ಸಿಂದಗಿ: ಭಾರತದ ದೇಶದಲ್ಲಿ ಡಾ,ಬಾಬಾಸಾಹೇಬ ಅಂಬೇಡ್ಕರವರು ಹುಟ್ಟದೆ ಇದ್ದರೆ ಇವತ್ತು ಸಂವಿಧಾನ ಬರೆಯದೆ ಇದ್ದರೆ ನಾವು ನೀವು ಇಲ್ಲಿ ಈ ಕಾರ್ಯಕ್ರಮದಲ್ಲಿ ಕೂಡಲು ಸಾಧ್ಯವಿರುತ್ತಿರಲಿಲ್ಲ ಇವತ್ತು ನಾವು ನೀವು ಇಲ್ಲಿ ಸೇರಲು ಕಾರಣವೇ ಸಂವಿಧಾನ ಅದೇ ರೀತಿ ಉಸಿರಾಡಲಿಕೆ ನೀರು ಕುಡಿಯುವುದಕ್ಕೆ ಊಟ ಮಾಡಲಿಕ್ಕೆ ಒಳ್ಳೆ ಒಳ್ಳೆ ಬಟ್ಟೆ ತೊಡಲು ಮಾತ್ರವಲ್ಲದೆ ಇಂದು ನಮ್ಮ ಮಕ್ಕಳು ಉನ್ನತವಾದ ಹುದ್ದೆಗೆ ಏರಲು ಅನುಕೂಲವಾಗಿದ್ದೆ ಇದ್ದರೆ ಅದುವೇ ಈ ಭಾರತದ ಸಂವಿಧಾನದಿಂದ ಎಂದು ಟಿಪ್ಪುಕ್ರಾಂತಿಯ ರಾಜ್ಯಪ್ರಧಾನ ಕಾರ್ಯದರ್ಶಿ ಡಾ. ದಸ್ತಗೀರ ಮುಲ್ಲಾ ಹೇಳಿದರು.
ಪಟ್ಟಣದ ಸಂಗಮ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾದ ಸಂವಿಧಾನ ಸಮರ್ಪಣೆ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಈ ನೆಲದಲ್ಲಿ ಹುಟ್ಟಿದಂತ ಪ್ರತಿಯೊಬ್ಬ ಹೆಣ್ಣು ಮಕ್ಕಳು ತಿಳಿದುಕೂಳ್ಳಲೇಬೇಕು ಸಂವಿಧಾನ ಅಂದರೆ ಏನು, ಸಂವಿಧಾನ ಯಾಕೆ ಬರೆದರು ಸಂವಿಧಾನದಲ್ಲಿ ಏನಿದೆ ಅನ್ನುವದು ತಿಳಿದುಕೊಳ್ಳದೆ ಇರುವವರು ಈ ಭೂಮಿ ಮೇಲೆ ಇದ್ದೂ ಸತ್ತಂತೆ. ಆದ್ದರಿಂದ ಪ್ರತಿಯೊಬ್ಬರು ಸಂವಿಧಾನವನ್ನು ತಿಳಿದುಕೊಳ್ಳಿ ತಿಳಿಯದಿದ್ದರೆ ನಿಮ್ಮ ಮಕ್ಕಳಿಂದ ಅಥವಾ ಸಂಗಮ ಸಂಸ್ಥೆಯ ವತಿಯಿಂದ ತಿಳಿದುಕೊಳ್ಳಿ ಎಂದು ತಿಳಿಸಿದರು.
ಸಂಗಮ ಸಂಸ್ಥೆಯ ನಿರ್ದೇಶಕರಾದ ಫಾದರ್ ಸಂತೋಷ ಮಾತನಾಡಿ, ಸಂವಿಧಾನ ನಮ್ಮ ಭಾರತಕ್ಕೆ ಕೊಡುಗೆ ಕೊಟ್ಟಿರುವುದು ಇವತ್ತಿಗೆ 71 ವರ್ಷ ಕಳೆದು ಹೋಗಿದೆ ಇಂದು ಸಂವಿಧಾನ ಓದುವುದು ಮಾತ್ರ ಅಲ್ಲಾ ಪ್ರತಿ ಒಬ್ಬರ ಮನಸಲ್ಲಿ ಇರಬೇಕು ಭಾರತದ ಪ್ರಜೆಗಳಾದ ನಾವು ಅಂದರೆ ಎಲ್ಲಾ ಜಾತಿ ಧರ್ಮಗಳು ಒಳಗೂಂಡಿರುವುದು ಸರಕಾರದ ನೀತಿಯನ್ನು ಒಪ್ಪುವರು ಅದೆ ರೀತಿ ವಿರೋಧಿಸುವವರು ಇವರು ಕೂಡಾ ನಮ್ಮ ಭಾರತೀಯರು.
ಕೇಳಿದರೆ ಯಾವುದೇ ಪ್ರಯೋಜನ ವಾಗುತ್ತಿಲ್ಲ ಕೇಳುವವರನ್ನೆ ನೀವು ಭಾರತ ಬಿಟ್ಟು ಬೇರೆ ದೇಶಕ್ಕೆ ಹೋಗಿ ಎನ್ನುವವರು ಕೂಡಾ ನಮ್ಮವರೆ ಇದರಿಂದ ತಪ್ಪು ಇದ್ದರೂ ಕೂಡಾ ಜನ ಮೌನ ತಾಳಿರುತ್ತಾರೆ ಆದರೆ ಯಾರೆ ಏನೆ ಅನ್ನಲಿ ನಾವು ಮಾತ್ರ ಸಂವಿಧಾನವನ್ನು ಗೌರವಿಸಬೇಕು ಅದೇ ರೀತಿ ಪ್ರತಿಯೊಬ್ಬರು ಭಾರತದ ಸಂವಿಧಾನವನ್ನು ಗೌರವಿಸಬೇಕು ಎಂದರು.
ಈ ಸಂದರ್ಭದಲ್ಲಿ ಸಂಗಮ ಸಂಸ್ಥೆಯ ಸಹ ನಿರ್ದೇಶಕಿ ಸಿಸ್ಟರ್ ಸಿಂತಿಯಾ ಡಿ ಮೆಲ್ಲೋ ಇವರು ಪ್ರಾಸ್ತಾವಿಕ ವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಹಿಳಾ ಸಂಘದ ಸದಸ್ಯರು ಕಟ್ಟಡ ಕಾರ್ಮಿಕರು ವಿಶೇಷ ಚೇತನರು ನರೇಗಾದಲ್ಲಿ ಕೆಲಸ ಮಾಡುವವರೆಲ್ಲರು ಉಪಸ್ಥಿತರಿದ್ದರು.
ವಿಜಯ ಬಂಟನೂರ ಇವರು ನಿರೂಪಿಸಿದರು. ಮಲಕಪ್ಪ ಎಸ್ ಹಲಗಿ ಸ್ವಾಗತಿಸಿದರು. ಬಸವರಾಜ ಬಿಸನಾಳ ವಂದಿಸಿದರು.