Homeಸುದ್ದಿಗಳುಶಿವಶಿಂಪಿಗೇರ ಸಮಯದಾಯದ ಅಭಿವೃದ್ಧಿಗೆ ಬದ್ಧ - ಶಾಸಕ ಮನಗೂಳಿ

ಶಿವಶಿಂಪಿಗೇರ ಸಮಯದಾಯದ ಅಭಿವೃದ್ಧಿಗೆ ಬದ್ಧ – ಶಾಸಕ ಮನಗೂಳಿ

spot_img

ಸಿಂದಗಿ– ಸಣ್ಣ ಸಣ್ಣ ಸಮುದಾಯಗಳು ಯಾವತ್ತೂ ನಾವು ಸಣ್ಣ ಸಮುದಾಯದವರು ಎಂದು ಭಾವಿಸಿಕೊಳ್ಳಬಾರದು ಸಣ್ಣ ಸಮುದಾಯದಲ್ಲಿಯೆ ಅತ್ಯಂತ ಮಹತ್ತರವಾದ ಪ್ರತಿಭೆಗಳಿರುತ್ತವೆ. ಅಂತಹ ಪ್ರತಿಭೆಗಳನ್ನು ಹೊರತರಲು ಸರಕಾರ ಬದ್ಧವಿದೆ ಅದಕ್ಕೆ ಪಟ್ಟಣದಲ್ಲಿ ಶ್ರೀ ಶಿವದಾಸಿಮಯ್ಯ ಶಿವಶಿಂಪಿ ಸಮುದಾಯ ಸಭಾಭವನ ನಿರ್ಮಾಣಗೊಳ್ಳಲು ರಾಜ್ಯ ಸರ್ಕಾರದಿಂದ  ರೂ. 25 ಲಕ್ಷ ಅನುದಾನವನ್ನು ನೀಡಲಾಗುವುದು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.

ಪಟ್ಟಣದ ಲೋಣಿ ಲೇ ಔಟ್ ದಲ್ಲಿ ಸೋಮವಾರ ಶ್ರೀ ಶಿವದಾಸಿಮಯ್ಯ ಶಿವಸಿಂಪಿ ಸಮಾಜ ವಿಕಾಸ ಸಂಘದಿಂದ ನಡೆದ ಸಭಾಭವನದ ಮತ್ತು ಕಾರ್ಯಾಲಯದ ಭೂಮಿ ಪೂಜೆಯನ್ನು ನೆರವೇರಿಸಿ ಮಾತನಾಡಿ, ಸಣ್ಣ ಸಣ್ಣ ಸಮುದಾಯಗಳ ಜೀರ್ಣೋದ್ದಾರ ಸೇರಿದಂತೆ ಇಂತಹ ಸಮುದಾಯಗಳನ್ನು ಶಿಕ್ಷಣ, ಸಾಮಾಜಿಕ, ಆರೋಗ್ಯವಾಗಿ ಮತ್ತು ಎಲ್ಲ ರೀತಿಗಳಲ್ಲಿ ಅಭಿವೃದ್ದಿಪಡಿಸುವ ಕನಸನ್ನು ಹೊತ್ತುಕೊಂಡಿದ್ದೇನೆ. ಪಾಲಕರು ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ ನೀಡಬೇಕು ಎಂದ ಅವರು ನಮ್ಮ ತಂದೆಯ ಕಾಲದಿಂದಲೂ ಶಿವಶಿಂಪಿ ಸಮುದಾಯ ನಮ್ಮ ಮನೆತನದ ಮೇಲೆ ಅತಿಯಾದ ಗೌರವವನ್ನಿಟ್ಟುಕೊಂಡಿದೆ ಆ ಸಮುದಾಯಕ್ಕೆ ನಾವು ಸದಾ ಋಣಿಯಾಗಿರುತ್ತೇವೆ ಎಂದು ಅಭಿಮತ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಪತ್ರಕರ್ತ ಶಾಂತೂ ಹಿರೇಮಠ ಮಾತನಾಡಿ, ಸಣ್ಣ ಸಮುದಾಯಗಳು ಒಗ್ಗಟ್ಟಾದಾಗ ಮಾತ್ರ ಎಲ್ಲ ರೀತಿಯ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯ. ಶಿವಶಿಂಪಿ ಸಮುದಾಯ ಕಾಯಕ ನಿಷ್ಠೆಯನ್ನು ಒಳಗೊಂಡಂತ ಸಮುದಾಯವಾಗಿದೆ ತಾಲೂಕಿನಲ್ಲಿ ಈ ಸಮುದಾಯ ಮುಂದೆ ಬರಲು ಸರ್ಕಾರ ಪ್ರಯತ್ನ ಮಾಡಬೇಕು ಎಂದರು.

ಸಮುದಾಯದ ಪ್ರಮುಖ ಪ್ರಭುಲಿಂಗ ಲೋಣಿ, ಸಮಾಜದ ಉಪಾಧ್ಯಕ್ಷ ಡಾ. ವಿಶ್ವರಾಧ್ಯ ಶಿವಶಿಂಪಗೇರ ಮಾತನಾಡಿದರು.

ಕಾರ್ಯಕ್ರಮದಲ್ಲಿ ಸಮಾಜದ ಗೌರವಾಧ್ಯಕ್ಷ ಬಂಡೆಪ್ಪ ಲೋಣಿ, ಅಧ್ಯಕ್ಷ ಅಶೋಕ ಲೋಣಿ, ನ್ಯಾಯವಾದಿ ಬಿ.ಜಿ.ನೆಲ್ಲಗಿ, ಮಂಜುನಾಥ ಬಿಜಾಪೂರ, ಪ್ರವೀಣ ಲೋಣೀ,  ಮಲ್ಲಿಕಾರ್ಜುನ ಲೋಣಿ, ವಿಶ್ವನಾಥ ಶಿವಶಿಂಪಗೇರ, ಮಲ್ಲಿಕಾರ್ಜುನ ಶಿವಶಿಂಪಗೇರ, ವಿಶ್ವನಾಥ ಶಿವಶಿಂಪಗೇರ, ಭೋಜಪ್ಪ ಅತನೂರ, ಶಿವಕುಮಾರ ಶಿವಶಿಂಪಗೇರ, ಗಂಗಾಧರ ಶಿವಶೀಂಪಗೇರ, ಡಾ. ಸಾತಪ್ಪ ಶಿವಶೀಂಪಗೇರ, ಕಾಶೀನಾಥ ಲೋಣಿ, ಸಂಗಪ್ಪ ತಾಳಿಕೋಟಿ,  ವಿಜಯಲಕ್ಷ್ಮೀ ಲೋಣಿ, ಸೂರ್ಯಕಾಂತ ಅತನೂರ, ಡಾ. ಬಾಬು ಶಿವಶಿಂಪಗೇರ, ಚಂದ್ರಶೇಖರ ಹರಿಹರ, ಗುರುಪಾದ ಲೊಣಿ, ಸುರೇಶ ಅತನೂರ ಸೇರಿದಂತೆ ಇತರರು ಇದ್ದರು.

RELATED ARTICLES

Most Popular

error: Content is protected !!
Join WhatsApp Group