ಬೆಂಗಳೂರು – ನಗರದ ನಾಗರಬಾವಿ ಬಸ್ ನಿಲ್ದಾಣದಲ್ಲಿನ ಪೊಲೀಸ್ ಬ್ಯಾರಿಕೇಡ್ ಗಳು ಹಾಗೂ ಅಸ್ವಚ್ಛತೆಯ ಬಗ್ಗೆ ಬುಧವಾರ ಟೈಮ್ಸ್ ಆಫ್ ಕರ್ನಾಟಕ ದಲ್ಲಿ ಪ್ರಕಟಗೊಂಡ ವರದಿಗೆ ಬಿಬಿಎಂಪಿ ಸ್ಪಂದಿಸಿದ್ದು ತಕ್ಷಣವೇ ಬ್ಯಾರಿಕೇಡ್ ತೆಗೆಯಲಾಗಿದೆ.

ಪ್ರಯಾಣಿಕರ ಅನುಕೂಲಕ್ಕಾಗಿ ಶೌಚಾಲಯ ನಿರ್ಮಾಣವಾಗಬೇಕು, ಕುಡಿಯುವ ನೀರಿನ ವ್ಯವಸ್ಥೆಯಾಗಬೇಕು ಅಲ್ಲದೆ ನಿಲ್ದಾಣದಲ್ಲಿರುವ ವಿದ್ಯುತ್ ಪೆಟ್ಟಿಗೆ ಅಪಾಯಕ್ಕೆ ಆಹ್ವಾನ ನೀಡುತ್ತಿದ್ದು ಅದಕ್ಕೊಂದು ವ್ಯವಸ್ಥೆಯಾಗಬೇಕಾಗಿದೆ. ಈ ನಿಟ್ಟಿನಲ್ಲಿ ಬಿಬಿಎಂಪಿ ಬೇಗನೆ ಕಾರ್ಯ ತತ್ಪರವಾಗಬೇಕೆಂಬುದು ಪತ್ರಿಕೆಯ ಆಶಯವಾಗಿದೆ.
ವರದಿ: ಅನಂತ ಕಲ್ಲಾಪುರ, ತೀರ್ಥಹಳ್ಳಿ