ಬೆಳಗಾವಿ :-ಕರ್ನಾಟಕ ಶಿಕ್ಷಕರ ಸಂಘಗಳ ಪರಿಷತ್ತಿನ ಬೆಳಗಾವಿ ಜಿಲ್ಲಾ ನೂತನ ಘಟಕದ ಪದಾಧಿಕಾರಿಗಳ ನೇಮಕ, ಮುಂದಿನ ಕಾರ್ಯ ಚಟುವಟಿಕೆಗಳ ಕುರಿತು ಹಾಗೂ ಇತರೆ ಪ್ರಮುಖ ವಿಷಯ ಗಳ ಬಗ್ಗೆ ಚರ್ಚಿಸಲು ಶನಿವಾರ ದಿ 19-07–2025 ರಂದು ಮಧ್ಯಾಹ್ನ 12 ಘಂಟೆಗೆ ಬೆಳಗಾವಿ ನಗರದ ಪ್ರವಾಸಿ ಮಂದಿರದಲ್ಲಿ (ಐಬಿ ) ಜಿಲ್ಲಾಧ್ಯಕ್ಷರಾದ ಬಸವರಾಜ ಫಕೀರಪ್ಪ ಸುಣಗಾರ ರವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆಯನ್ನು ಕರೆಯಲಾಗಿದೆ
ಸಭೆಯಲ್ಲಿ ರಾಜ್ಯಾಧ್ಯಕ್ಷರಾದ ಸಂಗಮೇಶ ಖನ್ನಿನಾಯ್ಕರ,ಪ್ರಧಾನ ಕಾರ್ಯದರ್ಶಿ ಗಳಾದ ಆರ್ ಎಸ್ ಹಿರೇ ಗೌಡರ, ಕೋಶಾಧ್ಯಕ್ಷರಾದ ಡಾ. ಸೋಮಶೇಖರ ಹಲಸಗಿ, ರಾಜ್ಯ ಪರಿಷತ್ ಸದಸ್ಯರಾದ ಡಾ ನಾಗರಾಜ ಮರೆಣ್ಣವರ, ರಾಜ್ಯ ಪ್ರೌಢ ಶಾಲಾ ಶಿಕ್ಷಕರ ಸಂಘದ ಮುಖoಡರಾದ ರಾಮಣ್ಣ ಗುಗವಾಡ,ಕರ್ನಾಟಕ ರಾಜ್ಯ ಸರಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷರಾದ ಸುರೇಶ ಸಕ್ರೆನವರ, ವಿಭಾಗೀಯ ಸಂಚಾಲಕರಾದ ರುದ್ರಪ್ಪ ಬಡಿಗೇರ, ಆರ್ ಎಸ್ ಲಂಬುಗೋಳ, ರಾಜು ಕೋಲಕಾರ, ಸೇರಿದಂತೆ ಹಲವು ವಿವಿಧಸಂಘಸಂಸ್ಥೆಯಪದಾಧಿಕಾರಿಗಳು ಸೇರಿದಂತೆ ಪೂರ್ವ ಶಿಕ್ಷಣ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರು, ಪ್ರೌಢ ಶಾಲಾ ಶಿಕ್ಷಕರು, ಕಾಲೇಜು ಉಪನ್ಯಾಸಕರು ಉಪಸ್ಥಿತರಿರುವರು
ಸಭೆಯಲ್ಲಿ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಲಿದೆ ಜೊತೆಗೆ ವಿವಿಧ ತಾಲೂಕಾ ಘಟಕಗಳ ಪದಾಧಿಕಾರಿಗಳ ಆಯ್ಕೆ ಬಗ್ಗೆ ಚರ್ಚಿಸಲಾಗುವುದು. ಸಂಘದ ವತಿಯಿಂದ ಆಗಸ್ಟ ತಿಂಗಳಿನಲ್ಲಿ ಬಸವ ಚೇತನ ಪ್ರಶಸ್ತಿ ಸಮಾರಂಭ ಆಯೋಜಿಸುವ ಕುರಿತು ನಿರ್ಧಾರ ಮಾಡುವುದು, ಸಂಘದ ಮುಂದಿನ ಕಾರ್ಯ ಚಟುವಟಿಕೆ ಗಳ ಕುರಿತು ಚರ್ಚಿಸಲಾಗುವುದು. ಜೊತೆಗೆ ಜುಲೈ ದಿ 26 ರಂದು ನಡೆಯುವ ಬೆಳಗಾವಿ ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನದ ಬೆಂಬಲಿಸುವ ನಿಟ್ಟಿನಲ್ಲಿ ನಿರ್ಣಯ ತೆಗೆದುಕೊಳ್ಳಲಾಗುವ ಈ ಸಭೆಗೆ ಸರ್ವ ಸಂಘಟನೆಗಳ ಪದಾಧಿಕಾರಿಗಳು, ಆಸಕ್ತ ಶಿಕ್ಷಕರು. ಶಿಕ್ಷಕಿಯರು, ಮುಖಂಡರು ಆಗಮಿಸಿ ಸಭೆ ಯಶಸ್ಸು ಗೊಳಿಸಲು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮನೋಹರ ಹಿರೇಮಠ ವಿನಂತಿಸಿದ್ದಾರೆ