ಬೆಳಗಾವಿ: ತಾಲೂಕಿನ ಮುತ್ನಾಳ ಗ್ರಾಮದ, ಸದ್ಯ ಶಿಂದೊಳ್ಳಿಯಲ್ಲಿ ವಾಸವಾಗಿರುವ, ಮಾರ್ಕoಡೆಯ ನಗರದ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ಇತ್ತೀಚೆಗೆ ಸೇವಾ ನಿವೃತ್ತಿ ಯಾಗಿರುವ ಅರುಣ ರಾವಜಿ ಕುಲಕರ್ಣಿಯವರ ಅಭಿನಂದನಾ ಸಮಾರಂಭವು ಇತ್ತೀಚೆಗೆ ಶಿಂದೊಳ್ಳಿಯ ಇಂಡಾಲನಗರದ ಸಮುದಾಯ ಭವನದಲ್ಲಿ ಜರುಗಿತು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಂಸ್ಕೃತ ಪಂಡಿತರಾದ ಎಸ್ ಎನ್ ಭಟ್ ರವರು, ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬಾಬಾಗೌಡ್ರ ಪಾಟೀಲ, ಎ ಎ ಸನದಿ, ಮುಖ್ಯೋಪಾಧ್ಯಾಯರಾದ ಬಸವರಾಜ ಸುಣಗಾರ ರವರು ಜ್ಯೋತಿ ಬೆಳಗಿಸಿ ಉದ್ಘಾಟನೆ ಮಾಡಿ ಕುಲಕರ್ಣಿ ಯವರನ್ನು ಅಭಿನಂದಿಸಿ ಮಾತನಾಡಿದರು.
ಅರುಣ ಕುಲಕರ್ಣಿಹಾಗೂ ಅವರ ಧರ್ಮಪತ್ನಿ ಶ್ರೀಮತಿ ಭಾಗ್ಯಶ್ರೀ ಯವರನ್ನು ವಿವಿಧ ಶಾಲೆಗಳ ಶಿಕ್ಷಕರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಮುತ್ನಾಳ ಹಾಗೂ ಶಿಂದೊಳ್ಳಿ ಗ್ರಾಮದ ಹಿರಿಯರು, ಸನ್ಮಾನಿಸಿ ಅವರ ಅಪರೂಪದ ಒಡನಾಟ ಸ್ಮರಿಸಿ ಅಭಿನಂದಿಸಿದರು.
ತಮ್ಮ ಅಪಾರ ಅನುಭವದ ಕಲಿಕೆಯಿಂದ ವಿದ್ಯಾರ್ಥಿಗಳಿಗೆ ಅಚ್ಚು ಮೆಚ್ಚಿನವರಾಗಿರುವದನ್ನು ಅವರ ಶಿಷ್ಯರು ನೆನಪಿಸಿದರು, ಶಿಕ್ಷಕರಾಗಿ ನಲ್ವತ್ತೊಂದು ವರ್ಷಗಳ ಸುಧೀರ್ಘ ಸೇವೆಯಲ್ಲಿ ಸಾಹಿತಿಗಳಾಗಿ ಹಲವು ಧಾರ್ಮಿಕ ಮೌಲಿಕ ಕೃತಿ ಹೊರ ತಂದಿರುವರು.
ಅವರ ನಿವೃತ್ತಿ ಜೀವನ ಸುಖಮಯವಾಗಲಿ ಎಂದು ಕಾರ್ಯಕ್ರಮ ದಲ್ಲಿ ಹಾರೈಸಲಾಯಿತು, ಅವರ ಜೊತೆಗೆ ಕಾರ್ಯನಿರ್ವಹಿಸಿರುವ ಗುರುಬಳಗ, ಶಿಷ್ಯoದಿರು, ಅಭಿಮಾನಿಗಳು, ಕುಟುಂಬಸ್ಥರು ಆಗಮಿಸಿ ಶುಭ ಕೋರಿದರು.
ಕುಲಕರ್ಣಿ ಯವರನ್ನು ಅಭಿನಂದಿಸಿ ಶ್ರೀಧರ್ ಅಂಗಡಿ, ಉಮೇಶ್ ಸೊಗಲದ, ಆರ್ ವಿ ಜಕಾತಿ, ಎನ್ ಎಸ್ ಕರವಿನಕೊಪ್ಪ, ಪಾಶ್ವಶನಾಥ ಪಾರಿಶ್ವಡ, ಬಿ ಬಿ ಕುಡಚಿ, ವಿ ಎಮ್ ಮುಳ್ಳೂರ ರವರು ನೆನಪಿಸಿ ಮಾತನಾಡಿದರು.
ಅರುಣ ಕುಲಕರ್ಣಿ ಯವರು ಮಾತನಾಡಿ ಸೇವೆಯ ಅನುಭವ ಹಂಚಿಕೊಂಡರು ಕೃತಜ್ಞತೆ ವ್ಯಕ್ತ ಪಡಿಸಿದರು.
ಪ್ರಾರಂಭದಲ್ಲಿ ಶ್ರೀಮತಿ ಅರ್ಚನಾ ಜೋಶಿ ಪ್ರಾರ್ಥಿಸಿದರು, ನಿತ್ಯಾನಂದ ಕುಲಕರ್ಣಿ ಸ್ವಾಗತಿಸಿದರು, ದಿನೇಶ್ ಅಜಮೆರಾ ಕಾರ್ಯಕ್ರಮ ನಿರೂಪಿಸಿದರು.