ಬೀದರ -ಕಾಂಗ್ರೆಸ್ ಸರ್ಕಾರಕ್ಕೆ ಅಂಹಕಾರ ಬಂದಿದೆ. ರಾಜ್ಯ ಪಶು ಸಂಗೋಪನಾ ಸಚಿವ ಮೆಂಟಲ್ ಆಗಿದ್ದಾರೆ ಎಂದು ಮಾಜಿ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಸರ್ಕಾರ ಗೋ ಹತ್ಯೆ ನಿಷೇಧ ಕಾಯ್ದೆ ತಿದ್ದುಪಡಿ ಮಾಡುವ ವಿಚಾರ ಹಾಗೂ ಗೋವಿನ ಕುರಿತಂತೆ ಸಚಿವ ವೆಂಕಟೇಶ ಅವರ ಹೇಳಿಕೆಯನ್ನು ವಿರೋಧಿಸಿ ಅವರು ಮಾತನಾಡಿದರು.
1964 ನಲ್ಲಿ ಕಾಂಗ್ರೆಸ್ ಸರ್ಕಾರದಲ್ಲೇ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಾಗಿದೆ. ಈಗಿನ ಪಶು ಸಂಗೋಪನೆ ಸಚಿವರು ಒಂದು ಸಮುದಾಯಕ್ಕೆ ಖುಷಿ ಪಡಿಸಲು ಹೇಳಿಕೆ ಕೊಡುತ್ತಿದ್ದಾರೆ. ಇದನ್ನು ಈಗಾಗಲೇ ರಾಜ್ಯದ ಹಲವು ಮಠಾಧೀಶರು ವಿರೋಧ ಮಾಡುತ್ತಿದ್ದಾರೆ. ಆದರೂ ಇವರಿಗೆ ಅದರ ಅರಿವಿಲ್ಲ ಎಂದರು.
ಗೋ ಹತ್ಯೆ ಕಾನೂನು ಹಿಂಪಡೆಯುವ ಮಾತನಾಡಲು ನಾಚಿಕೆ ಬರಬೇಕು. ರಾಜ್ಯದ ಏಳು ಕೋಟಿ ಜನರಿಗೆ ಅನ್ಯಾಯ ಆಗುತ್ತಿದೆ.
ಮಂತ್ರಿಗಳ ಹುಷಾರಾಗಿರಿ, ನಿಮಗೆ ಹೆಚ್ಚು ಅಹಂಕಾರ ಬಂದಿದೆ. ಮೊದಲು ನಿಮ್ಮ ಭರವಸೆಗಳು ಪೂರ್ಣ ಮಾಡಿ, ಏನ್ ಗ್ಯಾರಂಟಿ ಕೊಟ್ಟು ಅಧಿಕಾರಕ್ಕೆ ಬಂದಿದ್ದೀರಿ ಅದು ಪೂರ್ಣ ಗೊಳಿಸಿ ಎಂದು ಪಶು ಸಂಗೋಪನೆ ಸಚಿವ ಕೆ.ವೆಂಕಟೇಶ್ ಗೆ ಪ್ರಭು ಚವ್ಹಾಣ್ ಎಚ್ಚರಿಕೆ ನೀಡಿದರು.
ಗೋವನ್ನು ನಾವು ತಾಯಿ ಸಮಾನ ನೋಡುತ್ತೇವೆ. ನಂದಿಗೆ ನಾವು ಪೂಜೆ ಮಾಡುತ್ತೇವೆ, ಕಾನೂನು ಬದಲಾವಣೆಯಿಂದ ರೈತರಿಗೂ ಅನ್ಯಾಯ ಆಗುತ್ತಿದೆ. ಆದರೆ ನೀವು ಮಾಡಿದ್ದ ಕಾನೂನು ನಾವು ಮತ್ತಷ್ಟು ಬಿಗಿಗೊಳಿಸಿದ್ದೇವೆ. ವೆಂಕಟೇಶ್ ಅವರು ಪೂರ್ತಿ ಮೆಂಟಲ್ ಆಗಿದ್ದಾರೆ, ಅವರ ಖಾತೆಯನ್ನು ಮುಖ್ಯಮಂತ್ರಿಗಳು ಬದಲಾಯಿಸಬೇಕು ಎಂದು ಚವ್ಹಾಣ ಒತ್ತಾಯಿಸಿದರು.
ಗೋ ಹತ್ಯೆ ನಿಷೇಧ ಕಾಯ್ದೆ ಬದಲಾಯಿಸಿದರೇ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುತ್ತೇವೆ ಎಂದು ಅವರು ಎಚ್ಚರಿಕೆ ನೀಡಿದರು.
ವರದಿ: ನಂದಕುಮಾರ ಕರಂಜೆ, ಬೀದರ