ಅಪರಾಧ ತಡೆ ಮಾಸಾಚರಣೆ

Must Read

ಸಿಂದಗಿ: ಯುವಜನತೆ ಅಪರಾಧಕ್ಕೆ ಗುರಿಯಾದರೆ ದೇಶಕ್ಕೆ ಮಾರಕ, ಯುವ ಜನತೆ ಅಪರಾಧ ನಡೆಯುವುದು ಕಂಡು ಬಂದರೆ ಪೊಲೀಸರಿಗೆ ಸಹಕರಿಸಬೇಕು. ಅಪರಾಧ ಕಂಡಲ್ಲಿ 112 ಪೊಲೀಸ್ ಸಹಾಯವಾಣಿಯ ಉಪಯೋಗ ಪಡೆದುಕೊಳ್ಳಬೇಕು ಎಂದು ಪಿಎಸೈ ಸೋಮೇಶ ಗೆಜ್ಜಿ ಕರೆ ನೀಡಿದರು.

ಪಟ್ಟಣದ ಪ.ವಿ.ವ. ಸಂಸ್ಥೆಯ ಆರ್.ಡಿ.ಪಾಟೀಲ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಪೊಲೀಸ್ ಇಲಾಖೆಯಿಂದ ಹಮ್ಮಿಕೊಂಡ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ವಿದ್ಯಾರ್ಥಿಗಳಿಗೆ ಬಾಲ್ಯದಲ್ಲಿಯೇ ಶಿಕ್ಷಣದೊಂದಿಗೆ ಅಪರಾಧ ತಡೆಯ ಬಗ್ಗೆ ಅರಿವು  ಹಾಗೂ ಜಾಗೃತಿ ಮೂಡಿಸುವುದು ಅತ್ಯಗತ್ಯ ಬದುಕಿನ ಭದ್ರತೆಗೆ ಎಲ್ಲರೂ ಪೊಲೀಸರನ್ನು ಅವಲಂಬಿತರಾಗುವುದಕ್ಕಿಂತ, ಸ್ವತಃ ತಾವೇ ಪೊಲೀಸರಂತೆ ಎಚ್ಚರವಹಿಸುವುದು ಇಂದಿನ ಕಾಲದಲ್ಲಿ ಅತೀ ಅಗತ್ಯ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯ ವಿಮಲಕಾಂತ ಪಾಟೀಲ ವಹಿಸಿದ್ದರು.  ಉಪನ್ಯಾಸಕ ಎನ್.ಬಿ.ಪೂಜಾರಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಹಿರಿಯ ಉಪನ್ಯಾಸಕರಾದ ಬಿ.ಎಂ.ಸಿಂಗನಳ್ಳಿ, ಪಿ.ವ್ಹಿ.ಮಹಲಿನಮಠ, ಪಿ.ಎಸ್.ಸರನಾಡಗೌಡ, ಎಸ್.ಎಚ್.ಜಾಧವ, ಶಿವಶರಣ ಬೂದಿಹಾಳ, ಬಿ.ಬಿ.ಜಮಾದಾರ, ಎಂ.ಐ.ಮುಜಾವರ, ವ್ಹಿ.ಕೆ.ಹಿರೇಮಠ, ರಾಜೇಶ್ವರಿ ಗಾಣಗೇರ್, ಎಸ್.ಎಸ್.ತಾಳಿಕೋಟಿ, ಸುಭಾಸ ಹೊಸಮನಿ, ಸುನೀಲ ಪಾಟೀಲ, ಪ್ರಸನ್ ಜೋಗೂರ, ರಾಹುಲ ನಾರಾಯಣಕರ, ಗವಿಸಿದ್ದಪ್ಪ ಆನೆಗುಂದಿ, ಎಸ್.ಜಿ.ಮಾರ್ಸನಳ್ಳಿ, ಸಿ.ಜೆ.ರಾಠೋಡ,  ಸೇರಿದಂತೆ ಇನ್ನಿತರರು ಇದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group