ಚಿರತೆ ಸೆರೆ : ಸಿಂದಗಿ ಜನತೆ ನಿರಾಳ

Must Read

ಸಿಂದಗಿ: ಸೋಮಜ್ಯಾಳ ಗ್ರಾಮಸ್ಥರಲ್ಲಿ ಭಯದ ವಾತಾವರಣ ಸೃಷ್ಟಿ ಮಾಡಿದ್ದ ಚಿರತೆಯನ್ನು ಸಿಂದಗಿ ತಾಲೂಕು ಅರಣ್ಯ ಇಲಾಖೆಯ ಸಿಬ್ಬಂದಿಗಳು ಸೆರೆ ಹಿಡಿಯುವ  ಮೂಲಕ ಜನರನ್ನು ನಿರಾಳವಾಗುವಂತೆ ಮಾಡಿದ್ದಾರೆ.

ವಿಜಯಪುರ ಉಪಅರಣ್ಯ ಸಂರಕ್ಷಣಾಧಿಕಾರಿ ಶಿವಶರಣಯ್ಯ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಭಾಗ್ಯವಂತ ಮಸೂದಿ ಅವರ ಮಾರ್ಗದರ್ಶನದಲ್ಲಿ ಸಿಂದಗಿಯ ಪ್ರಾದೇಶಿಕ ಅರಣ್ಯ ವಲಯಾಧಿಕಾರಿ ರಾಜೀವ ಬಿರಾದಾರ ಅವರ ನೇತೃತ್ವದಲ್ಲಿ ಉಪ ವಲಯ ಅರಣ್ಯಾಧಿಕಾರಿ ಪ್ರಿಯಾಂಕ ನಗರ, ಎಸ್.ಎಸ್. ಬಿರಾದಾರ, ಸಿಬ್ಬಂದಿಗಳಾದ ವಿಠ್ಠಲ ಚನ್ನೂರ, ಶಿವಾನಂದ ಮದಗೊಂಡ, ಮುತ್ತಪ್ಪ ಕಂಟಿಕರ, ಬೀರೇಶ ರಾಜೋಳಿ ಹಾಗೂ ಗುರು ರಾಮಗಿಮಠ ಸಿಬ್ಬಂದಿಗಳ ಕಾರ್ಯಾಚರಣೆಯ ತಂಡ ಚಿರತೆಯನ್ನು ಸೆರೆ ಹಿಡಿದಿದೆ.

ಈ ಕಾರ್ಯಕ್ಕೆ ಗ್ರಾಮಸ್ಥರು ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಕಳೆದ ಬಾರಿ ಚಿರತೆ ಬಂದಿದೆ ಎನ್ನುವ ಗುಮಾನಿ ಎದ್ದಿತ್ತು ಒಂದು ತಿಂಗಳಿನಿಂದ ಶೋಧ ಕಾರ್ಯಾಚರಣೆಯಲ್ಲಿದ್ದೆವು ಇಂದು ಬೆಳಗಿನ ಜಾವ ಬೋನಿನ ಸಹಾಯದಿಂದ ಬಂಧಿಸಲಾಗಿದ್ದು ಬೆಳಗಾವಿಯ ಕಿತ್ತೂರ ರಾಣಿ ಚೆನ್ನಮ್ಮ ಮೃಗಾಲಯಕ್ಕೆ ರವಾನಿಸಲಾಗಿದೆ.

ರಾಜೀವ ಬಿರಾದಾರ ವಲಯ ಅರಣ್ಯ ಅಧಿಕಾರಿ ಸಿಂದಗಿ

Latest News

ಉಪ್ಪಾರ ಸಮಾಜ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕಾಗಿ ನೆರವು – ಬರಮಣ್ಣ ಉಪ್ಪಾರ

ಮೂಡಲಗಿ: ಉಪ್ಪಾರ ಸಮಾಜದ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಉನ್ನತ ವ್ಯಾಸಂಗಕ್ಕಾಗಿ ಉಪ್ಪಾರ ಅಭಿವೃದ್ಧಿ ನಿಗಮದಲ್ಲಿ ರೂ.೫ ಕೋಟಿ ಹಣವಿದೆ ಸಮಾಜದ ವಿದ್ಯಾರ್ಥಿಗಳು ಅದನ್ನು ಸದ್ಬಳಕೆ ಮಾಡಿಕೊಂಡು ಸಾಧನೆ...

More Articles Like This

error: Content is protected !!
Join WhatsApp Group