ಅಕ್ರಮ ದಾಸ್ತಾನು ಮಾಡಿದ್ದ ಪಡಿತರ ಅಕ್ಕಿ ಜಪ್ತಿ ; ಕಿಂಗ್ ಪಿನ್ ಬಂಧನ

Must Read

ಬೀದರ – ಬೀದರ ನಗರದ ಹೊರವಲಯದ ಗೋಡೌನ್‌ನಲ್ಲಿ ತೋಟಗಾರಿಕೆ ಇಲಾಖೆಯ ಪಕ್ಕದಲ್ಲಿಯೇ  ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ಅಪಾರ ಪ್ರಮಾಣದ ಅಕ್ಕಿಯನ್ನು ಜಪ್ತಿ ಮಾಡಿರುವ ಪೊಲೀಸರು ಈ ಸಂಬಂಧ ಕಿಂಗ್ ಪಿನ್ ಶಾರುಕ್ ಎಂಬಾತನನ್ನು ಬಂಧಿಸಿದ್ದಾರೆ.

ಆಶ್ಚರ್ಯವೆಂದರೆ ಮಿಡ್ ಡೇ ಮೀಲ್ ಸ್ಕೀಮ್  ಪ್ಯಾಕಿಂಗ್ ಸೀಲ್ ಬಳಸಿ‌ ಕಾಳಸಂತೆಗೆ ಮಾರಾಟ ಮಾಡ್ತಿದ್ದ ಚಾಲಾಕಿಯನ್ನು ತಪಾಸಣೆ ಮಾಡಿದರೂ, ಅಧಿಕಾರಿಗಳನ್ನು ಯಾಮಾರಿಸಲು ಸರ್ಕಾರದ ಸಪ್ಲೈ ಎಂಬಂತೆ ಸೀಲ್ ಮಾಡಿದ್ದ. 

ಕಾಮನ್ ರೈಸ್ ಫಾರ್ ಮಿಡ್ ಡೇ ಮೀಲ್ ಸ್ಕೀಮ್ 2023-24, ನಾಟ್ ಫಾರ್ ಓಪನ್ ಮಾರ್ಕೆಟ್ ಸೇಲ್  ಎಂದು ಪ್ರಿಂಟ್ ಮಾಡಿ ಕಳ್ಳಸಾಗಾಟ ಮಾಡುತ್ತಿದ್ದರು. ಗೋಣಿ ಚೀಲದಿಂದ ಪ್ಲಾಸ್ಟಿಕ್ ಚೀಲಕ್ಕೆ ತುಂಬುವಾಗ ದಾಳಿ ನಡೆಸಿದ ಪೊಲೀಸರು ಇತರೆ ಮೂವರನ್ನೂ ವಶಕ್ಕೆ ಪಡೆದಿದ್ದಾರೆ. ಈ ಅಕ್ಕಿಯನ್ನು  ಆರೋಪಿಗಳು ಅಕ್ರಮವಾಗಿ ತೆಲಂಗಾಣಕ್ಕೆ ಕಳ್ಳಸಾಗಾಟ ಮಾಡುತ್ತಿದ್ದರು ಎಂದು ಶಂಕೆ ವ್ಯಕ್ತಪಡಿಸಲಾಗಿದೆ.

ಗಾಂಧಿಗಂಜ್ ಠಾಣಾ ಪೊಲೀಸರಿಂದ ಈ  ದಾಳಿ ನಡೆಸಿ  ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸಲಾಗುತ್ತಿದೆ.


ವರದಿ: ನಂದಕುಮಾರ ಕರಂಜೆ, ಬೀದರ

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group