ಬೆಳಗಾವಿ – ದಿನಾಂಕ 24/12/2021 ರಂದು ಬೆಳಗಾವಿ ಜಲಜೀವನ್ ಮಿಷನ್ ಅಡಿ ಜಿಲ್ಲಾ ಪಂಚಾಯತ ಬೆಳಗಾವಿ, ಗ್ರಾಮೀಣ ಕುಡಿಯುವ ನೀರು ಹಾಗು ನೈರ್ಮಲ್ಯ ಇಲಾಖೆ ಬೆಳಗಾವಿ ವಿಭಾಗ, RUDA ಸಂಸ್ಥೆಯ ಬೆಳಗಾವಿ ಇವರ ಸಹಯೋಗದೊಂದಿಗೆ ಬೆಳಗಾವಿ ತಾಲೂಕಿನ ಅಗಸಗಾ ಗ್ರಾಮ ಪಂಚಾಯತಿಯ ಚಲವಿನಹಟ್ಟಿ ಗ್ರಾಮದಲ್ಲಿ ಸಮುದಾಯ ವಂತಿಗೆ ಕುರಿತು ಗ್ರಾಮದ ಜನಪ್ರತಿನಿಧಿಗಳ ಹಾಗು ಗ್ರಾಮಸ್ಥರ ಸಭೆ ತೆಗೆದುಕೊಂಡು ಯೋಜನೆ ಕುರಿತು ಮಾಹಿತಿ ನೀಡಿ ಸಮುದಾಯ ವಂತಿಗೆ ತುಂಬಲು ಮನವೊಲಿಸಲಾಯಿತು.
ಗ್ರಾಮ ದಲ್ಲಿ ಒಟ್ಟು 281 ಕುಟುಂಬಗಳಿದ್ದು ಒಂದು ಕುಟುಂಬ ದಿಂದ 1500 ರೂಪಾಯಿ ಸಮುದಾಯ ವಂತಿಗೆ ಸಂಗ್ರಹಣೆ ಮಾಡಲು ಸಭೆ ಯಲ್ಲಿ ಗ್ರಾಮಸ್ಥರು ತೀರ್ಮಾನ ತಗೆದುಕೊಂಡು ಇಂದು 10,000 ಹಣ ಸಂಗ್ರಹಣೆ ಮಾಡಲಾಯಿತು. ಒಟ್ಟು 4,70,000 ಸಮುದಾಯ ವಂತಿಗೆ ಸಂಗ್ರಹಣೆ ಮಾಡಿ ಕೊಡುವುದಾಗಿ ಗ್ರಾಮ ಪಂಚಾಯತ್ ಸದಸ್ಯರು, ಗ್ರಾಮದ ಹಿರಿಯರು ತಿಳಿಸಿದ್ದಾರೆ.ಈ ಸಂದರ್ಭದಲ್ಲಿ ಅಗಸಗಾ PDO,DPM, ISA Team leader, HRD Expert,ಗ್ರಾಮ ಪಂಚಾಯತ್ ಸದಸ್ಯರು, ಗ್ರಾಮ ಪಂಚಾಯತ್ ಸಿಬ್ಬಂದಿಗಳು, ಗ್ರಾಮ ದ ಹಿರಿಯರು ಉಪಸ್ಥಿತರಿದ್ದರು.