ಮೂಡಲಗಿ: ಮೂಡಲಗಿ ಶೈಕ್ಷಣಿಕ ವಲಯ ವರ್ಷಾರಂಭದಿಂದ ಇಲ್ಲಿಯವರೆಗೆ ರಾಷ್ಟ್ರ, ರಾಜ್ಯ ಹಾಗೂ ವಿವಿಧ ಹಂತಗಳಲ್ಲಿ ಪ್ರಗತಿ ಪಥದತ್ತ ಸಾಗಲು ಕಾರಣೀಕರ್ತರಾದ 23 ವರ್ಷಗಳಲ್ಲಿ ತಮ್ಮದೆಯಾದ ಕೊಡುಗೆ ನೀಡಿದ ಮಹನೀಯರ ಕರ್ತವ್ಯಗಳನ್ನು ಸ್ಮರಿಸಬೇಕು ಎಂದು ಅಭಿನಂದನಾ ಸಮಾರಂಭದಲ್ಲಿ ರಾಷ್ಟ್ರೀಯ ಪ್ರಶಸ್ತಿ ವಿಜೇತ ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ಹೇಳಿದರು.
ಅವರು ಶನಿವಾರ ಸಮೀಪದ ಮುನ್ಯಾಳ ಸರಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಜರುಗಿದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ಎರಡು ಸಲ ಮೂಡಲಗಿ ಶೈಕ್ಷಣಿಕ ವಲಯ ರಾಷ್ಟ್ರೀಯ ಪ್ರಶಸ್ತಿಗೆ ಭಾಜನವಾಗಿದೆ. ಪ್ರಮುಖವಾಗಿ ಅರಭಾವಿ ಶಾಸಕ ಕೆ.ಎಮ್.ಎಫ್ ನಿರ್ದೇಶಕ ಬಾಲಚಂದ್ರ ಜಾರಕಿಹೊಳಿಯವರ ಪಾತ್ರ ಮಹತ್ತರವಾಗಿದೆ. ಶಿಕ್ಷಣದ ವಿವಿಧ ಆಯಾಮಗಳಲ್ಲಿ ಪ್ರಮುಖವಾಗಿ ಕಾರ್ಯನಿರ್ವಹಿಸಲು ಕಾರಣ ಕರ್ತರಾಗಿದ್ದಾರೆ. ಶ್ಯಕ್ಷಣಿಕ ಮೂಲಭೂತ ಬೇಡಿಕೆಗಳನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಮಹತ್ತರ ಜವಾಬ್ದಾರಿವಹಿಸಿದ್ದಾರೆ.
ಶೈಕ್ಷಣಿಕವಾಗಿ ಪ್ರಗತಿಪಥದತ್ತ ಸಾಗಲು ಕ್ಷೇತ್ರ ಸಮನ್ವಯಾಧಿಕಾರಿಗಳು, ದೈಹಿಕ ಶಿಕ್ಷಣ ಪರಿವೀಕ್ಷಕರು, ಸಹಾಯಕ ನಿರ್ದೇಶಕರು ಅಕ್ಷರ ದಾಸೋಹ, ಶಿಕ್ಷಣ ಸಂಯೋಜಕರು, ಬಿಆರ್‍ಪಿ, ಸಿಆರ್‍ಪಿ, ಬಿಇಆರ್‍ಟಿ, ನೌಕರ ಸಂಘನೆಯ ಪದಾಧಿಕಾರಿಗಳು, ಕಛೇರಿ ಸಿಬ್ಬಂದಿಗಳ ಹಗಲಿರುಳು ಶ್ರಮದ ಫಲವಾಗಿದೆ. ಎಲ್ಲರ ಸಹಕಾರ ಸಹಾಯ ಮಹತ್ತರವಾಗಿದೆ ಎಂದರು.
