- Advertisement -
ಕರೋನಾ ಚುಟುಕು
ಏನ ಗಂಟಬಿದ್ದಿ ನಮ್ಮ ಬೆನ್ನ
ಮಾನವ ಕುಲಕ್ಕಾದಿ ನೀ ಹುಣ್ಣ
ಲೋಕಕ್ಕ ಗೊತ್ತಾಗೈತ್ತಿ ನಿನ್ನ ಬಣ್ಣ
ನಿನ್ನ ಮಣ್ಣ ಮುಚ್ಚಿ ಉಂತಿವಿ ಗಿಣ್ಣ
ಕರೋನಾ ಏನ ನಿನ್ನ ಅಲೆ
ಜನಾ ಕಳಕೊಂಡಿದ್ದಾರೆ ನೆಲೆ
ಏನು ನಿನ್ನ ಮಾಯದ ಬಲೆ
ಯಾರಿಗೂ ತಿಳಿದಿಲ್ಲ ನಿನ್ನ ಕಲೆ
ಚೀನಾ ದೇಶದ ಚಿನ್ನಾರಿ
ಭಾರತದಲ್ಲಿ ಆಡಾಕತ್ತಿದಿ ಲಗೋರಿ
ಜನಾ ನೋಡವಲ್ಲರ ನಿನ್ನ ಮಾರಿ
ಆದ್ರೂ ಒಂದಿನ ಕಟ್ಟತ್ತಿವಿ ನಿನ್ನ
ಗೋರಿ
- Advertisement -
ಆಕಾಶದಲ್ಲಿ ಹಕ್ಕಿಗಳ ಸಾಲು
ಭೂಮಿಯಲ್ಲಿ ಇರುವೆಗಳ
ಸಾಲು
ದವಾಖಾನೆಗಳ ಮುಂದೆ ಅಂಬ್ಶಲೆನ್ಸಗಳ ಸಾಲು
ಸ್ಮಶಾನದಲ್ಲಿ ಹೆಣಗಳ ಸಾಲು
ಕರೋನಾ ಯಾರ ಕೊಟ್ಟರ ನಿನಗ ಜನ್ಮ
ಜನ್ಮ ಕೊಟ್ಟವರಿಗೆ ತಿಳದಿಲ್ಲ ನಿನ್ನ ಮರ್ಮ
ಎಂಥಾದ ಇರಬೇಕ ಅಂತಿನಿ ನಮ್ಮ ಕರ್ಮ
ನಮ್ಮ ಕೈಯಾಗ ಸಿಕ್ಕರ ಸುಲಿತ್ತೀವಿ ನಿನ್ನ ಚರ್ಮ.
ಬಸವರಾಜ ಕೋಟಿ, ಶಿಕ್ಷಕರು ಕುಲಗೋಡ