ಮೂಡಲಗಿ ಮುಖ್ಯಾಧಿಕಾರಿ ವಿರುದ್ಧ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು; ತನಿಖೆಗೆ ಪಿಎಸ್ಐಯವರಿಗೆ ಸೂಚನೆ

Must Read

ಮೂಡಲಗಿ – ಮೂಡಲಗಿಯ ರಿ.ಸ.ನಂ. ೪೯೮ ರಲ್ಲಿ ಅನಧಿಕೃತವಾಗಿ ಲೇಔಟ್ ತಯಾರಿಸಿದ್ದಲ್ಲದೆ, ನಿವಾಸಿಯೊಬ್ಬನ ನಿಜವಾದ ಜಾಗಕ್ಕಿಂತಲೂ ಹೆಚ್ಚಿನ ವಿಸ್ತಾರದಲ್ಲಿ ಶೆಡ್ ಹಾಕಿಕೊಳ್ಳಲು ಅನಧಿಕೃತವಾಗಿ ಪರವಾನಿಗೆ ನೀಡಿದ್ದಾರೆ ಎಂದು ಆರೋಪಿಸಿ ಮೂಡಲಗಿ ಪುರಸಭೆಯ ಮುಖ್ಯಾಧಿಕಾರಿ ದೀಪಕ ಹರ್ದಿಯವರ ವಿರುದ್ಧ ಎಸ್ ಪಿ ಯವರಿಗೆ ದೂರು ನೀಡಲಾಗಿದ್ದು ದೂರಿನ ಬಗ್ಗೆ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳಲು ಎಸ್ ಪಿಯವರು ಮೂಡಲಗಿ ಪಿಎಸ್ಐ ಯವರಿಗೆ ನಿರ್ದೇಶನ ನೀಡಿದ್ದಾರೆ.

ಮೂಡಲಗಿ ರಿ.ಸ.ನಂ ೪೯೮/೩.ಬ ( ಈಗ ಟಿಎಂಸಿ ಸಂಖ್ಯೆ ೧೧೮೧/ಎಚ್ ) ಇದರಲ್ಲಿ ಉಮೇಶ ಬೆಳಕೂಡ ಇವರ ಜಾಗವನ್ನು ಈರಪ್ಪ ಪತ್ತಾರ ಎಂಬಾತ ಅತಿಕ್ರಮಣ ಮಾಡಿದ್ದು ಅದಕ್ಕೆ ಮೂಡಲಗಿ ಪುರಸಭೆಯ ಮುಖ್ಯಾಧಿಕಾರಿ ಹರ್ದಿಯವರು ಅನೈತಿಕವಾಗಿ ಸಹಕರಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಕಳೆದ ವರ್ಷದ ದಿ.೧೯.೧೧.೨೦೨೧ ರಂದು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ನೀಡಲಾದ ದೂರಿನಲ್ಲಿ ಮುಖ್ಯಾಧಿಕಾರಿಯು ೧) ಜಾಗವು ರಸ್ತೆಗೆ ಹೋಗಿದೆ ಎಂದು ಸುಳ್ಳು ಹೇಳಿದ್ದು, ೨) ನಕಲಿ ಲೇಔಟ್ ತಯಾರಿಸಿದ್ದು, ೩) ೨೦೧೧ ರಿಂದ ಪುರಸಭೆಗೆ ಎಡತಾಕುತ್ತಿದ್ದರೂ ಸರಿಯಾದ ದಾಖಲೆ ನೀಡದೆ ಮೋಸ ಮಾಡಿದ್ದಕ್ಕಾಗಿ ಮುಖ್ಯಾಧಿಕಾರಿ ಹಾಗೂ ಇಂಜಿನೀಯರ್ ವಿರುದ್ಧ ಎಫ್ಆಯ್ಆರ್ ದಾಖಲಿಸಬೇಕು ಹಾಗೂ ತನ್ನ ಜಾಗ ಕೇವಲ ೨೨ ಅಡಿ ಎಂದು ಗೊತ್ತಿದ್ದರೂ ೪೦ ಅಡಿಯಷ್ಟು ಜಾಗದಲ್ಲಿ ಅತಿಕ್ರಮಣದಿಂದ ಶೆಡ್ ನಿರ್ಮಾಣ ಮಾಡಿರುವ ಈರಪ್ಪ ಪತ್ತಾರ ಈತನ ಮೇಲೂ ಎಫ್ಆಯ್ಆರ್ ದಾಖಲಿಸಬೇಕು ಎಂದು ಆಗ್ರಹಿಸಲಾಗಿದೆ

