ಮೂಡಲಗಿ -ಪಟ್ಟಣದ ಕೆ ಎಸ್ ಆರ್ ಟಿ ಸಿ ಬಸ್ಟ್ಯಾಂಡ್ ಆವರಣದಲ್ಲಿ ಮಹಿಳೆಯರಿಗಾಗಿ ಇರುವ ಶೌಚಾಲಯ ತೀರಾ ಹೊಲಬುಗೆದ್ದು ಹೋಗಿದ್ದು ಮೂಗು ಮುಚ್ಚಿಕೊಂಡು ಕೂಡ ಶೌಚಕ್ಕೆ ಹೋಗಲಾರದ ಪರಿಸ್ಥಿತಿ ಇದೆ.
ಮಹಿಳೆಯರಿಗಾಗಿ ಶೌಚಾಲಯ ಕಟ್ಟಡ ಕಟ್ಟಿ ಹಲವಾರು ವರ್ಷಗಳೇ ಆಗಿದ್ದರೂ ಸರಿಯಾಗಿ ನಿರ್ವಹಣೆ ಆಗದೆ, ಸ್ವಚ್ಛತೆ ಇಲ್ಲದ್ದರಿಂದ ಬಂದ್ ಆಗಿತ್ತು. ಕೆಲವೇ ದಿನಗಳ ಹಿಂದೆ ಶೌಚಾಲಯ ಬಾಗಿಲು ತೆಗೆಯಲಾಗಿತ್ತಾದರೂ ಸ್ವಚ್ಛತೆ ಮಾತ್ರ ಕೈಗೊಳ್ಳದೆ ಗಬ್ಬೆದ್ದು ಹೋಗಿದೆ.
ಶೌಚಾಲಯದಲ್ಲಿ ಸಿಕ್ಕಾಪಟ್ಟೆ ಗಲೀಜಾಗಿದೆ, ಅಲ್ಲಿಗೆ ಹೇಗೆ ಮಹಿಳೆಯರು ಹೋಗಬೇಕು. ಈ ಶೌಚಾಲಯದ ಬಗ್ಗೆ ಸಂಬಂಧ ಪಟ್ಟವರು ಗಮನ ಹರಿಸಿರಿ ಎಂದು ಸಾರ್ವಜನಿಕರು ಕೇಳಿಕೊಳ್ಳುತ್ತಿದ್ದಾರೆ.