ಸಿಂದಗಿ: ಧರ್ಮಗುರುಗಳು ಮಾನವೀಯ ಮೌಲ್ಯಗಳ ಪೋಷಕರಾಗಿದ್ದಾರೆ. ದಾನ . ಧರ್ಮ. ಸಂಸ್ಕೃತಿ ಉಳಿಸಿ ಬೆಳೆಸಿದ್ದಾರೆ. ಧರ್ಮ ಗುರುಗಳ ಸೇವೆ ಸ್ಮರಣಿಯ ಎಂದು ಕನ್ನಡ ಸಾಹಿತ್ಯ ಪರಿಷತ್ತ ಜಿಲ್ಲಾ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ಆಸಂಗಿಹಾಳ ಆರೂಢ ಆಶ್ರಮದಲ್ಲಿ ಸಮರ್ಥ ಜಗದ್ಗುರು ಆರೂಢ ಸಂಗನಬಸವೇಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದ ನಿಮಿತ್ತ ಮುಗಳಖೋಡ ಯಲ್ಲಾರಲಿಂಗ ಮಹಾರಾಜರ ಪುರಾಣ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಮನೆಯ ಮಹಿಳೆಯರನ್ನೇ ದೇವತೆಗಳೆಂದು ಭಾವಿಸಿ ಗೌರವಿಸಿ ಬದುಕಿದರೆ ಕುಟುಂಬದಲ್ಲಿ ಶಾಂತಿ ನೆಮ್ಮದಿ ಸಮೃದ್ದಿ ನೆಲೆಗೊಳ್ಳುತ್ತದೆ. ಮಠಾಧೀಶರರು ಸಮಾಜದ ಸ್ವಾಸ್ಥ್ಯ ಕಾಪಾಡುವ ಹೊಣೆ ಹೊತ್ತು ಸೇವೆ ಸಲ್ಲಿಸಿದ್ದಾರೆ ಎಂದರು.
ರಾಜ್ಯ ನಿಂಬೆ ಹಣ್ಣು ನಿಗಮದ ಅಧ್ಯಕ್ಷರಾದ ಅಶೋಕ ಅಲ್ಲಾಪೂರ ಮಾತನಾಡಿ, ಸದ್ಗುರು ಶಂಕರಾನಂದ ಮಹಾರಾಜರು ನಾಲ್ಕು ದಶಕಗಳಿಂದ ಆಧ್ಯಾತ್ಮಿಕ ಚಿಂತನೆ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕಾಯಕ ಮಾಡಿ ಯಶಸ್ವಿಯಾದವರು. ಇಂದು ಕೃಷಿಯಲ್ಲಿ ಅರಿವು ಮೂಡಿಸುವ ಕಾರ್ಯ ನಿರ್ವಹಣೆ ಜವಾಬ್ದಾರಿ ಮಠಾಧೀಶರು ಮಾಡಬೇಕಿದೆ ಭೂಮಿಯ ಫಲವತ್ತತೆಯನ್ನು ಕಾಯ್ದು ಕೊಳ್ಳುವುದು ಅತ್ಯಂತ ಅವಶ್ಯಕತೆ ಎಂದರು.
ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷ ಶಿಲ್ಪಾ ಕುದರಗೊಂಡ ಮಾತನಾಡಿ, ಕುಟುಂಬದ ಹಿರಿಯರು ದೇವರ ಸಮಾನರೆಂದು ತಿಳಿಯಬೇಕು. ಜನ್ಮ ಕೊಟ್ಟ ತಂದೆ ತಾಯಿಯ ಉಪಕಾರ ತಿರಿಸಲಿಕ್ಕೆ ಸಾಧ್ಯವಿಲ್ಲ. ಧರ್ಮದ ಸಂದೇಶ ಅರಿತು ಜೀವನದಲ್ಲಿ ಅಳವಡಿಸಿಕೊಂಡು ಬದುಕಬೇಕು ಎಂದು ತಿಳಿಸಿದರು.
ದಿವ್ಯ ಸಾನ್ನಿಧ್ಯ ವಹಿಸಿದ ಸದ್ಗುರು ಶಂಕರಾನಂದ ಮಹಾರಾಜರು ಸದ್ಗುರು ವೀರೇಶ್ವರ ಶಿವಯೋಗಿಗಳು, ಸದ್ಗರು ನಿತ್ಯಾನಂದ ಮಹಾರಾಜರು ಡಾ ಸಂದೀಪ ಪಾಟೀಲ್ ಶರಣಬಸವ ಶರಣರು ಜಗದೀಶ ಶರಣರು. ಅಶೋಕ ವಾರದ ಅಧ್ಯಕ್ಷತೆ ವಹಿಸಿ ಬಿಂದುರಾಯಗೌಡ ಪಾಟೀಲರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಭಗವಂತರಾಯ ಹಳ್ಳೆಪ್ಪಗೊಳ, ಎಮ್ ಎಸ್ ಚೌಧರಿ, ರಾಹುಲ್ ಎಂಟಮಾನ, ವಿಜಯಕುಮಾರ ಎಂಟಮಾನ, ರಮೇಶ ಕತ್ತಿ, ಮಹಿಬೂಬ ಮಸಳಿ, ರಮೇಶ ಬಂಟನೂರ ಶ್ರೀಶೈಲ ಮಠಪತಿ, ಅನಸೂಯ ಪಾರಗೊಂಡ, ಅಶೋಕ ಕೋಳಾರಿ, ಅನೀಲ ಬೆಳಗಲಿ. ಸಿದ್ದನಗೌಡ ಪಾಟೀಲ್. ಕಾದರ ವಾಲಿಕಾರ ಶಿವಾನಂದ ಬಡಾನವರ. ಆನಂದ ಶಿರೋಳಕರ, ಎಸ್ ವಿ ಪಾಟೀಲ್ಶ್ರೀ, ಶೈಲ ಯಳಮೇಲಿ, ಆರ್.ಟಿ.ರಾಠೋಡ, ಐ.ಎಮ್ ನದಾಫ್.ಸಿದ್ದು ಹಾವಳಗಿ. ಗುರಣ್ಣಾ ಮಲ್ಲೇದ. ಶಂಕರ ಮಾವೂರ, ಮಹಾಂತೇಶ ಯಡಗಿ. ಸುರೇಶ ಗೆಜ್ಜೆ. ಮುಂತಾದವರು ಉಪಸ್ಥಿತರಿದ್ದರು.
ಹನ್ನೆರಡು ದಿನ ಪುರಾಣವನ್ನು ವಿಶ್ವನಾಥಶಾಸ್ತ್ರಿ ನಡೆಸಿಕೊಟ್ಟರು ಕನ್ನಡ ಸಾಹಿತ್ಯ ಪರಿಷತ್ತಿನ ಆಲಮೇಲ ತಾಲೂಕಿನ ಅಧ್ಯಕ್ಷ ಶಿವಕುಮಾರ್ ಗುಂದಗಿ, ಐಶ್ವರ್ಯ ಕೋಳಾರಿ, ಸಂಗಮೇಶ್ವರ ಹಾಗು ಸಂಗಮೇಶ್ವರ ಹೇರೂರ ಕಾರ್ಯಕ್ರಮ ನಡೆಸಿಕೊಟ್ಟರು.