ಪ್ರಸಾದ ಸೇವಿಸುವುದರಲ್ಲಿ ಮಹತ್ವವಿದೆ – ಶ್ರೀಶೈಲಗೌಡ

Must Read

ಸಿಂದಗಿ: ಪ್ರತಿ ಮನೆಯಲ್ಲಿ ಮಾಡಿದ ಅಡುಗೆಯಲ್ಲಿ ಕುಟುಂಬ ಜೊತೆಗೂಡಿ ಊಟ ಮಾಡುತ್ತೇವೆ ಆದರೆ ದೇವರ ಹೆಸರಿನಲ್ಲಿ ಮಾಡುವ ಅಡುಗೆ ಮಹಾಪ್ರಸಾದವಾಗುತ್ತದೆ ಪ್ರಸಾದ ಸೇವಿಸುವದರಲ್ಲಿ ಬಹಳ ಮಹತ್ವವಿದೆ ಎಂದು ಬಿಜೆಪಿ ಮುಖಂಡ ಶ್ರೀಶೈಲ್‍ಗೌಡ ಮಾಗಲಗೇರಿ ಹೇಳಿದರು.

ಪಟ್ಟಣದ ಎಪಿಎಂಸಿ ಆವರಣದಲ್ಲಿ ಇರುವ ಅಯ್ಯಪ್ಪ ಮಾಲಾಧಾರಿಗಳು ಪ್ರಸಾದ ಸೇವೆಯಲ್ಲಿ ಭಾಗವಹಿಸಿ ಮಾತನಾಡಿದರು ಇಂದಿನ ದಿನಮಾನಗಳಲ್ಲಿ ನಾವುಗಳು ಪ್ರಸಾದ ಮಹತ್ವದ ಬಗ್ಗೆ ಅರಿತಿದ್ದೇವೆಯೇ ಎಂದು ಕೇಳಿದರು.

ಬಳಿಕ ವರ್ತಕರಾದ ಗುರುಪ್ರಸಾದ್ ಕಾಮತ್ ಮಾತನಾಡಿ ಅಯ್ಯಪ್ಪ ಸ್ವಾಮಿಯ ವೃತವು ಬಹಳ ಕಠಿಣ ಆದರೆ ವರವು ಅಷ್ಟೇ ಸುಲಭ ಎಷ್ಟೇ ಆಚಾರ ವಿಚಾರದಿಂದ ಮಾಲಾಧಾರಿಗಳು ಅಯ್ಯಪ್ಪ ಸ್ವಾಮಿಯ ಸೇವೆಯನ್ನು ಮಾಡುತ್ತಾರೆ ಕಟ್ಟುನಿಟ್ಟಾದ ವೃತವನ್ನು ಆಚರಿಸುತ್ತಾರೋ ಅಷ್ಟು ಪುಣ್ಯ ದೊರೆಯುವುದರಲ್ಲಿ ಸಂದೇಹವಿಲ್ಲ ಎಂದರು. 

ಇದೇ ಸಂದರ್ಭದಲ್ಲಿ ಕಿರಣ್ ಗುರುಸ್ವಾಮಿ ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಜನ ಮಾಲಾಧಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮದ ನಂತರ ಎಲ್ಲ ಮಾಲಾಧಾರಿಗಳಿಗೂ ಸೇರಿದೆ ಭಕ್ತಾದಿಗಳಿಗೆ ಗುರುಪ್ರಸಾದ್ ಕಾಮತ್ ಇವರಿಂದ ಅನ್ನಪ್ರಸಾದ ಸೇವೆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಪ್ರಕಾಶ್ ಲೋಣಿ, ಡಾ. ಪ್ರಶಾಂತ್ ಬಮ್ಮಣ್ಣಿ, ಅಣ್ಣಾವ್ರ ಜಂಬಿಗಿ, ಮಲ್ಲು ವಾರದ್, ಮಲ್ಲಿಕಾರ್ಜುನ್ ಮಲ್ಲೇದ್, ಚಂದ್ರಶೇಖರ್ ನಾಗರಬೆಟ್ಟ, ರವಿಗೌಡ್ ಬಿರಾದಾರ್, ಶಾತಪ್ಪಣ್ಣ ಮೇತ್ರಿ, ಶ್ರೀಪಾದ್ ಮಲ್ಲಿ ಗಂಗಾಧರ್ ಕಿಣಗಿ ಸೇರಿದಂತೆ ಪತ್ರಕರ್ತ ವಿಜಯಕುಮಾರ್ ಪತ್ತಾರ ಭಾಗವಹಿಸಿದ್ದರು

Latest News

ಎಸ್ ಎಸ್ ಎಲ್ ಸಿ, ಪರೀಕ್ಷೆಯಲ್ಲಿ ಅತ್ಯುನ್ನತ ಅಂಕ ಗಳಿಸಲು ಸಲಹೆ ನೀಡಿದ ಕಿರಣ ಗಣಾಚಾರಿ

ಬೆಳಗಾವಿ: ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಗಳು ಜೀವನದ ಅತ್ಯಂತ ಮಹತ್ವದ ಘಟ್ಟಗಳು ಎನಿಸಿಕೊಂಡಿವೆ. ಈ ನಿಟ್ಟಿನಲ್ಲಿ ಶ್ರೇಷ್ಠ ಮಟ್ಟದ ಓದಿನಲ್ಲಿ ತೊಡಗಿಸಿಕೊಂಡು...

More Articles Like This

error: Content is protected !!
Join WhatsApp Group