spot_img
spot_img

ನೇಹಾ ಹತ್ಯೆ ಖಂಡಿಸಿ ಮೋಂಬತ್ತಿ ಹಚ್ಚಿ ಪ್ರತಿಭಟನೆ

Must Read

spot_img
- Advertisement -

ಸಿಂದಗಿ – ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದ ನೇಹಾ ಕೊಲೆಯನ್ನು ಖಂಡಿಸಿ ರವಿವಾರ ಮಹಿಳಾ ಜಾಗರಣ ವೇದಿಕೆಯಡಿಯಲ್ಲಿ ವಿವಿಧ ಮಹಿಳಾ ಸಂಘಟನೆಗಳಿಂದ ಮೇಣದ ಬತ್ತಿಯನ್ನು ಉರಿಸಿ ಪ್ರತಿಭಟನೆ ನಡೆಸಿದರು.

ಈ ವೇಳೆ ಮಹಿಳಾ ಜಾಗರಣ ವೇದಿಕೆಯ ಅಧ್ಯಕ್ಷರಾದ ಶೈಲಜಾ ಸ್ಥಾವರಮಠ, ಮಾತನಾಡಿ ನೇಹಾನನ್ನು ಕೊಂದ ವ್ಯಕ್ತಿಗೆ ಕಠಿಣ ಶಿಕ್ಷೆ ನೀಡಿ ನೇಣಿಗೆ ಏರಿಸಬೇಕು . ನಮ್ಮ ದೇಶದ ಕಾನೂನು ಬದಲಾಗಬೇಕು ವಿಕೃತ ಮನಸ್ಸಿನ. ಕ್ರೂರತ್ವ,ಮೃಗತ್ವ ಮೆರೆಯುತ್ತಿರುವ ಪೀಳಿಗೆ ಗಳಿಗೆ ಕಡಿವಾಣ ಹಾಕಲು ಕಾನೂನು ಬದಲಾವಣೆ ಮಾಡಲೇ ಬೇಕು . ಇಂತಹ ಮನಕಲಕುವ ಸಂದರ್ಭದಲ್ಲಿ ಯಾವ ನ್ಯಯಾವಾದಿಗಳೂ ಅಪರಾಧಿ ಪರ ವಾದ ಮಂಡಿಸಬಾರದು ..ಆಗ ಮಾತ್ರ ಅವಳ ಆತ್ಮಕ್ಕೆ ಶಾಂತಿ ದೊರಕಲಿದೆ. ಮಹಿಳೆಯನ್ನು ಪೂಜಿಸುವ ದೇಶದ ಲ್ಲಿ ಈ ರೀತಿಯ ಪ್ರಕರಣಗಳು ಸಲ್ಲದು ಎಂದರು.

ಈ ವೇಳೆ ವೀರಶೈವ ಮಹಾಸಭಾದ ಅಧ್ಯಕ್ಷರಾದ ಮಹಾದೇವಿ ಹಿರೇಮಠ, ಪದಾಧಿಕಾರಿಗಳ ಶಂಕುತಲಾ ಹಿರೇಮಠ, ಶಾಮಲಾ ಮಂದೇವಾಲಿ, ಮಹಾದೇವಿ ಹಿರೇಮಠ, ನೀವೇದಿತಾ ಸಂಸ್ಥೆಯ ರಾಜೇಶ್ವರಿ ಪಾಟೀಲ, ಮೇನಕಾ ಗುಡ್ಡಳ್ಳಿ , ಜಾನಪದ ಪರಿಷತ್ತಿನ ಶೈನಾಬಿ ಮಸಳಿ, ಸಾಹಿತ್ಯ ಪರಿಷತ್ತಿನ ಶೋಭಾ ಚಿಗರಿ, ಸ್ನೇಹಾ ಸಂಸ್ಥೆ ಯ ಅಧ್ಯಕ್ಷರೂ ಶಾರದಾ ಮಂಗಳೂರು, ಮಹಿಳಾ ಸ್ವ ಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷೆ ಶಶಿಕಲಾ ಅಂಗಡಿ ಮೇನಕಾ , ರೈತ ಸಂಘದ ಅಧ್ಯಕ್ಷ ಶ್ಯಾಮಲಾ ಮಂದೇವಾಲಿ ಪದಾಧಿಕಾರಿಗಳಾದ ರೇಣುಕಾ ಮನೂರ, ಬಸಮ್ಮ ಹೋಡ್ಲಾ, ವಿಜಯಲಕ್ಷ್ಮಿ ಹೀರೆಮಠ್. ಮಾಹಾದೇವ ಅಂಬಲಿ, ಶಿವುಕುಮಾರ್ ಬಡನೂರ್, ಪ್ರಶಾಂತ ಬಿರಾದಾರ ಸೇರಿದಂತೆ ಅನೇಕರು ಇದ್ದರು.

- Advertisement -
- Advertisement -

Latest News

೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೆಟಿಕ್ಸ ಕ್ರೀಡಾಕೂಟ 

ದಾನವೀರ ಶ್ರೀ ಶಿರಸಂಗಿ ಲಿಂಗರಾಜ ದೇಸಾಯಿ, ಆಹಾರ ಅಭಿಯಂತ್ರಿಕ ತೋಟಗಾರಿಕೆ ಮಹಾವಿದ್ಯಾಲಯ, ದೇವಿಹೊಸುರ, ಹಾವೇರಿಯಲ್ಲಿ ನಡೆದ ೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೇಟಿಕ್ಸ ಕ್ರೀಡಾ...
- Advertisement -

More Articles Like This

- Advertisement -
close
error: Content is protected !!
Join WhatsApp Group