ಮೂಡಲಗಿ: ಸ್ವಾತಂತ್ರ್ಯೋತ್ಸವ ಆಚರಣೆಯ ಅಂಗವಾಗಿ ಮೂಡಲಗಿಯ ಲಯನ್ಸ್ ಕ್ಲಬ್ ಪರಿವಾರವು ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಸೋಮವಾರ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.
ಲಯನ್ಸ್ ಕ್ಲಬ್ ಅಧ್ಯಕ್ಷ ಶ್ರೀಶೈಲ ಲೋಕನ್ನವರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ‘ಲಯನ್ಸ್ ಕ್ಲಬ್‍ದಿಂದ ಪುರಸಭೆಯ ಸಹಕಾರದೊಂದಿಗೆ 2023-24ನೇ ಸಾಲಿನಲ್ಲಿ ಪಟ್ಟಣದ ವಿವಿಧ ವಾರ್ಡ್‍ಗಳ ಸ್ವಚ್ಛತೆಯ ಅಭಿಯಾನವನ್ನು ಪ್ರಾರಂಭಿಸಿರುವೆವು. ಸ್ವಚ್ಛತೆ ಮೂಲಕ ಪಟ್ಟಣದ ನೈರ್ಮಲ್ಯ ಕಾಯ್ದುಕೊಂಡು ರೋಗರುಜಿನಗಳು ಬಾರದಂತೆ ಪ್ರತಿಯೊಬ್ಬರು ಜಾಗೃತವಹಿಸುವುದು ಅವಶ್ಯವಿದೆ’ ಎಂದರು.
ಕಾರ್ಯದರ್ಶಿ ಸುಪ್ರೀತ ಸೋನವಾಲಕರ ಪ್ರಾಸ್ತಾವಿಕ ಮಾತನಾಡಿದರು.
ಸಂಜಯ ಮೋಕಾಶಿ, ಎನ್.ಟಿ. ಪಿರೋಜಿ, ಬಾಲಶೇಖರ ಬಂದಿ, ಮಹಾಂತೇಶ ಹೊಸೂರ, ಶಿವಾನಂದ ಗಾಡವಿ, ಸಂಗಮೇಶ ಕೌಜಲಗಿ, ಡಾ. ನೇಸೂರ, ಅಪ್ಪಣ್ಣ ಬಡಿಗೇರ, ಡಾ. ಯಲ್ಲಾಲಿಂಗ ಮುಳವಾಡ ಇದ್ದರು.
ಖಜಾಂಚಿ ಕೃಷ್ಣಾ ಕೆಂಪಸತ್ತಿ ನಿರೂಪಿಸಿ, ವಂದಿಸಿದರು.