ಅಗ್ನಿ ಪಥ್ ಯೋಜನೆ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

Must Read

ಬೀದರ – ಕೇಂದ್ರ ಸರಕಾರದ ಅಗ್ನಿಪಥ್ ಯೋಜನೆ ಹಿಂಪಡೆಯಲು ಹಾಗೂ ಕೇಂದ್ರದಲ್ಲಿನ ಬಿಜೆಪಿ ಸರ್ಕಾರದ ಅವೈಜ್ಞಾನಿಕ ನೀತಿಗಳ ವಿರೋಧಿಸಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ನೇತೃತ್ವದಲ್ಲಿ ಭಾಲ್ಕಿ ತಾಲೂಕಿನ ಕಾಂಗ್ರೆಸ್ ಕಮಿಟಿ ಹಾಗೂ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ಮಾಡಿದರು.

ಅಗ್ನಿಪಥ ಯೋಜನೆ ರದ್ದುಪಡಿಸಿ ಪೂರ್ಣಾವಧಿಗೆ ಸೈನಿಕರನ್ನು ನೇಮಕ ಮಾಡಿಕೊಳ್ಳುವಂತೆ ಆಗ್ರಹಿಸಿ ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದವರು ಬೃಹತ್ ಪ್ರತಿಭಟನೆ ಯಾರ್ಲಿ ಮಾಡಿದರು.

ಕೆಪಿಸಿಸಿ ರಾಜ್ಯ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಪಟ್ಟಣದ ತಾಲೂಕು ಕಾಂಗ್ರೆಸ್ ಸಮಿತಿ ಕಚೇರಿ ಮುಂಭಾಗದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಅಂಬೇಡ್ಕರ್ ವೃತ್ತದಿಂದ ಸಾಗಿ ನಗರದ ಹೃದಯ ಭಾಗದಲ್ಲಿರುವ ಮಹಾತ್ಮ ಗಾಂಧಿ ವೃತ್ತಕ್ಕೆ ಬಂದು ತಲುಪಿತು.

ಮೆರವಣಿಯುದ್ದಕ್ಕೂ ನೂರಾರು ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ಕೊರಳ ಪಟ್ಟಿಗಳನ್ನು ಧರಿಸಿ, ಪಕ್ಷದ ಬಾವುಟಗಳನ್ನು ಪ್ರದರ್ಶಿಸಿ ಕೇಂದ್ರ ಸರಕಾರದ ಅಗ್ನಿಪಥ ವಿರುದ್ದ ಘೋಷಣೆಗಳನ್ನು ಕೂಗಿದರು.

Latest News

ಸತ್ಯ ಹೇಳಿದ ನಿತ್ಯ ಸ್ಮರಣೀಯ ಡಾ ಎಂ ಎಂ ಕಲಬುರ್ಗಿ ಗುರುಗಳು

ಕನ್ನಡ ಸಾರಸ್ವತಲೋಕದ ಬಹುದೊಡ್ಡ ಕೊಡುಗೆ, ಆಸ್ತಿ ವಿಮರ್ಶಕ ಸಂಶೋಧಕ ದೇಸಿ ಸಾಹಿತಿ ಚಿಂತಕ ಡಾ ಎಂ ಎಂ ಕಲಬುರ್ಗಿ ಸರ್ ಅವರು ಬದುಕಿನ ಕೊನೆವರೆಗೂ ಸತ್ಯಕ್ಕೆ...

More Articles Like This

error: Content is protected !!
Join WhatsApp Group