ಗೋಕಾಕ ಬಿಇಒ ಗಜಬರ ಬಳಗಾರ ಕಾಗವಾಡ ಬಿಇಒ ಎಮ್ ಆರ್ ಮುಂಜಿ ಮಾತನಾಡಿ, 23 ವರ್ಷಗಳ ಹಿಂದೆ ಮೂಡಲಗಿ ಶೈಕ್ಷಣಿಕ ವಲಯವು ವಿವಿಧ ಶೈಕ್ಷಣಿಕ ಆಯಾಮಗಳಲ್ಲಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಮಿಂಚಲು ಕಾರಣರಾದವರನ್ನು ಗುರ್ತಿಸಿ ಅಭಿನಂದಿಸಿರುವದು ರಾಜ್ಯದಲ್ಲಿಯೇ ಅಷ್ಟೇ ಅಲ್ಲದೇ ರಾಷ್ಟ್ರದಲ್ಲಿಯೇ ಪ್ರಥಮಿಗರಾದ ಅಜಿತ ಮನ್ನಿಕೇರಿಯವರು ಬಹು ಮುಖ್ಯ ಪಾತ್ರವಹಿಸಿದ್ದಾರೆಂದರು.
ಅವರ ಕಠಿಣ ಶ್ರಮ ಹಾಗೂ ಪಾಲ್ಗೊಳ್ಳುವಿಕೆ ಪ್ರಮುಖ ಪಾತ್ರವಹಿಸಿದೆ ಎಂದು ಹೇಳಿದರು.
ನಿವೃತ್ತ ಅಧಿಕಾರಿಗಳಾದ ಎಲ್.ಐ ಕೊಳವಿ, ಎಸ.ಎ ನಾಡಗೌಡರ, ಎಮ್ ಡಿ ಬೇಗ್, ಅಶೋಕ ಬೆಣ್ಣಿ, ಹಾಲನ್ನವರ ಮಾತನಾಡಿ, ಶೈಕ್ಷಣಿಕ ಇಲಾಖಾ ಕಾರ್ಯವನ್ನು ಮೂಡಲಗಿ ಶೈಕ್ಷಣಿಕ ವಲಯದಲ್ಲಿ ಜಾರಿಗೊಳಿಸುವ ನಿಟ್ಟಿನಲ್ಲಿ ಸ್ಥಳೀಯರ ಪಾತ್ರದ ಕುರಿತು ವಿವರಿಸಿದರು.
ಎಸ್.ಎಮ್ ಲೋಕನ್ನವರ, ಎ.ಪಿ ಪರಸನ್ನವರ ಎ..ಬಿ ಮಲಬನ್ನವರ, ಕೆ.ಆರ್ ಅಜ್ಜಪ್ಪನವರ,ಆನಂದ ನಾಯ್ಕ ಮಾತನಾಡಿ ಮೂಡಲಗಿ ಶೈಕ್ಷಣಿಕ ವಲಯವು ರಾಜ್ಯ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳಲು ಗುಣಾತ್ಮಕ ಆಡಳಿತಗಾರ ಅಜಿತ ಮನ್ನಿಕೇರಿಯವರ ಕಾರ್ಯಚಟುವಟಿಕೆಗಳು ಮಹತ್ತರ ಪಾತ್ರವಹಿಸಿವೆ ಎಂದರು.
ಕಾರ್ಯಕ್ರಮದಲ್ಲಿ ಸುಭಾಸ ವಲ್ಯಾಪೂರ, ಲಕ್ಷ್ಮಣ ಬಡಕಲ,ಶಿಕ್ಷಣ ಸಂಯೋಜಕರಾದ ಟಿ. ಕರಿಬಸವರಾಜು, ಸತೀಶ ಬಿ.ಎಸ್, ಆರ್.ವಿ ಯರಗಟ್ಟಿ, ವಾಯ್ ಬಿ ಪಾಟೀಲ, ಜಿ.ಎಲ್ ಕೋಳಿ, ಎನ.ಬಿ ನಿಪ್ಪಾಣ , ರವಿ ಹೊಸಟ್ಟಿ, ಎಮ್.ಜಿ ಮಾವಿನಗಿಡದ, ಬಿ.ಬಿ ಕಿವಟಿ, ಬಿ.ಆರ್ ತರಕಾರ,ಅನಸೊಯಾ ಪಾಟೀಲ, ಅಸ್ಲಂ ಮಕಾನದಾರ, ಅನಂದ ನಾಯ್ಕ, , ಗೋವಿಂದ ಸಣ್ಣಕ್ಕಿ ಹಾಗೂ ಮೂಡಲಗಿ ಶೈಕ್ಷಣಿಕ ವಲಯ ಉತ್ತುಂಗಕ್ಕೆ ಏರಲು ಕಾರಣೀಕರ್ತರು ಶಾಲಾ ಸಿಬ್ಬಂದಿ ವರ್ಗದವರು ಹಾಜರಿದ್ದರು.