ಬೇಡಿಕೆ ಈಡೇರಿಕೆಗೆ ಹಕ್ಕೊತ್ತಾಯ ಕಾರ್ಯಕ್ರಮ

Must Read

ಸಿಂದಗಿ: ಕ್ರಿಯಾಶೀಲ ರಾಜ್ಯಾಧ್ಯಕ್ಷರಾಗಿರುವ  ಸಿ ಎಸ್ ಷಡಕ್ಷರಿ ಇವರ ಆದೇಶದ ಮೇರೆಗೆ ಎನ್ ಪಿ ಎಸ್ ರದ್ದತಿ, ಏಳನೇ ವೇತನ ಆಯೋಗದ ತುರ್ತು ಜಾರಿ, ಉಚಿತ ಆರೋಗ್ಯ ಚಿಕಿತ್ಸಾ ಯೋಜನೆಯ ಜಾರಿಯ ಕುರಿತಂತೆ    ಸಿಂದಗಿ ಮತಕ್ಷೇತ್ರದ ಶಾಸಕ ಅಶೋಕ ಮನಗೂಳಿ ಅವರಿಗೆ ಜ. 21ರಂದು ಬೆಳಿಗ್ಗೆ 10-00 ಗ0ಟೆಗೆ ಮನವಿ ಸಲ್ಲಿಸಿ ಹಕ್ಕೊತ್ತಾಯ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಕಾರಣ ಸಿಂದಗಿ, ಅಲಮೇಲ್, ಹಾಗೂ ದೇವರ ಹಿಪ್ಪರಗಿ ಮೂರು ತಾಲೂಕಿನ ಪದಾಧಿಕಾರಿಗಳು ಆಗಮಿಸುವಂತೆ ಸರಕಾರಿ ನೌಕರರ ಸಂಘದ ತಾಲೂಕ ಅಧ್ಯಕ್ಷ ಅಶೋಕ .ಎಸ್. ತೆಲ್ಲೂರ ತಿಳಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿದ ಅವರು, 2024 ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಕೂಡಾ ಇದೆ.  ಈ ಕಾರ್ಯಕ್ರಮದಲ್ಲಿ ಜಿಲ್ಲಾ ನೌಕರ ಸಂಘದ ಅಧ್ಯಕ್ಷರಾದ  ಸುರೇಶ್ ಶೇಡಷ್ಯಾಳ ಹಾಗೂ ಸಮಸ್ತ ಜಿಲ್ಲಾ ನೌಕರರ ಸಂಘದ  ಪದಾಧಿಕಾರಿಗಳು, ಸಿಂದಗಿ, ಅಲಮೇಲ್, ಹಾಗೂ ದೇವರ ಹಿಪ್ಪರಗಿ ಮೂರು ತಾಲೂಕಿನ ತಾಲೂಕ ದಂಡಾಧಿಕಾರಿಗಳು ಭಾಗವಹಿಸುವರು ಕಾರಣ ನಮ್ಮ ನಿಮ್ಮೆಲ್ಲರ ಈ ಬೇಡಿಕೆಗಳನ್ನು ಈಡೇರಿಸಿಕೊಳ್ಳುವ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ನೌಕರರು ಭಾಗವಹಿಸಬೇಕೆಂದು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group