ತಾ ಪಂ ಮತ್ತು ಜಿ ಪಂ ಚುನಾವಣೆ ಫೆಬ್ರುವರಿ ಒಳಗಾಗಿ ನಡೆಸುವಂತೆ ಕಾಳಶೆಟ್ಟಿ ಆಗ್ರಹ

Must Read

ಮೂಡಲಗಿ – ಕರ್ನಾಟಕ ರಾಜ್ಯದಲ್ಲಿ ಪಂಚಾಯಿತಿ ರಾಜ್ ವ್ಯವಸ್ಥೆಯನ್ನು ಸಬಲೀಕರಣಗೊಳಿಸುವ ದಿಸೆಯಲ್ಲಿ ಗ್ರಾಮ ಪಂಚಾಯತಿ,ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳನ್ನು ಫೆಬ್ರುವರಿ ತಿಂಗಳ ಒಳಗಾಗಿ  ನಡೆಸಬೇಕೆಂದು ರಾಜ್ಯ ಸರ್ಕಾರಕ್ಕೆ ಜೆಡಿಎಸ್ ಪಕ್ಷದ ಮೂಡಲಗಿ ತಾಲೂಕಾ ಅಧ್ಯಕ್ಷರಾದ ಪ್ರಕಾಶ ಕಾಳಶೆಟ್ಟಿ ಅವರು ಆಗ್ರಹಿಸಿದ್ದಾರೆ.

ಜಿ ಪಂ ಮತ್ತು ತಾ ಪಂ ಕ್ಷೇತ್ರ ಪುನರ್ ವಿಂಗಡನೆಯನ್ನು ಸರ್ಕಾರ ಒಪ್ಪಿದ್ದರು, ಮೀಸಲಾತಿ ಅಂತಿಮಗೊಳಿಸಿ ಇನ್ನು ಚುನಾವಣೆ ಆಯೋಗಕ್ಕೆ ಕೊಟ್ಟಿಲ್ಲ. ಕೋರ್ಟ್ ಪ್ರಕಾರಗಳು ಸೇರಿ ನಾನಾ ಕಾರಣಗಳನ್ನು ನೀಡಿ ಚುನಾವಣೆ ಮುಂದೂಡಿಕೊಂಡು ಬಂದಿರುವ ಸರ್ಕಾರ ಕೂಡಲೇ ಚುನಾವಣೆ ನಡೆಸಬೇಕು.ಬಹುತೇಕ ಐದು ವರ್ಷಗಳ ಒಂದು ಅವಧಿಯನ್ನು ಜನಪ್ರತಿನಿಧಿಗಳೇ ಇಲ್ಲದೆ ಜಿ ಪಂ ಮತ್ತು ತಾ ಪಂಗಳು ಸೊರಗಿವೆ.

2026 ರಲ್ಲಿ ಚುನಾವಣೆ ನಡೆಸದಿದ್ದರೆ ವಿಕೇಂದ್ರೀಕರಣ ವ್ಯವಸ್ಥೆಯನ್ನು ಆಪೋಶನ ಮಾಡಿದ ಅಪಕೀರ್ತಿ ಕಾಂಗ್ರೆಸ್ ಸರ್ಕಾರಕ್ಕೆ ತಟ್ಟಲಿದೆ. ಚುನಾವಣೆ ನಡೆಸಲು ಸರ್ಕಾರ ಬಯಸಿದರೆ ಕೋರ್ಟ್ ಪ್ರಕರಣ ಇತ್ಯರ್ಥವಾಗಿ ಚುನಾವಣೆ ಹಾದಿ ಸುಸೂತ್ರವಾಗುವುದು ಕಷ್ಟವಲ್ಲ. ಚುನಾವಣೆಯನ್ನು ಮತ್ತಷ್ಟು ಮುಂದೂಡಿಕೊಂಡು ಹೋಗುವುದು ಚುನಾಯಿತ ಸರ್ಕಾರಕ್ಕೆ ಗೌರವ ತರುವುದಿಲ್ಲ ಎಂದು ಅಸಮಾಧಾನ ಹೊರಹಾಕಿದರು.

LEAVE A REPLY

Please enter your comment!
Please enter your name here

Latest News

ಪ್ರಪಂಚಕ್ಕೆ ಯೋಗ ಪರಿಚಯಿಸಿದ್ದು ಭಾರತ- ತಹಶೀಲ್ದಾರ ಗುಡುಮೆ

ಮೂಡಲಗಿ:-ಯೋಗವು ವಿದ್ಯಾರ್ಥಿಗಳಲ್ಲಿ ದೈಹಿಕ ಹಾಗೂ ಮಾನಸಿಕ ಸದೃಢತೆ ತರುವ ಮೂಲಕ ಉತ್ತಮ ವ್ಯಕ್ತಿತ್ವ ರೂಪಿಸುತ್ತದೆ ಎಂದು ಮೂಡಲಗಿ ತಹಶೀಲ್ದಾರ ಶ್ರೀಶೈಲ ಗುಡುಮೆ ಹೇಳಿದರು.ಮೂಡಲಗಿ ಶಿಕ್ಷಣ ಸಂಸ್ಥೆಯ...

More Articles Like This

error: Content is protected !!
Join WhatsApp Group