ಸಿಂದಗಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ತೈಲ ಬೆಲೆ ಏರಿಕೆ ಮಾಡುತ್ತಿರುವ ಜನವಿರೋಧಿ ನೀತಿಯನ್ನು ಖಂಡಿಸಿ ಸಿಂದಗಿ ಬ್ಲಾಕ್ ಕಾಂಗ್ರೆಸ ಸಮಿತಿ ವತಿಯಿಂದ ಸೈಕಲ್ ರ್ಯಾಲಿಯನ್ನು ನಡೆಸಿದರು.
ರ್ಯಾಲಿಗೆ ಚಾಲನೆ ನೀಡಿದ ಜಿಲ್ಲಾ ವೀಕ್ಷಕ ಹಾಗೂ ರಾಜಸಭಾ ಸದಸ್ಯ ನಾಸೀರ ಹುಸೇನ ಅವರು ಮಾತನಾಡಿ, ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರ ತೈಲ ಬೆಲೆ ಏರಿಕೆ ನೀತಿ ಕೇವಲ ಪೇಟ್ರೊಲ್, ಡಿಸೇಲ್ ಮಾತ್ರವಲ್ಲದೆ ಜನಸಾಮಾನ್ಯರಿಗೆ ಅಗತ್ಯವಿರುವ ದಿನ ನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದಲ್ಲಿ ನರಕಯಾತನೆ ಅನುಭವಿಸುತ್ತಿರುವದರಿಂದ ಈ ನೀತಿಯನ್ನು ಖಂಡಿಸಿ ಕಾಂಗ್ರೆಸ ಪಕ್ಷದಿಂದ ಇಡಿ ರಾಜ್ಯಾದಂತ ಸೈಕಲ್ ಜಾಥಾ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಬೆಲೆ ಏರಿಕೆಯ ಸಂದೇಶ ಮುಟ್ಟಿಸುತ್ತಿದ್ದೇವೆ. ಶೀಘ್ರದಲ್ಲಿ ತೈಲ ಬೆಲೆ ಇಳಿಕೆ ಮಾಡದಿದ್ದರೆ. ಮುಂಬರುವ ದಿನಗಳಲ್ಲಿ ದೇಶ್ಯಾದ್ಯಂತ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವದು ಎಂದು ಎಚ್ಚರಿಕೆ ನೀಡಿದರು.
ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಿಠ್ಠಲ ಕೊಳ್ಳೂರ ಮಾತನಾಡಿ, ಕೇಂದ್ರ ಸರಕಾರ ದೇಶದಲ್ಲಿ ಅಧಿಕಾರ ಚುಕ್ಕಾಣಿ ಹಿಡಿದಾಗಿನಿಂದ ರೈತರು ಹಾಗೂ ಕೂಲಿಕಾರ್ಮಿಕರಿಗೆ ಹೊರೆಯಾಗುವಂತ ಸೌಲಭ್ಯಗಳನ್ನು ನೀಡುತ್ತ ಆಗೆ ಅಚ್ಚೆದಿನ್ ಆಯೇಗಾ ಆಗೆ ಬಡೋ ಎಂದು ಜನರಿಗೆ ಮಂಕುಬೂದಿ ಎರಚುತ್ತ ಕಾಣದ ರೀತಿಯಲ್ಲಿ ದಿನ ಬಳಕೆ ವಸ್ತುಗಳ ಬೆಲೆ ಗಗನಕ್ಕೇರುವ ಹಾಗೆ ಮಾಡುತ್ತಿದೆ ಇದರಿಂದ ಜನರಿಗೆ ಬೆಲೆ ಏರಿಕೆ ಗೊತ್ತಾಗದ ರೀತಿಯಲ್ಲಿ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುತ್ತಿದೆ ಇಂತಹ ಸರಕಾರ ಜನ ವಿರೋಧಿ ಕೇಂದ್ರ ಸರ್ಕಾರಕ್ಕೆ ಧಿಕ್ಕಾರವನ್ನು ಕೂಗುತ್ತಾ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ನಂತರ ಪೆಟ್ರೋಲ್ ಮತ್ತು ಡಿಸೆಲ್ ಬೆಲೆ ಏರಿಕೆಯಾಗಿದೆ ಹೊರತು ಇಳಿಕೆಯಾಗಿಲ್ಲ ಇದನ್ನು ಸಾಮಾನ್ಯ ಜನರಿಗೆ ಅರಿವು ಮೂಡಿಸಲು ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಉಪ ಚುನಾವಣೆ ಅಭ್ಯರ್ಥಿ ಅಶೋಕ ಮನಗೂಳಿ ಮಾತನಾಡಿ, ಮಹಾಮಾರಿ ಕೊರೋನಾ ಹಿನ್ನೆಲೆಯಲ್ಲಿ ಇಡೀ ದೇಶದಲ್ಲಿ ಜನರು ಸಂಕಷ್ಟದಲ್ಲಿರುವಾಗ ಅವರ ಹೊಟ್ಟೆ ಮೇಲೆ ಬರೆ ಎಳೆದ ಹಾಗೆ ಭಾರತ ದೇಶದ ಇತಿಹಾಸದಲ್ಲಿ ಹಿಂದೆಂದೂ ಕಾಣದ ಡಿಸೇಲ್ ಮತ್ತು ಪೆಟ್ರೋಲ್ ಬೆಲೆಯನ್ನು ದಿನ ನಿತ್ಯ ಏರಿಸುತ್ತಿರುವದು ಸಾರ್ವಜನಿಕರಿಗೆ ಬಹಳ ತೊಂದರೆಯಾಗಿರುತ್ತದೆ. ಆದ್ದರಿಂದ ಬಡವರ, ಕಾರ್ಮಿಕರ, ರೈತರ, ಸಣ್ಣ ಉದ್ಯಮಿಗಳ ವಿರೋಧಿಯಾಗಿರುವ ರಾಜ್ಯ ಮತ್ತು ಕೇಂದ್ರ ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಲು ಮತದಾರರು ತಕ್ಕ ಪಾಠ ಕಲಿಸಲು ಸನ್ನದ್ಧ ರಾಗಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಶರಣಪ್ಪ ಸುಣಗಾರ, ಮಲ್ಲಣ್ಣ ಸಾಲಿ, ಯೋಗಪ್ಪಗೌಡ ಪಾಟೀಲ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರ ತೈಲ ಬೆಲೆ ಏರಿಕೆ ಖಂಡಿಸಿ ಮಾತನಾಡಿದರು.
ಎಪಿಎಂಸಿ ಅಧ್ಯಕ್ಷ ಗೊಲ್ಲಾಳಪ್ಪಗೌಡ ರೂಗಿ, ಶರಣಪ್ಪ ವಾರದ, ಪಿಎಲ್‍ಡಿ ಬ್ಯಾಂಕ ಅಧ್ಯಕ್ಷ ಶಿವು ಹತ್ತಿ, ಅಶೋಕ ಗಾಯಕವಾಡ ವಕೀಲರು, ಪುರಸಭೆ ಉಪಾಧ್ಯಕ್ಷ ಹಾಸಿಂ ಆಳಂದ, ಬ್ಲಾಕ್ ಮಹಿಳಾ ಘಟಕ ಅಧ್ಯಕ್ಷೆ ಶಾರದಾ ಬಟಗೇರಿ, ಯುವ ಅಧ್ಯಕ್ಷ ಇರ್ಪಾನ ಆಳಂದ, ಸಂತೋಷ ಹರನಾಳ, ಅಯುಬ ದೇವರಮನಿ, ನಿಂಗಣ್ಣ ಛಟ್ಟಿ, ಎಮ್ ಕೆ ಬಿರಾದಾರ, ಅಮೀತ ಚವ್ಹಾಣ, ರಮೇಶ ನಡುವಿನಕೇರಿ, ಸಲಿಂ ಕಣ್ಣಿ, ಪರಶುರಾಮ ಕಾಂಬಳೆ, ಪುಂಡಲೀಕ ಕನ್ನೊಳ್ಳಿ, ಸಿದ್ದು ಹಂಡರಗಲ್ಲ, ವಿಜಯಕುಮಾರ ಎಸ್ ಕುರಿಮನಿ ಸೇರಿದಂತೆ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.