ಬೈಲಹೊಂಗಲ- ಕರ್ನಾಟಕ ಪತ್ರಕರ್ತರ ಸಂಘದ ಮೂಡಲಗಿ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಉಮೇಶ ಬೆಳಕೂಡ ಅವರನ್ನು ಬೆಂಗಳೂರಿನ ಕೇಂದ್ರ ಬಸವ ಸಮಿತಿಯ ಅಧ್ಯಕ್ಷರಾದ ಡಾ.ಅರವಿಂದ ಬಸಪ್ಪ ಜತ್ತಿ , ಕನ್ನಡ ಸಾಹಿತ್ಯ ಪರಿಷತ್ತಿನ ಬೆಳಗಾವಿ ಮಾಜಿ ಜಿಲ್ಲಾಧ್ಯಕ್ಷರಾದ ಮೋಹನ ಬಸನಗೌಡ ಪಾಟೀಲ ಅಭಿನಂದಿಸಿ ಶುಭ ಕೋರಿದ್ದಾರೆ.
ನೂತನವಾಗಿ ಆಯ್ಕೆಯಾದ ಉಪಾಧ್ಯಕ್ಷರಾದ ವೀರಭದ್ರಪ್ಪ ಕೋರೆ,ಕಾರ್ಯದರ್ಶಿ ದಾನಪ್ಪ ಗುದಗಪ್ಪನವರ,ಖಜಾಂಚಿ ಮಲ್ಲಪ್ಪ ಹೆಬ್ಬಳ್ಳಿ ಅವರಿಗೂ ಅಭಿನಂದಿಸಿದ್ದಾರೆ.
ನೂತನ ಪದಾಧಿಕಾರಿಗಳು ಮೂಡಲಗಿ ಘಟಕವನ್ನು ರಾಜ್ಯದಲ್ಲೇ ಮಾದರಿ ಘಟಕವನ್ನಾಗಿ
ಮಾಡುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ. ಬೆಂಗಳೂರು ಬಸವ ಸಮಿತಿ ಸದಾ ತಮ್ಮೊಂದಿಗೆ ಎಂದಿದ್ದಾರೆ.

