ಸಿಂದಗಿ; ಕುಟುಂಬದಲ್ಲಿ ಸತಿ ಪತಿಗಳು ಭಕ್ತಿ ಭಾವದಿಂದ ಸುಂದರ ಜೀವನ ನಡೆಸುವ ಮೂಲಕ ಧಾನ ಧರ್ಮ ಪರೋಪಕಾರದಲ್ಲಿ ಭಾಗವಹಿಸುವ ಮುಖಾಂತರ ಗುರು ಹಿರಿಯರು ಹಾಕಿ ಕೊಟ್ಟಿರುವ ಸನ್ಮಾರ್ಗದಲ್ಲಿ ನಡೆಯಬೇಕು ಎಂದು ಅಡವಿ ಲಿಂಗ ಶ್ರೀಗಳು ಹೇಳಿದರು.
ತಾಲೂಕಿನ ಬಂದಾಳ ಗ್ರಾಮದ ಬನ್ನಿ ಮಂಟಪದ ಹತ್ತಿರ ಇರುವ ಶ್ರೀ ಹುಡೇದ ಲಕ್ಷ್ಮೀ ದೇವಾಲಯದಲ್ಲಿ ಅವರು ಹಮ್ಮಿಕೊಂಡಿರುವ ವಿಶ್ವ ಶಾಂತಿಗಾಗಿ ಲೋಕ ಕಲ್ಯಾಣಕ್ಕೋಸ್ಕರ ಇಷ್ಟಲಿಂಗ ಪೂಜಾ ಹಾಗೂ ಮಹಾ ಕೋಟಿ ಜಪಯಜ್ಞ ಕಾರ್ಯಕ್ರಮದ ಪೂರ್ವ ಸಿದ್ದತಾ ಸಭೆಯ ಸಾನ್ನಿಧ್ಯವಹಿಸಿ ಅವರು ಮಾತನಾಡಿ, ಶ್ರೀ ಶಿವಯೋಗೇಶ್ವರ ಮಹಾ ಸ್ವಾಮೀಜಿಯವರಿಂದ 10-10-1968 ರಿಂದ 23-04-1970 ರವರಿಗೆ ಅನುಷ್ಠಾನವು ಅಂದಿನ ಕಾರ್ಯಕ್ರಮದಲ್ಲಿ ಪೂ ಶ್ರೀ ಲಿಂ ಬಂಥನಾಳದ ಸಂಗನಬಸವ ಶ್ರೀಗಳು ಹಾಗೂ ವಿಜಯಪುರದ ಜ್ಞಾನಯೋಗಾಶ್ರಮದ ಶ್ರೀ ಮಲ್ಲಿಕಾರ್ಜುನ ಮಹಾ ಸ್ವಾಮಿಗಳು ಇರ್ವರು ಆಗಮಿಸಿದ್ದರು. ಆ ಕಾರ್ಯಕ್ರಮದ ಸವಿ ನೆನಪಿಗಾಗಿ ಸುವರ್ಣ ಮಹೋತ್ಸವದ ಅಂಗವಾಗಿ ಕಾರ್ಯಕ್ರಮಗಳು ನೆರವೇರುತ್ತಿವೆ.
ಬೆಳಿಗ್ಗೆ 5 ಗಂಟೆಯಿಂದ ಬೆಳಗ್ಗೆ 9 ಗಂಟೆವರೆಗೆ ಇಷ್ಟಲಿಂಗ ಪೂಜಾ ಹಾಗೂ 18 ಕೋಟಿ ಜಪಯಜ್ಞ ನೇರವೇರುತ್ತದೆ. ಆ ಕಾರ್ಯಕ್ರಮವು ಇಂಡಿ ತಾಲೂಕಿನ ಬೆನಕನಹಳ್ಳಿ ಗ್ರಾಮದ ಶ್ರೀ ರಾಮಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ಎಪ್ರಿಲ್ 2 ರಿಂದ 21 ರವರೆಗೆ ಬಂಥನಾಳದ ಶ್ರೀ ಸಂಗನಬಸವೇಶ್ವರ ಮಹಾಪುರಾಣ ಜರುಗುತ್ತದೆ ಆದ್ದರಿಂದ ಗ್ರಾಮದ ಸರ್ವ ಭಕ್ತರು ಭಾಗವಹಿಸಬೇಕು ಎಂದರು.
ನ್ಯಾಯವಾದಿ ಸಂಗನಗೌಡ ಪಾಟೀಲ ಮಾತನಾಡಿ, ನಮ್ಮ ನಾಡಿನ ಸರ್ವ ಭಕ್ತರು ಭಾಗವಹಿಸಿ ತನು ಮನ ಧನ ನೀಡುವ ಮೂಲಕ 18 ಕೋಟಿ ಇಷ್ಟಲಿಂಗ ಪೂಜಾ ಜಪಯಜ್ಞ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ವಿನಂತಿ ಮಾಡಿಕೊಂಡರು. ಸಿದ್ದಯ್ಯ ಸ್ವಾಮಿಗಳು. ಶಿವಲಿಂಗಯ್ಯ ಶಾಸ್ತ್ರಿಗಳು. ತಾಲೂಕಾ ಜಂಗಮ ಸಂಘದ ಅಧ್ಯಕ್ಷ ಶಂಕರಲಿಂಗಯ್ಯ ಹಿರೇಮಠ ಇದ್ದರು.
ನಿಂಗನಗೌಡ ಬಿರಾದಾರ ಸ್ವಾಗತಿಸಿ ವಂದಿಸಿದರು.