ಹುಬ್ಬಳ್ಳಿ – ಮತಾಂತರ ಅನ್ನೋದು ಸಮಾಜಕ್ಕೆ ಒಳ್ಳೆಯದಲ್ಲ. ಅದಕ್ಕೆ ಒಳಗಾಗಬಾರದು. ಮನೆತನ, ಕುಟುಂಬಕ್ಕೆ ಬಹಳ ದೊಡ್ಡ ಕಷ್ಟ ಆಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಹುಬ್ಬಳ್ಳಿಯ ತಮ್ಮ ನಿವಾಸದಲ್ಲಿ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿ, ನಾಳೆ ಬೆಳಗಾವಿ ಅಧಿವೇಶನ ನಡೆಯುತ್ತಿದೆ. 2 ವರ್ಷದ ನಂತರ ನಡೆಯುತ್ತಿದೆ, ಎಲ್ಲ ತಯಾರಿ ಮಾಡಿದ್ದೇವೆ. ಅಧಿವೇಶನದಲ್ಲಿ ಅಭಿವೃದ್ಧಿ ಪರವಾಗಿ, ಅರ್ಥಪೂರ್ಣವಾಗಿ ಚರ್ಚೆ ಆಗಬೇಕು. ಸಮಗ್ರ ಅಭಿವೃದ್ಧಿ ಗೆ ಚರ್ಚೆಗೆ ನಾವು ಸ್ವಾಗತ ಮಾಡುತ್ತೇವೆ ಎಂದರು.
ಮತಾಂತರ ಕಾಯ್ದೆ ವಿಚಾರ ಹಿನ್ನೆಲೆಯಲ್ಲಿ ಸ್ಪಷ್ಟ ಹೇಳಿಕೆ ನೀಡಿದ ಅವರು, ನಾನು ಅವರಿಗೆ ಸ್ಪಷ್ಟವಾಗಿ ಹೇಳಿದ್ದೇನೆ.ಕ್ರಿಶ್ಚಿಯನ್, ಮುಸ್ಲಿಂ, ಬೌದ್ಧ, ಸಿಖ್ ಧರ್ಮದವರು ಯಾರೂ ಆತಂಕ ಪಡಬಾರದು. ಇವೆಲ್ಲ ಸಂವಿಧಾನಾತ್ಮಕವಾಗಿ ಇರುವ ಧರ್ಮಗಳು. ಅವರಿಗೆ, ಆ ಜನಾಂಗಕ್ಕೆ ಯಾವುದೇ ಆತಂಕ ಬೇಡ. ಅವರ ಪ್ರಾರ್ಥನೆ, ಅವರ ನಂಬಿಕೆಗೆ ಯಾವುದೇ ಆತಂಕ ಉಂಟಾಗುವುದಿಲ್ಲ. ಬಡತನಕ್ಕೆ, ಆಸೆ ಆಮಿಷಕ್ಕೆ ಮತಾಂತರ ಆಗೋದು ತಪ್ಪು ಎಂದು ಹೇಳಿ, ಮತಾಂತರದ ಬಗ್ಗೆ ಬಹಳ ದೊಡ್ಡ ಚರ್ಚೆ ಆಗಿದೆ, ಕಾನೂನು ಇಲಾಖೆ ಆ ಬಗ್ಗೆ ಪರಿಶೀಲನೆ ಮಾಡುತ್ತಿದೆ. ಬೇರೆ ಬೇರೆ ರಾಜ್ಯಗಳಲ್ಲಿ ಈ ಬಗ್ಗೆ ಕಾನೂನು ಆಗಿದೆ. ಈ ಬಗ್ಗೆ ಕಾನೂನು ಇಲಾಖೆ ಪರಿಶೀಲನೆ ಮಾಡಿ, ಕ್ಯಾಬಿನೆಟ್ ಗೆ ಬರುತ್ತದೆ.
ಕರಡಿಗೆ ಒಪ್ಪಿಗೆ ಕೊಟ್ಟು, ಅದನ್ನ ನಾವು ಅಧಿವೇಶನದಲ್ಲಿ ತರ್ತೀವಿ. ಆ ಎಲ್ಲ ಹಿನ್ನೆಲೆಯಲ್ಲಿ ಕಾನೂನು ತರಲು ನಮ್ಮ ಸರ್ಕಾರ ಪ್ರಯತ್ನ ಮಾಡುತ್ತಿದೆ ಎಂದರು.
ಪ್ರಧಾನಿ ಮೋದಿಯವರ ಟ್ವಿಟರ್ ಖಾತೆ ಹ್ಯಾಕ್ ವಿಚಾರ ಮಾತನಾಡಿದ ಬೊಮ್ಮಾಯಿಯವರು, ಈಗಾಗಲೇ ಪ್ರಧಾನಿ ರಿಯಾಕ್ಟ್ ಮಾಡಿದ್ದಾರೆ. ಅದರ ವಿರುದ್ಧ ಕಾರ್ಯಾಚರಣೆ ಸಹ ಮಾಡಿದ್ದಾರೆ. ಆ ರೀತಿ ಅಲ್ಲಲ್ಲಿ ಘಟನೆಗಳು ಆಗಿವೆ.ತಾಂತ್ರಿಕ ಬಲದಿಂದ ಅವುಗಳನ್ನ ರಕ್ಷಣೆ ಮಾಡೋ ಕೆಲಸ ಮಾಡ್ತೇವೆ.ಜಿನೊನ್ ಲ್ಯಾಬ್ ಗಳ ಸಂಖ್ಯೆಯಲ್ಲಿ ಹೆಚ್ಚಿಗೆ ಮಾಡಲು ನಿರ್ಧಾರ ಮಾಡಿದ್ದೇವೆ ಎಂದು ನುಡಿದರು.