ಸಿಂದಗಿ – ರಾಜ್ಯದ ಜನತೆಯ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಯನ್ನು ನಿಖರವಾಗಿ ದಾಖಲಿಸುವ ಸಲುವಾಗಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಮಾಡಲು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಮುಂದಾಗಿದೆ. ಈ ಸಮೀಕ್ಷೆ ಸೆ.೨೨ರಿಂದ ಆರಂಭವಾಗಿ ಅಕ್ಟೋಬರ್ ೭ರವರೆಗೆ ನಡೆಯಲಿದೆ ಪ್ರತಿಯೊಬ್ಬರೂ ತಮ್ಮ ಮನೆಗೆ ಬಂದಿರುವಂತಹ ಗಣತಿದಾರರಿಗೆ ಸೂಕ್ತ ಮಾಹಿತಿಗಳನ್ನು ನೀಡಿ ಸಹಕರಿಸಬೇಕು ಎಂದು ಶಾಸಕ ಅಶೋಕ್ ಮನಗೂಳಿ ವಿನಂತಿಸಿದರು.
ಪಟ್ಟಣದ ತಹಶೀಲ್ದಾರ್ ಕಚೇರಿ ಯಲ್ಲಿ ಹಮ್ಮಿಕೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಚಾಲನೆ ನೀಡಿ ಮಾತನಾಡಿ, ರಾಜ್ಯದ ಅಭಿವೃದ್ಧಿಯ ಪಥದಲ್ಲಿ ಸರಕಾರ ಇಡಬೇಕಾದ ಹೆಜ್ಜೆಗಳನ್ನು ಈ ಸಮೀಕ್ಷೆ ಗುರುತಿಸಲಿದೆ. ಒಟ್ಟಿನಲ್ಲಿ ರಾಜ್ಯದ ಮುಂದಿನ ಪೀಳಿಗೆಗೆ ಅನುಕೂಲ ಕರವಾದ ಈ ಸಮೀಕ್ಷೆಯನ್ನು ಎಲ್ಲಾ ಜನರು ಸ್ವಾಗತಿಸಿ ಸಮೀಕ್ಷೆಯ ಯಶಸ್ವಿಗೆ ಸಹಕಾರ ನೀಡಬೇಕಾದುದು ಎಲ್ಲರ ಜವಾಬ್ದಾರಿಯಾಗಿದೆ ಎಂದರು.
ಈ ವೇಳೆ ತಹಸಿಲ್ದಾರ್ ಕರೆಪ್ಪ ಬೆಳ್ಳಿ ಮಾತನಾಡಿ, ಸಮೀಕ್ಷೆಗಾಗಿ ಸರಕಾರಿ ಶಾಲಾ ಶಿಕ್ಷಕರನ್ನು ನಿಯುಕ್ತಿಗೊಳಿಸಲಾ ಗಿದೆ. ಸಂಪೂರ್ಣವಾಗಿ ತಂತ್ರಜ್ಞಾನ ಆಧಾರಿತವಾಗಿ ಆಪ್ ಮೂಲಕ ಆನ್‌ಲೈನ್‌ನಲ್ಲಿ ಈ ಸಮೀಕ್ಷೆ ನಡೆಯಲಿದೆ. ಇದು ರಾಜ್ಯ ಸರ್ಕಾರದ ಅತ್ಯಂತ ಮುಖ್ಯವಾದ ಯೋಜನೆಯಾಗಿದ್ದು ಸಮೀಕ್ಷೆಯ ದತ್ತಾಂಶ ಸಂಗ್ರಹವು ಶೀಘ್ರವಾಗಿ ನಡೆಯಲಿದೆ. ಪ್ರತಿ ಮನೆಯನ್ನು ಗುರುತಿಸಲು ವಿದ್ಯುತ್ ಸಂಪರ್ಕದ ಮನೆಗಳಿಗೆ ಈಗಾಗಲೇ ಯು.ಎಚ್. ಆಯ್. ಡಿ ಸಂಖ್ಯೆಯನ್ನು ರಾಜ್ಯಾದ್ಯಂತ ಎಸ್ಕಾಂಗಳ ಸಹಾಯದಿಂದ ನೀಡಲಾಗಿದೆ. ಇದರಿಂದಾಗಿ ಯಾವುದೇ ಮನೆಗಳು ಬಿಟ್ಟು ಹೋಗುವ ಸಾಧ್ಯತೆಗಳು ಬಲುವಿರಳ. ಓರ್ವ ಸಮೀಕ್ಷಕ ಅಂದಾಜು ೧೧೦ ಮನೆಗಳನ್ನು ಸಮೀಕ್ಷೆಗೆ ಒಳಪಡಿಸಲಿದ್ದಾರೆ. ಈ ಸಮೀಕ್ಷೆಗೆ ಒಟ್ಟು ೫೧೩ ಶಿಕ್ಷಕರನ್ನು ನಿಯೋಜನೆ ಮಾಡಲಾಗಿದೆ. ಅದರಲ್ಲಿ ಸಿಂದಗಿ ತಾಲೂಕಿಗೆ ೩೨೦ ಶಿಕ್ಷಕರು ಮತ್ತು ಆಲಮೇಲ ತಾಲೂಕಿಗೆ ೧೯೩ ಜನ ಶಿಕ್ಷಕರನ್ನ ನೇಮಕ ಮಾಡಲಾಗಿದೆ ಒಟ್ಟು ೫೧೩ ಜನ ಶಿಕ್ಷಕರು ಈ ಗಣತಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ೨೬ ಜನ ಮೇಲ್ವಿಚಾರಕರನ್ನಾಗಿ ನೇಮಕ ಮಾಡಲಾಗಿದೆ. ಎಲ್ಲಾ ಗಣತಿ ದಾರರಿಗೆ ಇದೇ ತಿಂಗಳು ೧೬ ಮತ್ತು ೨೦ರಂದು ಸೂಕ್ತ ತರಬೇತಿ ನೀಡಲಾಗಿದೆ. ಸಿಂದಗಿ ತಾಲೂಕಿನಲ್ಲಿ ಒಟ್ಟು ೩೫,೪೧೮ ಮನೆಗಳು ಹಾಗೂ ಆಲಮೇಲ ತಾಲೂಕಿನಲ್ಲಿ ಒಟ್ಟು ೨೦೯೪೮ ಮನೆಗಳು ಒಟ್ಟು ಸಿಂದಗಿ ಮತಕ್ಷೇತ್ರಕ್ಕೆ ಸಂಬAಧಿಸಿದAತೆ ೫೬೩೬೬ ಮನೆಗಳ ಸಮೀಕ್ಷೆ ನಡೆಯಲಿದೆ. ಗಣತಿದಾರರ ಜೊತೆಗೆ ಆಶಾ ಕಾರ್ಯಕರ್ತರು ಮಹಿಳಾ ಸ್ವಸಹಾಯ ಸಂಘದವರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ಮಹಾಂತೇಶ ಯಡ್ರಾಮಿ, ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ ರವಿಂದ್ರ ಬಂಥನಾಳ, ಮುಖ್ಯೋಪಾದ್ಯಯಿನಿ ಬಂಗಾರಿ ಕೊಡಿಯಾ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಶಿಕ್ಷಕ ವರ್ಗ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು

