ದಿ. 7 ರಂದು ಯಾದವಾಡದಲ್ಲಿ ಸಂಭ್ರಮದ ಸಾಂಸ್ಕೃತಿಕ ಹಬ್ಬ

Must Read

ಮೂಡಲಗಿ: – ತಾಲೂಕಿನ ಯಾದವಾಡ ಗ್ರಾಮದಲ್ಲಿ ಪ್ರತಿವರ್ಷ ರಾಜ್ಯೋತ್ಸವದ ನಿಮಿತ್ತವಾಗಿ ನವೆಂಬರ್ ತಿಂಗಳಲ್ಲಿ ನಾಡು ನುಡಿಯ ರಕ್ಷಣೆ ಜಾಗೃತಿ ಮೂಡಿಸುವ “ನಮ್ಮ ಕರ್ನಾಟಕ ರಕ್ಷಣಾ ವೇದಿಕೆ” ವತಿಯಿಂದ “ಯಾದವಾಡ ಸಾಂಸ್ಕೃತಿಕ ಉತ್ಸವ” ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ ಎಂದು ನಮ್ಮ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಸಂಚಾಲಕರಾದ ಕಲ್ಮೇಶ ಗಾಣಿಗಿ ಹೇಳಿದರು.

ಅದೆ ರೀತಿಯಾಗಿ ಯಾದವಾಡದಲ್ಲಿ ಡಿಸೆಂಬರ್ 07-2024 ರಂದು ಅದ್ಧೂರಿಯಾಗಿ ಪ್ರಸಿದ್ಧ ಧಾರವಾಹಿ, ಸಿನಿಮಾ ನಟ, ನಟಿಯರು, ಹಾಸ್ಯ ಕಲಾವಿದರು ಮತ್ತು ಇನ್ನು ಅನೇಕ ಕಲಾವಿದರನ್ನು ಪ್ರತಿವರ್ಷವೂ ಕರೆಸಿಕೊಂಡು ಅತೀ ವಿಜೃಂಭಣೆಯಿಂದ ಕಾರ್ಯಕ್ರಮ ಆಚರಿಸುತ್ತೇವೆ. ಅದೆ ರೀತಿಯಾಗಿ ಈ ಬಾರಿ ಕೂಡಾ ಕಾರ್ಯಕ್ರಮ ನಡೆಯಲಿದೆ ಅಂತ ಹೇಳಿದರು.

ಅದೆ ದಿನ “ರಾಷ್ಟ ಮಟ್ಟದ ನೃತ್ಯ ಸ್ಪರ್ಧೆ” ಹಮ್ಮಿಕೊಳ್ಳಲಾಗಿದೆ ಮತ್ತು ಬಹುಮಾನಗಳು ಪ್ರಥಮ-35ಸಾವಿರ, ತೃತೀಯ-30ಸಾವಿರ, ಚತುರ್ಥ-20 ಸಾವಿರ, ಪಂಚಮ(ಐದು)15 ಸಾವಿರ, ಷಷ್ಠಿ (ಆರು)10 ಸಾವಿರ, ಸಪ್ತಮ(ಏಳು)7ಸಾವಿರ, ಅಷ್ಟಮ (ಎಂಟನೆ)5ಸಾವಿರ ಸ್ಪರ್ಧೆಯಲ್ಲಿ ಗೆದ್ದವರಿಗೆ ನಗದು ಬಹುಮಾನ ಕೊಡಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ, ರಾಜ್ಯ ಸಭಾ ಸದಸ್ಯರು ಈರಣ್ಣ ಕಡಾಡಿ, ರಾಯಬಾಗ. ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷರು ಪ್ರತಾಪರಾವ್ ಪಾಟೀಲ, ಮಾಜಿ ಸಂಸದರು ರಮೇಶ ಕತ್ತಿ, ಯುವ ನಾಯಕರುಗಳಾದ ಮೃಣಾಲ ಹೆಬ್ಬಾಳ್ಕರ, ಚಿದಾನಂದ ಸವದಿ ಮತ್ತು ರಾಹುಲ್ ಜಾರಕಿಹೊಳಿಯವರು ಕಾರ್ಯಕ್ರಮದಲ್ಲಿ ಭಾಗಿಯಾಗಲ್ಲಿದ್ದಾರೆಂದು ನಮ್ಮ ಕರ್ನಾಟಕ ರಕ್ಷಣಾ ವೇದಿಕೆಯ ಸಂಘಟಕರು ತಿಳಿಸಿದರು.

ಹೆಚ್ಚಿನ ಮಾಹಿತಿಗಾಗಿ-9901774988-9008316143- 9739483248- 9538573484 ಸಂಪರ್ಕಿಸಬಹುದೆಂದು ಹೇಳಿದ್ದಾರೆ.

Latest News

ಎಲ್ಲಾ ಜಿಲ್ಲೆಗಳ ಯುವ ಸಾಧಕರಿಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರಾಜ್ಯ ಯುವ ಪ್ರಶಸ್ತಿ ಪ್ರದಾನ  

ಮೂಡಲಗಿ:-ತಾಲೂಕಿನ ಹಳ್ಳೂರ ಗ್ರಾಮದಲ್ಲಿ ರಾಜ್ಯದ ೩೧ ಜಿಲ್ಲೆಯ "ಯುವ ಸಾಧಕರಿಗೆ ಪ್ರಶಸ್ತಿ" ಪ್ರದಾನ ಸಮಾರಂಭ ಕಾರ್ಯಕ್ರಮ ದಿ. 26 ಹಾಗೂ 27 ರಂದು ಜರುಗುವುದು.ಕರ್ನಾಟಕ ರಾಜ್ಯ...

More Articles Like This

error: Content is protected !!
Join WhatsApp Group