ಹುಟ್ಟು ಹಬ್ಬದಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನ

Must Read

ಬೀದರ – ಬೀದರ್ ಜಿಲ್ಲೆಯ ಹುಮನಾಬಾದ ಮತ ಕ್ಷೇತ್ರ ಈಗ ಪಾಟೀಲ ಕುಟುಂಬದಲ್ಲಿ ಜಿದ್ದಾಜಿದ್ದಿ ಕ್ಷೇತ್ರ ಆಗಿದ್ದು ನಿನ್ನೆ ನಡೆದ ರಾಜಶೇಖರ ಪಾಟೀಲ ಕಾಂಗ್ರೆಸ್ ಶಾಸಕರ ಮಗ ಅಭಿಷೇಕ ಪಾಟೀಲ ಹುಟ್ಟು ಹಬ್ಬದ ಸಂದರ್ಭದಲ್ಲಿ ಕಾಂಗ್ರೆಸ್ ನ ಶಕ್ತಿ ಪ್ರದರ್ಶನ ನೀಡಿದರು.

ಹುಟ್ಟು ಹಬ್ಬದಲ್ಲಿ ಕಾಂಗ್ರೆಸ್ ಪಕ್ಷದ ಬೀದರ್ ಘಟಕದ ಎಲ್ಲಾ ನಾಯಕರು ವೇದಿಕೆ ಹಂಚಿ ಕೊಂಡಿದ್ದರು. ಎದುರಾಳಿ ಬಿಜೆಪಿ ಪಕ್ಷದ ಟಿಕೆಟ್‌ ಆಕಾಂಕ್ಷಿ ಸಿದ್ದು ಪಾಟೀಲ ಅವರಿಗೆ ನಡುಕ ಹುಟ್ಟಿಸಲು ಈ ವೇದಿಕೆ ಸಿದ್ದಪಡಿಸಿದಾರೆ ಎಂದು ಬೀದರ್ ಜಿಲ್ಲೆಯ ಜನರಲ್ಲಿ ಬಾರಿ ಚರ್ಚೆ ನಡೆಯುತ್ತಿದೆ ಎನ್ನಲಾಗಿದೆ.

ರಾಜಶೇಖರ ಪಾಟೀಲ ದೊಡ್ಡಪ್ಪನ ಮಗನಾದ ಸಿದ್ದು ಪಾಟೀಲ ಬಿಜೆಪಿ ಪಕ್ಷದ ಮುಂಬರುವ ವಿಧಾನ ಸಭಾ ಚುನಾವಣೆ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ರಾಜಶೇಖರ ಪಾಟೀಲ ವಿರುದ್ಧ ತೊಡೆ ತಟ್ಟಿ ನಿಂತಿರುವ ಸಿದ್ದು ಪಾಟೀಲ ಎಂದು ಹೇಳಬಹುದು ಹೀಗಾಗಿ ಪಾಟೀಲ ವರ್ಸಸ್ ಪಾಟೀಲ ಕುಟುಂಬದಲ್ಲಿ ಈಗ ಹುಮನಾಬಾದ ಕ್ಷೇತ್ರದಲ್ಲಿ ಜಿದ್ದಾಜಿದ್ದಿ ನಡೆಯುತ್ತಿದೆ. ಮುಂಬರುವ ವಿಧಾನ ಸಭಾ ಚುನಾವಣೆ ಹುಮನಾಬಾದ ಕ್ಷೇತ್ರದ ಜನರು ಯಾರ ಕೈಹಿಡಿದು ವಿಧಾನ ಸಭೆಗೆ ಕಳಿಸಿ ಕೊಡುತ್ತಾರೆ ಎಂಬುದು ಕಾದು ನೋಡಬೇಕು.


ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group