Homeಸುದ್ದಿಗಳುಕ್ಷೇತ್ರದ ಅಭಿವೃದ್ಧಿ ಮತ್ತು ನೌಕರರ ಹಿತರಕ್ಷಣೆಗೆ ಬದ್ಧ: ಶಾಸಕ ವಿಶ್ವಾಸ ವೈದ್ಯ

ಕ್ಷೇತ್ರದ ಅಭಿವೃದ್ಧಿ ಮತ್ತು ನೌಕರರ ಹಿತರಕ್ಷಣೆಗೆ ಬದ್ಧ: ಶಾಸಕ ವಿಶ್ವಾಸ ವೈದ್ಯ

spot_img

ಸವದತ್ತಿ:- ಬೆಳಗಾವಿ ಡಿಸಿಸಿ ಬ್ಯಾಂಕಿಗೆ ನಿರ್ದೇಶಕರಾಗಿ ಅವಿರೋಧ ಆಯ್ಕೆ ಹಾಗೂ ಸವದತ್ತಿಯ ಪುರಸಭೆಯನ್ನು ನಗರಸಭೆಯನ್ನಾಗಿ ಮಾಡಲು ಶ್ರಮಿಸಿದ ಪ್ರಯುಕ್ತ ಸವದತ್ತಿ ಯಲ್ಲಮ್ಮ ವಿಧಾನ ಸಭಾ ಮತಕ್ಷೇತ್ರದ ಶಾಸಕರಾದ ವಿಶ್ವಾಸ ವಸಂತ ವೈದ್ಯರವನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತಾಲೂಕಾ ಶಾಖೆಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು, ನಂತರ ಮಾತನಾಡಿದ ಅವರು ಕ್ಷೇತ್ರದ ಅಭಿವೃದ್ಧಿ ಹಾಗೂ ತಾಲೂಕಿನ ಸಮಸ್ತ ನೌಕರರ ಹಿತರಕ್ಷಣೆಗಾಗಿ ಬದ್ಧರಾಗಿರುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ನೌಕರ ಸಂಘದ ಅಧ್ಯಕ್ಷರಾದ ಅಶೋಕ ಮುರಗೋಡ, ಖಜಾಂಚಿ ಎಮ್.ಎಸ್.ಮುದಗಲ್ಲ, ಕಾರ್ಯದರ್ಶಿ ಎನ್.ಎನ್.ಕಬ್ಬೂರ, ಉಪಾಧ್ಯಕ್ಷರಾದ ರವಿ ಸಣಕಲ್, ಸಂಘಟನಾ ಕಾರ್ಯದರ್ಶಿಯಾದ ಪವನ ಅಮಠೆ, ಗುರುನಾಥ ಮೇಟಿ, ಹಿರಿಯ ನಿರ್ದೇಶಕರಾದ ಮಲ್ಲಯ್ಯ ಕಂಬಿ, ರಾಮಣ್ಣ ಗುಡಗಾರ, ಶಿಕ್ಷಕ ಸಂಘದ ಅಧ್ಯಕ್ಷರಾದ ಕಿರಣ ಕುರಿ, ಸದಸ್ಯರಾದ ಪ್ರಕಾಶ ಹೆಮ್ಮರಡಿ, ಸುನೀಲ ಏಗನಗೌಡರ, ಶಿಕ್ಷಕರಾದ ಸತೀಶ ಮಿರಜಕರ ಮತ್ತು ನೌಕರ ಸಂಘ ಹಾಗೂ ಶಿಕ್ಷಕರ ಸಂಘದ ಪದಾಧಿಕಾರಿಗಳು, ನಿರ್ದೇಶಕರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group