ಪುರಸಭೆಯ ದಾಖಲೆಗಳ ಪ್ರಕಾರ ದಿ. ೨.೦೧.೨೦೧೧ ರಲ್ಲಿ ಸಾರ್ವಜನಿಕ ಖಾತಾ ಬದಲಾವಣೆಗಳ ಬಗ್ಗೆ ಬಂದ ಅರ್ಜಿಗಳ ಪ್ರಕಾರ ಈರಪ್ಪ ನಾಮದೇವ ಪತ್ತಾರ ಈತನ ಜಾಗ ೨೨×೧೦೦ ಎಂದು ದಾಖಲಾಗಿದ್ದರೂ ಆತ ಅನಧಿಕೃತವಾಗಿ ೪೦ ಫೂಟ ಜಾಗದಷ್ಟು ಶೆಡ್ ನಿರ್ಮಾಣ ಮಾಡಿದ್ದಾನಲ್ಲದೆ ತಾನು ಅತಿಕ್ರಮಣ ಮಾಡಿರುವ ಉಮೇಶ ಬೆಳಕೂಡ ಅವರ ಮೇಲೆಯೇ ಸುಳ್ಳು ದೂರು ನೀಡಿ ಕೋರ್ಟಿಗೆ ಎಡತಾಕುವಂತೆ ಮಾಡಿದ್ದಾನೆ ಇದಕ್ಕೆಲ್ಲ ಪುರಸಭೆ ಮುಖ್ಯಾಧಿಕಾರಿಗಳ ಅನೈತಿಕ ಸಹಕಾರ ಇದೆ. ಆದ್ದರಿಂದ ಅವರ ಮೇಲೆ ಕ್ರಿಮಿನಲ್ ಕೇಸು ದಾಖಲಿಸಬೇಕೆಂದು ಎಂದು ದೂರಿನಲ್ಲಿ ಆಗ್ರಹಿಸಲಾಗಿದೆ.

ದೂರಿನ ಬಗ್ಗೆ ಮುಂದಿನ ವಿಚಾರಣೆ ಕೈಗೊಳ್ಳಬೇಕೆಂದು ವರಿಷ್ಠಾಧಿಕಾರಿಗಳು ಮೂಡಲಗಿ ಪಿಎಸ್ಐ ಯವರಿಗೆ ಆದೇಶ ನೀಡಿದ್ದು ಅವರು ಯಾವ ರೀತಿಯ ಕ್ರಮ ಕೈಗೊಳ್ಳುವರೋ ಕಾದು ನೋಡಬೇಕು.

Latest News

ವಿದ್ಯಾರ್ಥಿಗಳು ಮೌಲ್ಯಯುತ ಬದುಕಿಗೆ ಆದ್ಯತೆ ನೀಡಬೇಕು – ಸಂತೋಷ ಬಂಡೆ

ಸಿಂದಗಿ: ಇಂದಿನ ಯುವ ವಿದ್ಯಾರ್ಥಿಗಳು ಪರಿಶ್ರಮ, ಶಿಸ್ತು, ಸಮಯ ಪಾಲನೆ ಹಾಗೂ ನಿರಂತರ ಜ್ಞಾನರ್ಜನೆಯೊಂದಿಗೆ ಮೌಲ್ಯಯುತ ಬದುಕಿಗೆ ಮೊದಲ ಆದ್ಯತೆ ನೀಡಿ ಸದೃಢ ಸಮಾಜ ನಿರ್ಮಾಣ...

More Articles Like This

error: Content is protected !!
Join WhatsApp Group