ಕೂಡ್ಲಿಗಿ : ಇದುವರೆಗೆ ನನಗೆ ತೊಂದರೆ ಕೊಟ್ಟ ಕಾಂಗ್ರೆಸ್ ೧೫ ವರ್ಷದ ಹಿಂದೆಯೆ ಅಧಿಕಾರ ಕಳೆದುಕೊಂಡಿದೆ. ಇನ್ನೂ ಮುಂದೆ ೫೦ ವರ್ಷಗಳಾದರೂ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವುದಿಲ್ಲ ಎಂದು ಗಂಗಾವತಿ ಶಾಸಕ ಗಾಲಿ ಜನಾರ್ಧನ ರೆಡ್ಡಿ ಹೇಳಿದರು.
ಕೂಡ್ಲಿಗಿಯಲ್ಲಿ ಎಸ್ಟಿ ಮೋರ್ಚಾ ರಾಜ್ಯಾಧ್ಯಕ್ಷರಾದ ಬಂಗಾರು ಹನುಮಂತ ಇವರ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಬಳ್ಳಾರಿ ಜಿಲ್ಲೆಗೆ ಸಾಕಷ್ಟು ಅಭಿವೃದ್ದಿ ಕೆಲಸಗಳನ್ನು ಮಾಡಿದ್ದೇನೆ. ಕಾಂಗ್ರೆಸ್ ಪಕ್ಷದವರಿಗೆ ಇಲ್ಲಿ ಒಂದು ಸೀಟೂ ಗೆಲ್ಲುವುದಕ್ಕೆ ಆಗಿಲ್ಲವೆಂದು ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡಿ ನನ್ನನ್ನು ಜೈಲಿಗೆ ಹಾಕಿಸಿರುವುದಲ್ಲದೆ ಜೀವನ ಪೂರ್ತಿ ನನಗೆ ಬಳ್ಳಾರಿಗೆ ಕಾಲಿಡಬಾರದಂತೆ ಮಾಡಿದರು ಆದರೆ ಬಳ್ಳಾರಿಯಿಂದ ತಾವೇ ನಾಶವಾಗಿ ಹೋದರು ಎಂದರು. ೧೪ ವರ್ಷಗಳ ನಂತರ ಬಳ್ಳಾರಿ ಜಿಲ್ಲೆಗೆ ಬರಲು ಸುಪ್ರೀಮ್ ಕೋರ್ಟ್ ನಿಂದ ನನಗೆ ಅನುಮತಿ ಸಿಕ್ಕಿದ್ದು ಖುಷಿ ತಂದ ವಿಚಾರವಾಗಿದೆ ಮತ್ತೆ ನನಗೆ ಜನರ ಸೇವೆ ಮಾಡುವುದಕ್ಕೆ ದೇವರ ಆಶೀರ್ವಾದದಿಂದ ಬಿಜೆಪಿ ಪಕ್ಷದಿಂದ ನನಗೆ ಅವಕಾಶ ಸಿಕ್ಕಿದೆ, 2028ಕ್ಕೆ ಬಿಜೆಪಿ ಪಕ್ಷವನ್ನ ಕಟ್ಟಿ ಬೆಳಿಸಿ ಬಿಜೆಪಿ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯುವುದಕ್ಕೆ ಶ್ರಮಿಸುತ್ತೇನೆ ಎಂದರು.
ವಾಲ್ಮೀಕಿ ನಿಗಮದಲ್ಲಿ ಹಗರಣ ಮಾಡಿ ಜೈಲಿನಲ್ಲಿರುವ ಶಾಸಕ ಬಿ ನಾಗೇಂದ್ರ ಇವರನ್ನ ನೋಡುವುದಕ್ಕೆ ಒಬ್ಬ ಕಾಂಗ್ರೆಸ್ ಮುಖಂಡರು ಹೋಗಿಲ್ಲ, ಅದೇ ಡಿಕೆ ಶಿವಕುಮಾರ್ ಜೈಲಿನಲ್ಲಿದ್ದಾಗ ಸೋನಿಯಾಗಾಂಧಿ, ಮನಮೋಹನ್ ಸಿಂಗ್ ರಾಹುಲ್ ಗಾಂಧಿ ಇವರು ಹೋಗಿ ಮಾತನಾಡಿಸಿ ಬರುತಿದ್ದರು ಎಂದು ಲೇವಡಿ ಮಾಡಿದ ರೆಡ್ಡಿ, ವಾಲ್ಮೀಕಿ ಹಗರಣದಲ್ಲಿ ಸಿಎಂ, ಡಿಸಿಎಂ. ಬಳ್ಳಾರಿ ಎಂ. ಪಿ ಈ ತುಕಾರಾಂ ಕೂಡ ಭಾಗಿಯಾಗಿ ಲೋಕಸಭಾ ಚುನಾವಣೆಯಲ್ಲಿ ಹಗರಣ ಮಾಡಿರುವ ಹಣವನ್ನ ದುರುಪಯೋಗ ಪಡಿಕೊಂಡಿದ್ದಾರೆ ಮುಂದಿನ ದಿನಗಳಲ್ಲಿ ಈ ತುಕಾರಾಂ ಇವರ ಸೀಟು ರದ್ದಾಗಿ ಅವರ ವಿರುದ್ಧ ಕಾನೂನು ಕ್ರಮ ಆಗುತ್ತದೆ,ಎಂದು ನುಡಿದರು.
ಈ ಸಂಧರ್ಭದಲ್ಲಿದ್ದ, ಎಸ್ಟಿ ಮೋರ್ಚಾ ರಾಜ್ಯಾಧ್ಯಕ್ಷರಾದ ಬಂಗಾರು ಹನುಮಂತು, ದಿವಾಕರ ನಾಯಕ, ಬಿಜೆಪಿ ಮಂಡಲದ ಅಧ್ಯಕ್ಷರಾದ ಕಾಮಶೆಟ್ಟಿ ನಾಗರಾಜ್, ಮಾಜಿ ಲೋಕಸಭಾ ಸದಸ್ಯ ವೈ. ದೇವೇಂದ್ರಪ್ಪ, ಸೂರ್ಯ ಪಾಪಣ್ಣ, ಹೊಂಬಾಳೆ ರೇವಣ್ಣ, ರಜನಿಕಾಂತ್, ಲೋಕಪ್ಪ,ಗುರಿಕಾರ ರಾಘವೇಂದ್ರ, ಗಿರೀಶ್, ಮಾರುತಿ, ಪವಿತ್ರ, ಕುಬೇರ,ಪ್ರಾಣೇಶ್ ಇತರರು ಇದ್ದರು.