ಮುಧೋಳ – ಧಾರ್ಮಿಕ ಧುರೀಣ ಮಹಾದಾಸೋಹಿ ಡಾ. ಶರಣಬಸಪ್ಪ ಅಪ್ಪಗಳ ಅಗಲಿಕೆ ತೀವ್ರತರದ ನೋವನ್ನುಂಟು ಮಾಡಿದೆ ಎಂದು ಶ್ರೀ ಸಿದ್ಧಾರೂಢ ಭಾರತಿ ಆಶ್ರಮದ ಶರಣಬಸವ ಶಾಸ್ತ್ರಿಗಳು ಶೋಕ ವ್ಯಕ್ತಪಡಿಸಿದರು..
ತಾಲೂಕಿನ ಮುಗಳಖೋಡದಲ್ಲಿ ಶೋಕಾಚರಣೆಯಲ್ಲಿ ಮಾತನಾಡುತ್ತಾ ಕಲಬುರ್ಗಿಯ ಶರಣಬಸವೇಶ್ವರ ಶ್ರೀ ಮಠದ ಪೂಜ್ಯರಾದ ಶರಣಬಸಪ್ಪ ಅಪ್ಪಗಳು ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕವಾಗಿ ಕ್ರಾಂತಿ ಮಾಡಿದ ಹರಿಕಾರರು ಆಗಿದ್ದರು ಎಂದರು.
ಶೋಕಾಚರಣೆ ಯಲ್ಲಿ ಪಾಲ್ಗೊಂಡ ಶ್ರೀ ಮನ್ ನಿಜಗುಣ ಶಿವಯೋಗಿ ರಾಷ್ಟ್ರೀಯ ಪ್ರತಿಷ್ಠಾನದ ಮುಖಂಡರಾದ ಪಿ.ಬಿ.ಸುಣಗಾರ, ಶಂಕರಗೌಡ ಪಾಟೀಲ, ಶಂಕರ ಕುಲಕರ್ಣಿ, ಮಹಾಲಿಂಗಯ್ಯ ಹಿರೇಮಠ, ಚನ್ನಪ್ಪ ಕುಂಬಾರ, ಲೋಕನಾಯಕಿ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಎಲ್.ಶ್ಯಾಮಲಾ.ಶಿವಲಿಂಗವ್ವ ಪೋಲಿಸ್ ಮುಂತಾದವರು ಶೋಕ ವ್ಯಕ್ತಪಡಿಸಿದರು.