ದೊಡವಾಡ(ಬೈಲಹೊಂಗಲ): ಮುಂಬರುವ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಘೋಷಣೆ ಮಾಡಿರುವ ಮೂರು ಪ್ರಮುಖ ಪ್ರಣಾಳಿಕೆಯ ಯೋಜನೆಗಳನ್ನು ಒಳಗೊಂಡಿರುವ “ಕಾಂಗ್ರೆಸ್ ಗ್ಯಾರಂಟಿ” ಕಾರ್ಡನ್ನು ಮನೆ ಮನೆಗೆ ತಲುಪಿಸಲು ಅಭಿಯಾನಕ್ಕೆ ಗ್ರಾಮದ ಸದ್ಗುರು ಶ್ರೀ ಸಿದ್ದಾರೂಢ ಸ್ವಾಮಿ ಮಠದಲ್ಲಿ ವಿಶೇಷ ಪೂಜೆ ಸಲ್ಲಿಸುವುದರ ಮೂಲಕ ಸೋಮವಾರದಂದು ಶಾಸಕರಾದ ಮಹಾಂತೇಶ ಕೌಜಲಗಿ ಅವರು ಚಾಲನೆ ನೀಡಿದರು.
ಗ್ರಾಮದ ಪ್ರತಿ ಮನೆ ಮನೆಗೆ ತೆರಳಿ ಕಾಂಗ್ರೆಸ್ ಪಕ್ಷದ ಪ್ರಮುಖ ಪ್ರಣಾಳಿಕೆಗಳು ಹಾಗೂ ಭರವಸೆಗಳಾದ ಗೃಹ ಜ್ಯೋತಿ, ಗೃಹಲಕ್ಷ್ಮಿ ಮತ್ತು ಅನ್ನ ಭಾಗ್ಯದ ಖಾತರಿ ಕಾರ್ಡ್‌ಗಳನ್ನು ವಿತರಿಸಿ ಮಾತನಾಡಿದ ಅವರು,ಬೆಲೆ ಏರಿಕೆ ಸಂಕಷ್ಟದಲ್ಲಿರುವ ಜನರಿಗೆ ನೆರವಾಗುವ ಉದ್ದೇಶದಿಂದ ಈ ಬಾರಿ ಮೂರು ಪ್ರಮುಖ ಪ್ರಣಾಳಿಕೆ ಹಾಗೂ ಭರವಸೆಗಳನ್ನು ನೀಡುತ್ತಿದ್ದೇವೆ.
ಕಾಂಗ್ರೆಸ್ ಪಕ್ಷ ನುಡಿದಂತೆ ನಡೆಯುವ ಪಕ್ಷ ಹಾಗಾಗಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಭ್ರಷ್ಟ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಿರಿ ಎಂದರು.
ಈ ಸಂದರ್ಭದಲ್ಲಿ ಮುಖಂಡರುಗಳಾದ ಬಸವರಾಜ ಅಂದಾನಶೆಟ್ಟಿ,ಸಂಕಪ್ಪ ಕೊರಕೊಪ್ಪ,ಮಂಜು ವಾಳಿ,ಶಿವಶಂಕರ ಅರಳಿಮರದ,ಈಶ್ವರ ತುಪ್ಪದ,ವಿಠಲ ಕಾಳಿ, ವಿಜಯ ಅಲಸಂದಿ ಸೇರಿದಂತೆ, ಪಕ್ಷದ ಕಾರ್ಯಕರ್ತರು,ಮಹಾಂತೇಶ ಕೌಜಲಗಿ ಅಭಿಮಾನಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ: ಗುರು ಅರಳಿಮರದ