕ್ರಮ ನಿರೂಪಿಸಿದರು. ಎಸ್. ಎಸ್ ರಾಮದುರ್ಗ ವಂದಿಸಿದರು.

ಕಾರ್ಯಕ್ರಮದಲ್ಲಿ ಬಿ.ವಿ. ಅಣ್ಣಿಗೇರಿ, ಪ್ರಕಾಶ ವನಹಳ್ಳಿ, ಅರುಣ ನೇರ್ಲಿ, ಅಶೋಕ ಮುನ್ನೋಳಿ, ಮನೋಜ ಬೆನಕೊಪ್ಪ, ಎಂ.ಎಸ್ ಪಾಟೀಲ, ದ್ರಾಕಾಯಿಣಿ ಪೂಜೇರಿ, ಶೈಲಾ ವನಹಳ್ಳಿ, ಮಂಗಲಾ ಪಾಟೀಲ, ಸಿ.ಎಸ್ ಬಗಲಿ, ಡಾ. ಬಾಗೋಜಿ ಮುಂತಾದ ವೇದಿಕೆಯ ಸದಸ್ಯರು ಹಾಗೂ ನಾಗರಿಕರು ಉಪಸ್ಥಿತರಿದ್ದರು.

Latest News

ಜೀವದಾತ ರಕ್ತದಾನವೇ ಮಹಾದಾನ: ಫಾ.ಡಾ.ಅಗಸ್ಟೀನ್ ಜಾರ್ಜ್

ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದಲ್ಲಿ ಬೃಹತ್ ರಕ್ತದಾನ ಶಿಬಿರ“ಪ್ರಪಂಚದಲ್ಲಿ ಜೀವಜೀವಗಳನ್ನು ಉಳಿಸುವ ರಕ್ತದ ಪಾತ್ರವು ಮಹತ್ತರವಾದುದು. ಜೀವದಾತ ರಕ್ತದಾನವು ಮಹಾದಾನವಾಗಿದೆ” ಎಂದು ಎಂದು ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ...

More Articles Like This

error: Content is protected !!
Join WhatsApp Group