ಮಾಜಿ ಸಚಿವ ಪ್ರಭು ಚೌಹಾಣ್ ಪುತ್ರ ಪ್ರತೀಕ್ ವಿರುದ್ಧ ಅತ್ಯಾಚಾರ ಪ್ರಕರಣ.

Must Read

ಬೀದರ – ಮಾಜಿ ಸಚಿವ ಪ್ರಭು ಚೌಹಾಣ್ ಪುತ್ರ ಪ್ರತೀಕ ಲೈಂಗಿಕ ಕಿರುಕುಳ ದಿನಕ್ಕೊಂದು ರೂಪ ಪಡೆಯುತ್ತಿದ್ದು ಪ್ರಭು ಚೌಹಾಣ ವಿರುದ್ಧವೇ ಪ್ರಕರಣ ದಾಖಲಿಸುವಂತೆ ಸಂತ್ರಸ್ತ ಯುವತಿಯ ತಾಯಿಯಿಂದ ದೂರು ದಾಖಲಾಗಿದೆ.

ಬೀದರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿದ ಸಂತ್ರಸ್ತೆಯ ತಾಯಿ ಸುಲೋಚನಾ ದೂರಿನಲ್ಲಿ ಹೊಕ್ರಾಣಾ ಪೊಲೀಸರ ವಿರುದ್ದ ಅಸಮಾಧಾನ ಹೊರಹಾಕಿದ್ದಾರೆ

ಹೊಕ್ರಾಣಾ ಪೊಲೀಸರು ಚೌಹಾಣ್ ಸಂಬಂಧಿಯು ನೀಡಿದ ‌ಸುಳ್ಳು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನನ್ನ ಗಂಡ ನಾಮದೇವ ರಾಠೋಡ್ ಜುಲೈ 5 ನೇ ತಾರೀಖು ಘಟನೆ ದಿನ ನಮ್ಮ ಜೊತೆ ಇರಲೇ ಇಲ್ಲ. ಆದರೂ ಅವರನ್ನು ಎ1 ಆರೋಪಿಯನ್ನಾಗಿ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದು ಆಘಾತಕಾರಿ ಸಂಗತಿ, ನಾವು ಮಹಿಳಾ ಆಯೋಗಕ್ಕೆ ದೂರು ನೀಡಿದ ಬಳಿಕ ಇಲ್ಲಿ ದೂರು ದಾಖಲಿಸಿದ್ದಾರೆ ಎಂದಿದ್ದಾರೆ.

ಘಟನೆಯ ದಿನ ನಮ್ಮ ಮೊಬೈಲ್ ಹಾಗು ಚಿನ್ನದ ಲಾಕೆಟ್ ಚೌಹಾಣ್ ಕುಟುಂಬಸ್ಥರ ಬಳಿಯೇ ಇದೆ. ಮೊಬೈಲ್‌ನಲ್ಲಿ ಪ್ರತೀಕ್ ಚೌಹಾಣ ಹಾಗು ಸಂತ್ರಸ್ತೆ ಯುವತಿಯ ಎಲ್ಲ ಸಾಕ್ಷ್ಯಗಳಿವೆ. ಪೊಲೀಸರು ಅದನ್ನ ಕೊಡಿಸುವ ಭರವಸೆ ನೀಡಿದ್ದರು, ಆದರೆ ಇದುವರೆಗೆ ಕೊಡಿಸಿಲ್ಲ. ಚೌಹಾಣ್ ಸಂಬಂಧಿ ನೀಡಿರುವ ಹುಸಿ ಪ್ರಕರಣ ರದ್ದುಗೊಳಿಸಿ, ಚೌಹಾಣ್ ವಿರುದ್ದ ದೂರು ದಾಖಲಿಸುವಂತೆ ಎಸ್‌ಪಿಗೆ ಮನವಿ‌ ಮಾಡಿಕೊಂಡಿದ್ದಾರೆ.
ಇತ್ತ ಅತ್ಯಾಚಾರ ಕೇಸ್ ದಾಖಲಾಗುತ್ತಿದ್ದಂತೆ ಮೊಬೈಲ್ ಆಫ್ ಮಾಡಿ ತಲೆಮರೆಸಿಕೊಂಡಿರೋ ಪ್ರತೀಕ ಚೌಹಾಣ್ ಗಾಗಿ ಪೊಲೀಸರ ತೀವ್ರ ಹುಡುಕಾಟ ನಡೆದಿದೆ.
ಬೀದರ್ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರತೀಕ ಚೌಹಾಣ್ ವಿರುದ್ಧ ದಾಖಲಾಗಿದ್ದ ಅತ್ಯಾಚಾರ ಕೇಸ್ ಇತ್ತ ಸಂತ್ರಸ್ತೆ ಯುವತಿಯೊಂದಿಗೆ ಸ್ಥಳ ಮಹಜರು ನಡೆಸುತ್ತಿರುವ ಪೊಲೀಸರು. ಶಿರಡಿಯ ಸನ್ & ಸ್ಯಾಂಡ್ ಫೈವ್ ಸ್ಟಾರ್ ಹೋಟೆಲ್‌ನಲ್ಲಿ ಪೊಲೀಸರಿಂದ ಸ್ಥಳ ಮಹಜರು ಪೂರ್ಣಗೊಂಡಿದೆ. ಇಂದು ಮುಂಬಯಿಗೆ ತೆರಳಿ ಸ್ಥಳ ಮಹಜರು ನಡೆಸುವ ಸಾಧ್ಯತೆಯಿದೆ.

ವರದಿ : ನಂದಕುಮಾರ ಕರಂಜೆ, ಬೀದರ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group