ಡಾ.ಸುರೇಶ ನೆಗಳಗುಳಿ- ಕುವಲಯ ಗಜಲ್ ಸಂಕಲನ ಬಿಡುಗಡೆ, ಸನ್ಮಾನ

Must Read

ಮಂಗಳೂರು- ಮಂಗಳೂರಿನ ಕಣಚೂರು ಹಾಗೂ ಮಂಗಳಾ ಆಸ್ಪತ್ರೆಯ ವೈದ್ಯ , ಮೂಲವ್ಯಾಧಿ ಕ್ಷಾರತಜ್ಞ ಹಾಗೂ ಬರಹಗಾರ ಡಾ ಸುರೇಶ ನೆಗಳಗುಳಿ ಇವರ ನೂತನ ಗಜಲ್ ಸಂಕಲನ “ಕುವಲಯ – ನೂರೆಂಟು ಗಜಲ್ ಗಳು” ಪುಸ್ತಕವು ದಿನಾಂಕ 7 ಸೆಪ್ಡೆಂಬರ್ 25 ರಂದು ಬೀದರ್ ನ ಸರಕಾರೀ ನೌಕರರ ಸಹಕಾರೀ ಸಭಾ ಭವನದಲ್ಲಿ ನಡೆದ ಕರ್ನಾಟಕ ರಾಜ್ಯ ದ್ವಿತೀಯ ಗಜಲ್ ಸಮ್ಮೇಳನದಲ್ಲಿ ಲೋಕಾರ್ಪಣೆಯಾಯಿತು.

ಖ್ಯಾತ ಗಜಲ್ ಕಾರ ಮಹಮ್ಮದ್ ಬಡ್ಡೂರು ಉದ್ಘಾಟಿಸಿದ ಈ ಸಮಾರಂಭದಲ್ಲಿ ಸಮ್ಮೇಳನಾಧ್ಯಕ್ಷ ಡಾ.ಕಾಶೀನಾಥ ಅಂಬಲಗೆ, ಅಧ್ಯಕ್ಷ ರಂಗಸ್ವಾಮಿ ಸಿದ್ದಯ್ಯ, ಸಂಘಟಕ ಸಂಜೀವ ಅತಿವಾಳೆ ಕಾರ್ಯದರ್ಶಿ ಮಹೀಪಾಲ ರೆಡ್ಡಿ ಸೇಡಂ, ಅಬ್ದುಲ್ ಹೈ ತೋರಣಗಲ್,ಬೀದರ ನಗರಾಭಿವೃದ್ಧಿ ಅಧ್ಯಕ್ಷ , ಬಸವರಾಜ ಜಾಬ ಶೆಟ್ಟಿ, ಗಜಲ್ ಗೋಷ್ಠಿ ಅಧ್ಯಕ್ಷ ವೈ ಎಮ್ ಯಾಕೊಳ್ಳಿ, ,ಸರಕಾರೀ‌ ನೌಕರರ ಸಂಘದ ಅಧ್ಯಕ್ಷ ಸೋಮಶೇಖರ ಬಿರಾದಾರ ಚಿದ್ರಿ, ಪೂರ್ವಧ್ಯಕ್ಷೆ ಪ್ರಭಾವತಿ ದೇಸಾಯಿ ಮತ್ತಿತರರು ಈ ಸಮಾರಂಭಕ್ಕೆ ಸಾಕ್ಷಿಯಾದರು.

ಖ್ಯಾತ ಕವಿ ಹಾ ಮ ಸತೀಶ, ಖ್ಯಾತ ಬರಹಗಾತಿ ರತ್ನಾ ಕೆ ಭಟ್ , ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಹಸೀನಾ ಬೇಗಂ, ಎ ಕಮಲಾಪುರ ಸುರಪುರ , ಸಿದ್ಧರಾಮ‌ ಹೊನಕಲ್ ,ಜ್ಯೋತಿ ಮಾಳಿ, ರತ್ನರಾಯ ಮಲ್ಲ, ವಿಜಯಕುಮಾರ್ ಗೌರ, ಅನ್ನಪೂರ್ಣ ಆರ್ ಹಿರೇಮಠ, ರೇಣುಕಾ‌ ತಾಯಿ ಸಂತಬಾ ರೇಮಾಜಿ, ಅರುಣ ಕೂಡ್ಲಿಗಿ, ಆನಂದ ಬೋವಿ, ಅರುಣಾ ನಾಗೇಂದ್ರ, ಈಶ್ವರ ಮಮದಾಪೂರ,ಹಮೀದಾ ಬೇಗಂ ದೇಸಾಯಿ , ರಾಠೋಡ್ ಮತ್ತಿತರರು ಉಪಸ್ಥಿತರಿದ್ದರು

ಈ ಸಂದರ್ಭದಲ್ಲಿ ಡಾ.ಸುರೇಶ ನೆಗಳಗುಳಿಯವರನ್ನು ಹಾರ ಶಾಲು ಸ್ಮರಣಿಕೆಗಳಿಂದ ಸನ್ಮಾನಿಸಲಾಯಿತು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group